ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

124 ಕರ್ಣಾಟಕ ಕವಿಚರಿತೆ,

ಕಳೆಯ ಲಿಂಗದೊಳೊಚ್ಚ | ತವನೊಪ್ಪಗೊಳಿಸಿದಾ | ಕರುಣಿ ಗುರು ಪುರದಮಲ್ಲಯ್ಯಗುರುವೇ ||

54 ಸದ್ಗುರು ಶಂಭುಸೋಮೇಶ್ವರ. ಶಿವನೆ ಅಧಿಕನು ಶಿವಭಕ್ತನೆ ಕುಲಜನು ಶಿವನ ಪ್ರಸಾದದಿಂದಧಿಕವಾವುದಿಲ್ಲೆಂ. ದುದು ಶ್ರುತಿ, ಇದನಯತು ಸದ್ಗುರುಶಾಂಭುಸೊಮೆಶ್ವರನ ಭಜಿಸಿ ಪ್ರಸಾದವ ಸೇವನೆಯ ಮಾಡದಿರಲು ಅಘೋರನರಕ ತಪ್ಪದು 55 ಸಂಗಪ್ರಭು. ಒಡೆಯರಿಗೊಡವೆಯನೊಪ್ಪಿಸಿ ಶುದ್ದನು | ಎಡೆಯೊಳಗಾಮಾಡಿದುದಿಲ್ಲೆಂದಂ | ದೊಡಲವಗುಣವಡಗಿಸಿ ನಿರಹಂಭಾವದೊಳಗೆ ಸಲೆ ಸಂದು || ಮೃಡಶರಣರುಗಳ ಕಂಡವರಡಿಗಳ | ಹಿಡಿದು ಸದಾಸುಖಿಯಾಗಿರ್ಪರ ಮೆ | ಇಡಿಗಳೊಳಗೆ ಹಾವುಗೆಯಾಗಿರಿಸೆನ್ನನು ಸಂಗಪ್ರಭುವೇ || 56 ಹಂಪೆಯ ವಿರುಪಯ್ಯ, ದಶದಿಕ್ಕು ಸಚರಾಚರದೊಳಗೆಲ್ಲ ವಿವರಿಸಿ ನೋಡಲು ತನ್ನ ಯ, ಆಪರಾಪರ ಹಂಪೆಯವಿರುಪಯ್ಯನಲ್ಲದಿಲ್ಲವೆಂದು ಶ್ರುತಿ ಸಾಲಿ೦ತಿವೆ. 57 ಹುಲಿಗೆರೆಯ ವರದಸೋಮೇಶ ಮಾಯಾಸಂಗ್ರಹಮಲವ ತೊಳೆದು ನಿರ್ಮಾಯಸ್ವರೂಪವನೆಸಿ ಕಾವುದು ಹುಲಿಗೆಳಯ ವರದಸೋಮೇಶನ ಅಕ್ಷಯಾನಂದಪಾದೋದಕ, 58 ರೇಕನಾಥಯ್ಯ. ಸತ್ತು ಸಂಯೋಗದಿಂದೆ ಭಕ್ತಿರತಿಯ ಕೂಡಲು ಸಮತೆಯೆಂಬ ಬಸುಕಾಗೆಲು ಪರಿಣಾಮವೆಂಬ ಮಗ ಹುಟ್ಟಲು ರೇಕನಾಧಯ್ಯನೆಂದು ಹೆಸರಿಟ್ಟರು. 59 ಘನಗುರುಪ್ರಿಯಸೋಮನಾಥ. ದಶವಾಯುಗಳ ತಮ್ಮ ವಶಕೆ ಹರಿಯಲೀಯದೆ ಊರ್ದವಶಕೆ ಬಪ್ಪ ಪ್ರಣ ಮವಶನಾಗಿರಾ, ವಿಷಮಲೋಚನಘನಗುರುಪ್ರಿಯಸೋಮನಾಧ ಎಸಳಿನಾ ದಳದೊ ಇಗೆ ಬೆಳಗುತಿಹನು.