ಈ ಪುಟವನ್ನು ಪರಿಶೀಲಿಸಲಾಗಿದೆ
119 ಶತಮಾನ! ಕಾಮಧೂಮಧೂಳೇಶ್ವರ.
31 ಗುರುಸಿದ್ದ ಮಲ್ಲ. "ಇಲ್ಲದ ಕುತ್ತವ ಕೊಂಡು ಬಲ್ಲವರ ಬಾಯ ಹೊಗಹೋದರೆ ಬಲ್ಲಬಲ್ಲರೆಲ್ಲಾ ಅಲ್ಲತ್ತಗೊಳುತಿದ್ದರು. ಇದೆಲ್ಲಿಯ ಕುತ್ತವೆಂದು ತಿಳಿದು ವಿಚಾರಿಸಲು ಅದಲ್ಲಿಯೆ ಬಯಲಾಯಿತ್ತು ಗುರುಸಿದ್ದ ಮಲ್ಲ. 32 ನಾರಾಯಣಪ್ರಿಯರಾಮನಾಥ.
(1) ತನ್ನ ಮ ನೆದೊಡೆ ಜಗವೆಲ್ಲವು ತನ್ನ ಸುತ್ತಿದ ಮಾಯೆ, ತನ್ನ ನಹಿ ದೊಡೆ ತನ್ಮಯ ಅನ್ಯ ಭಿನ್ನವಿಲ್ಲ; ಪ್ರತಿಬಿಂಬದ ಹಾಹೆ ನಾರಾಯಣಪ್ರಿಯರಾಮ ನಾಧ.
(2) ಡಂಬಕದ ಪೂಜೆ ಹೋಹ ಹೊತ್ತಿನ ಕೇಡು; ಆಡಂಬರದ ಪೂಜೆ ತಾ ಮ್ರದ ಮೇಲಣ ಸುವರ್ಣ ಚ್ಛಾಯೆ; ಇಂತೀಪೂಜೆಗೆ ಹಾಸೊಪ್ಪವನಿಕ್ಕಿ ಮನಹೂಸಿ ಮಾಡುವ ಪೂಜೆ ಬೇರು ನೆನೆಯದ ನೀರು, ಆಯವಿಲ್ಲದ ಘಾಯ, ಭಾವ ಎಲ್ಲದ ಘಟ ವಾಯುವೆಂದೆ ನಾರಾಯಣಪ್ರಿಯರಾಮನಾಧ.
33 ಮಾರೇಶ್ವರ. ವೇದವ ಕಲಿತಲ್ಲಿ ಪಾರಕನಲ್ಲದೆ ಜ್ಞಾನಿಯಲ್ಲ, ಶಾಸ್ತ್ರ ಪುರಾಣವನೋದಿದಲ್ಲಿ ಪಂಡಿತನಲ್ಲದೆ ಜ್ಞಾನಿಯಲ್ಲಿ , ವೃತನೇಮಕೃತ್ಯ ಪೂಜಕನಾದಡೇನು ? ದಿವ್ಯಜ್ಞಾನದ ರಾವನಯಿಯಬೇಕು, ಈ ಭೇದಂಗಳನಲಿದು ತಿಳಿದಲ್ಲಿ ಮನ ಸಂದಿತ್ತು ಮಾರೇ
ಶ್ವರ.
34 ಕಾಮಧೂಮಧೂಳೇಶ್ವರ. (1) ಕುಂಭಫಟಕ್ಕೆ ಒಳಗೂ ಒಯಲು ಹೋಯಿಗೂ ಬಯಲು; ಮಾಯಿ ತಾ ನೋಡುವಲ್ಲಿಯೂ ಬಯಲು.ಕ್ಲಶೋಣಿತದಿಂದಾದ ಘಟಕ್ಕೆ ಬಯಲೆಂಬುದಕೆ ತೆಲಿ ಸಿಲ್ಲ ಚೇತನಕೊಳಗಾಗಿದ್ದು ದಾಗಿ. ಪೃಥಿ ಪೃಥ್ವಿಯ ಕೂಡುವನ್ನೆವರ, ವಾಯು ವಾಯುವ ಕೂಡುವನ್ನೆ ವರ, ತೇಜ ತೇಜವ ಕೂಡುವನ್ನೆ ವರ, ವಾಯು ವಾಯುವ ಕೂಡುವನ್ನೆ ವರ, ಆಕಾಶವಾಕಾಶವ ಕೂಡುವನ್ನೆ ವರ, ಷಂಚತತ್ವಂಗಳೂ ತತ್ವ ವನೈದಿದಲ್ಲಿ, ಆತ್ಮಂಗೆ ಬಂಧಮೋಕ್ಷವೆಂಬ ಅಂದವಾವುದೂ ಇಲ್ಲ. ಉಂಟೆಂಬುದೂ ತನ್ನಿಂದ, ಇಲ್ಲೆಂಬುದೂ ತನ್ನಿಂದ; ಅನ್ಯವಾಗಿ ತೋ ವ ತೋರಿಕೆ ಇಲ್ಲಿ ಸ್ತಾಣು ಚೋರಕನಂತೆ, ರಜ್ಜು ಸರ್ಪನಂತೆ, ತಿಳಿದು ನೋಡಲಿಕೆ ಮತ್ತೇನೂ ಇಲ್ಲ ಕಾವ್ಯ ಧೂಮಧೂಳೇಶ್ವರ,