ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಉಳಿಯುಮೇಶ್ವರ, 117 ನೋಡುವ. ಅಟ್ಟಿದಡೆ ಮುಟ್ಟಿದಡೆ ತಟ್ಟಿದಡೆ ಒತ್ತಿದಡೆ ನಿಷ್ಟೆಯ ಬಿಡದಿರ್ದಡೆ ತನ್ನ ನೀವ ಮಹಾಲಿಂಗಕಲ್ಲೇಶ್ವರ.

                         24 ಮಹಾಲಿಂಗಗಜೇಶ್ವರ.
ಒಲಿದವರ ಕೊಲುವಡೆ ಮಸೆದ ಕೂಲಗೇಕೆ? ಅವರನೊಲ್ಲೆನೆಂದಡೆ  ಸಾಲದೆ? ಮಹಾಲಿಂಗಗಜೇಶ್ವರನ ಶರಣರನಗಲಿದಡೆ ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ.
                                        25 ಮಹಾಲಿಂಗತ್ರಿಪುರಾಂತಕದೇವ.
ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣಿನ ಸಿರಿಯ ಸಂತೋಷದ ಕರಿತುರಗರಧಪದಾತಿಯ ನೆರವಿಯ ಸತಿಸುತರ ಬಂಧುಗಳ ಸಮೂಹದ ನಿನ್ನ ಕುಲದಭಿ ಮಾನದ ಗರ್ವವ ಬಿಡು. ಮರುಳಾಗದಿರು. ಅಕಟಕಟ ! ರೋಮಜನಿಂದ ಹಿರಿ ಯನೆ ? ಮದನನಿಂ ಚೆಲುವನೆ ? ಸುರಪತಿಯಿಂದ ಸಂಪನ್ನನೆ ! ವಾಮದೇವವಸಿಷ್ಠ ರಿಂದ ಕುಲಜನೆ ? ಅಂತಕನ ದೂತರು ಬಂದು ಕೈವಿಡಿದೆದೊಯ್ವಾಗ ನುಡಿ ತಡ ವಿಲ್ಲ ಕೇಳೊ ನರನೆ. ಎನ್ನ ಮಹಾಲಿಂಗತ್ರಿಪುರಾಂಶಕದೇವರ ಪೂಜಿಸಿದೆಯಾದಡೆ ಕೇಡಿಲ್ಳದ   ಪದ ದೊರೆಕೊಂಬುದು ಮರುಳೆ.
                                                26 ಸದಾಶಿವಮೂರ್ತಿಲಿಂಗ.
ಅಂಗದಾಪ್ಯಾಯನವ  ಆತ್ಮನಹರಿವಂತೆ, ಆತ್ಮನ ಸುಖದುಃಖವ  ಅಂಗ ತಾಳು ವಂತೆ, ಅಂಗಕ್ಕು ಆತ್ಮಕ್ಕು ಅನ್ಯ ಭಿನ್ನವಿಲ್ಲ. ಪೂಜಿಸುವ ಭಕ್ತನು ಪೂಜಿಸಿಕೊಂಬಾ ವಸ್ತು ಈ ಉಭೆಯವು ಸದಾಶಿವಮೂತಿ೯ಲಿಂಗವು ತಾನೆ ತಾನೆ.
                                              27 ಸಿದ್ದ ಸೋಮೇಶ್ವರಲಿಂಗ.
ಶಿವನ ನೆನೆದಡೆ ಭವಹರವಹುದೆಂಬ ವಿವರಗೇಡಿಗಳ ಮಾತ ಕೇಳಲಾಗದು. ಅದೇನುಕಾರಣವೆಂದಡೆ--ಜ್ಯೋತಿಯ ನೆನೆದಡೆ ಕತ್ತಲೆ ಹರೆವುದೆ ? ಮೃಶ್ಟಾನ್ನವನೆನೆದಡೆ ಹೊಟ್ಟೆ ತುಂಬುವುದೆ ? ರಂಭೆಯ ನೆನೆದಡೆ ಕಾಮದ ಕಳವಳವು ಹಿಂಗುವುದೆ ? ನೆನೆದಡಾಗದು. ನಿರ್ಧರಿಸಿ ದ್ವಯಕುಳವದು ಬೆರಸಬಲ್ಲಡೆ ಸದ್ಗುರು ಸಿದ್ದ ಸೋಮೇ ಶ್ವರಲಿಂಗವು ತಾನೆ.
                                                       28 ಉಳಿಯುಮೇಶ್ವರ.
(1) ಅಸ್ಟಿ ಚರ್ಮಮಾಂಸರಕ್ತಖಂಡದ ಚೀಲ ಲೆಕ್ಕಕ್ಕೆ ಬರುವುದೆ ? ಹುರು ೪ಲ್ಲ ಸಂಸಾರ. ಎಂದಿಗೆ ನಾನೀ ಹೊತ್ತ ಹೋಯನಿದಿಹುವೆನೋ ? ಎಂದಿಗೆ