ಈ ಪುಟವನ್ನು ಪರಿಶೀಲಿಸಲಾಗಿಲ್ಲ.
126 ಕರ್ಣಾಟಕ ಕವಿಚರಿತೆ. [15 ನೆಯ
(3) ವೇಷವ ಧರಿಸಿ ಭಾಷೆಯ ಕಲಿತು ದೇಶವ ಸುತ್ತಿ ಬಟಿಲಬೇಡ; ಜಗ ದೀಶನ ಪಾದವನೊಲಿದು ಪೂಜಿಸಿರಣ್ಣಾ. ಸವಿಯೂಟದಾಸೆಗೆ ಮನವೆಳಸಬೇಡ; ಪರ ಮೇಶನ ಪಾದವ ನೆನೆದು ಸುಖಿಸಿರಣ್ಣಾ. ತರ್ಕಶಾಸ್ತ್ರಾಗಮಜಾಲದ ಹೋರಟೆಯ ಹೊಗದೆ ಮೂಲಮಂತ್ರವ ಮರಯದೆ ಸ್ಮರಿಸಿರಣ್ಣಾ . ಸಂಸಾರಿಗಳ ಸಂಗದೊಳಗಿರ ಬೇಡ; ಸದ್ಭಾವರ ಸಂಗದೊಳಿದ್ದು ನಿತ್ಯವ ಸಾಧಿಸಿಕೊಳ್ಳಿರಣ್ಣಾ . ಪರರ ಯಾಚಿಸಿ ತನುವ ಹೊರೆಯಬೇಡ; ಶಿವನಿಕ್ಕಿದ ಭಿಕ್ಷೆಯೊಳಗಿದ್ದು ನಿಜಗುರುಸ್ವತಂತ್ರ ಸಿದ್ಧಲಿಂಗೇ ಶ್ವರನನೊಲಿಸಿರಣ್ಣಾ .
(4) ಆಸೆಯೆಂಬ ಸ್ತ್ರೀಗೆ ಮನಸೋತವರೆಲ್ಲಾ ಕೆಟ್ಟ ಕೇಡನೇನೆಂಬೆನಯ್ಯಾ. ಯತಿಗಳಾಗಲಿ ವೇದಾಧ್ಯಾಯಿಗಳಾಗಲಿ ವ್ರತಿಗಳಾಗಲಿ ಸರ್ವವಿದ್ಯಾ ಕಲಾವಂತರಾಗಲಿ ನರರೊಳಗಾಗಲಿ ಸುರರೊಳಗಾಗಲಿ ಇವರೆಲ್ಲರ ಧನವುಳ್ಳವರ ಬಾಗಿಲ ಕಾಯಿಸಿದಳು ನೋಡಾ . ಇವಳಿಗಾರಾರು ಮರುಳಾಗರು ? ನಿಜಗುರುಸ್ವತಂತ್ರ ಸಿದ್ಧಲಿಂಗೇಶ್ವರನ ಶರಣರಲ್ಲದವರ ಕಿವಿಯ ಹಿಡಿದು ಕುಣಿಸಿದಳು ನೋಡಾ.
2 ಮುಕ್ತ್ಯಂಗನೆಯ ಕ೦ರಮಾಲೆ ಇದೂ ವಚನರೂಪವಾಗಿದೆ. ಇದಕ್ಕೆ ಒಂದು ಕನ್ನಡವ್ಯಾಖ್ಯಾನ ವಿದೆ . ವ್ಯಾಖ್ಯಾಕಾರನು ಈ ಗ್ರಂಥದ ವಿಷಯವಾಗಿಯೂ ತನ್ನ ವ್ಯಾಖ್ಯೆಯ ವಿಷಯವಾಗಿಯೂ ಹೀಗೆ ಬರೆದಿದ್ದಾನೆ...
ಸ್ವತಂತ್ರ ಸಿದ್ಧಲಿಂಗೇಶ್ವರನು ತಮ್ಮ ವಂಶೀಭೂತರಾದ ಗಣಂಗಳರಿದಾನಂದಿ ಸಲು ತಮ್ಮ ನಿಜಾನುಭಾವದ ವಚನಾಮೃತಶರಧಿಯೊಳಗೆ ಅನರ್ಘ್ಯರತ್ನಂಗಳನೆ ತೆಗೆದು ಸರಂಗೊಳಿಸಿ ಮುಕ್ತ್ಯಂಗನೆಯ ಕ೦ರಮಾಲೆಯೆನಲೊಪ್ಪುವ ವಚನಂಗಳೊಳಗೆ ಅತ್ಯಂತ ಗೋಪ್ಯವಾದ ವಚನಂಗಳನೆ ತೆಗೆದು ಮುಮುಕ್ಷು ಜನಂಗಳ ಹೃದಯಾಂತರಾಳವನೆ ತೊಳಗಿ ಬೆಳಗಲೆಂದು ಕನ್ನಡಿಸಿ ಪೇಳ್ವಂ.
ಈ ಗ್ರಂಥದಿಂದ ಒಂದು ವಚನವನ್ನು ತೆಗೆದು ಬರೆಯುತ್ತೇವೆ... ಹುಸಿಯಿಲ್ಲದ ಶಿಷ್ಯನು ಮರಹಿಲ್ಲದೆ ಗುರುವಿನ ಪಾದವ ಪಿಡಿದಡೆ ಕುರುಹಿಲ್ಲದ ಲಿಂಗವ ಕೊಡಲಿಕ್ಕಾಗಿ ತೆರಹಿಲ್ಲದಪ್ಪಲೊಡನೆ ಬರಿದಾದುವು ತನುಮನಪ್ರಾಣಂಗಳೆಲ್ಲವು . ಈ ಬೆಡಗಿನ ಉಪದೇಶವ ಪಡೆದ ಶಿಷ್ಯನಲ್ಲಿ ಗುರುವಡಗಿ ಗುರು ಶಿಷ್ಯನಾಗಿ ಯೆರಡು ಒಂದಾದ ಪರಿಯನೇನೆಂದುಪಮಿಸುವೆನಯ್ಯ ನಿಜಗುರುಸ್ವತಂತ್ರ ಸಿದ್ಧಲಿಂಗೇಶ್ವರನಲ್ಲಿ ಒಂದಾದ ಗುರುಶಿಷ್ಯನು.