ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ] ಗುಮ್ಮಳಾವುರದ ಸ್ಥಿದಲಿಂಗೇಶ್ವರ. ೧೨೭

                        3 ಜಂಗವರಗಳೆ
         ಇದರಲ್ಲಿ 108 ನುಡಿಗಳಿವೆ. ಒಂದೆರಡನ್ನು ತೆಗೆದು ಬರೆಯುತ್ತೇವೆ __
                 ಆದಿಮಧ್ಯಾಂತವರ್ಜಿತವೆನಿಪ ಜಂಗಮಂ |    
                 ನಿತ್ಯಅಃರ್ಮಲ ನಿರಪನಿಶ್ಚಿಂತಜಂಗಮಂ |
             ಗುಮ್ಮಳಾಪುರದ ಸಿದ್ಧಿಲಿಂಗೇಶ್ವರ.  ಸು . 1480 
             
      ಈತನು ಪಟ್ಸ್ಧಲದಲಿಂಗಾಂಗಸಂಬಂಧದ ನಿರ್ವಚನವನ್ನು ಬರೆದಿದ್ದಾನೆ . ಇವನು ವೀರಶೈವಕವಿ . ವಿರೂವಾಕ್ಷವಂಡಿತನ (1584) ಚೆನ್ನಬ ಸವಪುರಾಣದ 63 ನೆಯ ಸಂಧಿಯ 47 ನೆಯ ಪದ್ಯದಿಂದ ಕವಿ ತೋಂಟದ ಸಿದ್ಧಿಲಿಂಗಯತಿಯ (ಸು. 1470) ಶಿಷ್ಯನಾಗಿದ್ದಂತೆ ತಿಳಿಯುತ್ತದೆ. ಅದೇ ಯತಿಯ ಶಿಷ್ಯನಾದ ಬೋಳಬಸವನನ್ನು ತನ್ನ ಗ್ರಂಥದಲ್ಲಿ ಪ್ರತಿವಚನದಲ್ಲಿಯೂ ಸ್ತುತಿಸಿರುವುದರಿಂದ ಬೋಳಬಸವನು ಈತನಿಗೆ ವಿದ್ಯಾಗುರು ವಾಗಿದ್ದಂತೆ ತೋರುತ್ತದೆ. ಬೋಳಬಸವನ ಮೂಲಕವಾಗಿ ಸಿದ್ಧಿಲಿಂಗ ಯತಿಯ ಅನುಗ್ರಹವು ತನಗೆ ಉಂಟಾಯಿತು ಎಂದು ಹೇಳುತ್ತಾನೆ. ಈತನ ಕಾಲವು ಸುಮಾರು 1480 ಆಗಬಹುದು.
      ಇವನ ಗ್ರಂಥ ---
       ಷಟ್ಸ್ಧಲದಲಿಂಗಾಂಗಸಂಬಂಧದ ನಿರ್ವಚನ. 
ಇದು ವೀರಶೈವಸಿದ್ಧಾಂತವನ್ನು ಬೋಧಿಸುತ್ತದೆ; ವಚನ 15. ಬಸವ ಮುಂತಾದ ಪುರಾತನರ ಸ್ತುತಿಯೂ ಅಲ್ಲಲ್ಲಿ ಬರುತ್ತದೆ. ಪ್ರತಿವಚನವೂ ಪ್ರಾಯಿಕವಾಗಿ ಬೋಳಬಸವೇಶ್ವರಾ ನಿಮ್ಮ ಧರ್ಮ ನಿಮ್ಮ ಧರ್ಮ ಎಂದು ಮುಗಿಯುತ್ತದೆ. ಇದರಿಂದ ಒಂದುವಚನವನ್ನು ತೆಗೆದು ಬರೆಯುತ್ತೇವೆ:

ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳ ಕಳೆದು ಎನ್ನಂತರಂಗಬಹಿರಂಗಶುದ್ಧಾತ್ಮನ ಮಾಡಿದ ಮಡಿವಾಳಯ್ಯ . ಸಾಕಾರ ಮೂರು ಮೂರು ಹದಿನೆಂಟುಪ್ರಕಾರವನೊಳಕೊಂಡು ಎನ್ನ ಬಹಿರಂಗದಲ್ಲಿ ಆಯತವಾದನಯ್ಯ ಬಸವಣ್ಣ . ಎಸ್ನ ನಿರಾಕಾರ ಮೂರುಮೂರು ಹದಿನೆಂಟುಪ್ರಕಾರವನೊಳಕೊಂಡು ಎನ್ನ೦ ತರಂಗದಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣ, ನಿರಾಳನಿರ್ಮಾಯನಿಕ್ಕೂಸ್ಯ ಬ್ರಹ್ಮವೇ ಉಭಯಸಂಗದಲ್ಲಿ ನನ್ನ ಹಿತವಾದನಯ್ಯಾ ಪ್ರಭುದೇವರು ಇಂತೀ ಅಂತ


, ಚನ್ನಬಸವಪುರಾಣ, ಸಂಧಿ 63, ಪಠ್ಯ 49.