ಈ ಪುಟವನ್ನು ಪರಿಶೀಲಿಸಲಾಗಿದೆ
118 ಕರ್ಣಾಟಕ ಕವಿಚರಿತೆ. [15 ನೆಯ ನಾನಿದ ಬಳಸಿ ಕಳೆವೆನಯ್ಯಾ. ಎಡಹಿ ಕೊಡನುದಕವ ನಡುನೀರಲ್ಲೊಡೆವಂತೆ ಎನ್ನೊ ಡಲೊಡೆದು ನಿಮ್ಮ ನೆಂದಿಗೆ ಬೆರಸುವೆನು ಉಳಿಯುಮೇಶ್ವರ.
(೨) ಭವಪಾಶಬಂಧದಿಂ ಬಿಗಿದು ಕವಿತೆಯ ಹುಲಿಯ | ಗವಿಯೊಳಗೆ ಕಟ್ಟಿದಂತಾದೆ ಸಂಸಾರವೆಂ | ಬವಿಚಾರಸರ್ಪ ಸರ್ವಗ್ರಾಸಗೊಂಡುದಿದನೊಮ್ಮೆ ಪರಿಹರಿಸಿನಿಮ್ಮ|| ಅವಿರಳಶ್ರೀಪಾದದೊಳು ಮಗ್ನನಾಗಿ ಮ | ವಿಕಲ್ಪಸಮಸುಖಾನಂದದೊಳಗಂದಿಹೆನೊ |
ಭವರಹಿತ ಪರಮೇಶ ಪಾಲಿಸೈ - ರುವೆ ಉಳಿಯುಮೇಶ್ವರಲಿಂಗವೇ||
29 ಶಂಭುಜಕ್ಕೇಶ್ವರ. (1) ಏಕೆನ್ನ ಬಾರದ ಭವಂಗಳಲ್ಲಿ ಬರಿಸಿದೆ ? ಏಕೆನ್ನ ಘೋರಸಂಸಾರದಲ್ಲಿರಿ ಸಿದೆ? ಏಕೆನಗೆ ಕರುಣಿಸಲೊಲ್ಲದೆ ಕಾಡಿಹೆ ಕೇಳಾ. ಹೇಡಾ ಏನ್ನ ಲಿಂಗವೆ ನಾ ಮಾಡಿದ ತಪ್ಪೇನು.ಸಾಕಲಾದುದೆಂದು ಅತ್ತೊತ್ತಿ ನುಡಿದಡೆ ಏಕ ನಾ ನಿಮ್ಮ ಬಿಡುವೆ ಶಂಭು ಜಕ್ಕೇಶ್ವರ.
(2) ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ ಮನದಿಚ್ಛೆಯನವ ಸಖಿಯರಿಲ್ಲ. ಮನ್ಮಧವೈರಿಯನುಭಾವದಲ್ಲಿ ಮನ ಸಿಲುಕಿ ಬಿಡದು, ಇನ್ನೇವೆನಿ ನ್ನೀವೆ. ದಿನ ವೃಧಾ ಹೋಯಿತು ಯವ್ವನ ಬೀಸರವೋಗದಮುನ್ನ ಪಿನಾಕಿಯ ತಂದು ನೆರಹವ್ವಾ ಶಂಭುಜಕ್ಕೇಶ್ವರನ.
30 ಕಾಮಭೀಮಜೀವದನದೊಡೆಯ. ದೊಡ್ಡ ವೆರಡು ಕಂಬದ ಮಧ್ಯದಲ್ಲಿ ಚಿಕ್ಕ ವೆರಡು ಕಂಬ ; ಇಂತೀನಾಲ್ಕ ಮಧ್ಯದ ಮನೆ, ಅಸ್ಥಿಯಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶೋಣಿತದ ಸಾರಣೆ, ಶುಕ್ಲದ ಕಂಬದಿಂದಲಿಪ್ಪು ದೊಂದು ಚಿತ್ರದ ಮನೆ ನೋಡಾ. ಆ ಮನೆಗೆ ಒಂಬತ್ತು ಬಾಗಿಲು, ಈಡೆಸಿಂಗಳೆಯೆಂಬ ಗಾಳಿಯ ಬಾದಳ, ಮೃದುಕರಿನವೆಂಬೆರಡಗುಂಟಿಯ ಭೇದವು ನೋಡಾ. ಇತ್ತಲೆ ಯ ಮೇಲಿಪ್ಪ ಸುಷುಮ್ನ ನಾಳವ ಮುಚ್ಚಿ ದಿವಾರಾತ್ರವೆಂಬ ಮಡಿವಲಿವಿನ ಉಭ ಯದ ಕದ ಕೆತ್ತು ಮನೆ ನಷ್ಟವಾಗಿ ಹೋದಡೆಯೂಮನೆಯೊಡೆಯ ಮತ್ತೊಂದು ಮನೆಗೆ ಹೋಹುದು ತಪ್ಪದು ನೋಡಾ. ಇಂತೀ ಮನೆಗೆ ಮರಳಿ ಬಾರದಂತೆ ಮಾಡ
ಯ್ಯಾ| ಕಾಮಭೀಮಜೀವದನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.