ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೧೩

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


128

             ಕರ್ಣಾಟಕ ಕವಿಚರಿತೆ.       
                            [15 ನೆಯ ರಂಗಬಹಿರಂಗ ಆತ್ಮಸಂಗವನರುಹಿ ಬೋಳಬಸವೇಶ್ವರನು ಸಿದ್ಧೇಶ್ವರನ ನಿಜಪದವನೊ ರೆದೊರೆದು ತೋರಿದಕಾರಣ ಎನ್ನ ತನು ಬಯಲಾಯಿತ್ತು, ಮನ ಬಯಲಾಯಿತ್ತು, ಪ್ರಾಣ ಬಯಲಾಯಿತ್ತು, ಇಂದ್ರಿಯ ಬಯಲಾಯಿತ್ತು, ವಿಷಯ ಬಯಲಾಯಿತ್ತು. ಇಂತಿವರೊಳಗೆ ನಾನು ಬಯಲಾದೆನು. ಪರಂಜ್ಯೋತಿಮಹಾಲಿಂಗಗುರುಸಿದ್ಧಿಲಿಂಗ ಪ್ರಭುವಿನಲ್ಲಿ ಹಿಂದುಮುಂದು ಎಡಬಲ ಅಡಿಆಕಾಶವೆಂಬ ಭೇದವನರಿಯದೆ ಮುಲುಗಿ ನಿಶ್ಯಬ್ದ ಬ್ರಹ್ಮ ಮುಚ್ಯತೇ ಎಂಬ ನುಡಿ ಅಡಗಿತ್ತಯ್ಯಾ ನಿಮ್ಮ ಧರ್ಮ ನಿಮ್ಮ ಧರ್ಮ.
            ------
          ಸಾನಂದ ಶಿವಯೋಗಿ ಸು. 1480 
   ಈತನು ವೀರಮಾಹೇಶ್ವರಾಚಾರಸಾರೋದ್ಧಾರಕ್ಕೆ ಟೀಕೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ. “ ಮೂರುಸಾವಿರದ ತೋಂಟ ದಸಿದ್ಧೇಶ್ವರನ ಅಂತರ್ಭಾವಮನಃಕರಕಮಲದಲ್ಲಿ ಶಿವಲಿಂಗಪ್ರಾಣಿ ಶಿವ ಮಂತ್ರಶರೀರಿಯಾಗಿ ಅವತರಿಸಿದ ಶ್ರೀಮತ್ಸಾನಂದಶಿವಯೋಗಿಮಂತ್ರನೂ ರ್ತಿ” ಎಂಬ ಗದ್ಯಭಾಗದಿಂದ ಇವನು ತೋಂಟದಸಿದ್ಧೇಶ್ವರನ(ಸು. 1470) ಶಿಷ್ಯನೆಂದು ಊಹಿಸುವುದಕ್ಕೆ ಅವಕಾಶವಿದೆ. ಹಾಗಿದ್ದ ಪಕ್ಷದಲ್ಲಿ ಇವನ ಕಾಲವು ಸುಮಾರು 1480 ಆಗಬಹುದು.
               ---
         ತೆರಕಣಾಂಬಿ ಬೊಮ್ಮರಸ ಸು. 1485
     ಈತನು ಸನತ್ಕುಮಾರಚರಿತೆ, ಜೀವಂಧರಸಾಂಗತ್ಯ ಇವುಗಳನ್ನು ಬರೆದಿದ್ದಾನೆ. ಇವನು ಜೈನಕವಿ; ತೆರಕಣಾಂಬಿಯವನು; ವಾದೀಭಸಿಂಹ ನೇಮಿಚಂದ್ರಾರ್ ಯನ್ ಪ್ರಪೌತ್ರನು; ಬೊಮ್ಮರಸೋಪಾಧ್ಯಾಯನ ಮಗನು. “ತೆರಕಣಾಂಬಿನಿವಾಸ ಪಾರ್ಶ್ವಜಿನೇಂದ್ರಚಂದ್ರಮನ ಚರಣಕಮಲಭ್ರಮರ” ಎಂದು ಹೇಳಿಕೊಂಡಿದ್ದಾನೆ, ತನ್ನ ಪ್ರಪಿತಾಮಹನಾದ ನೇಮಿಚಂದ್ರನು ಪ್ರೌಢರಾಯನ (1419-1446) ಸಭೆಯಲ್ಲಿ ವಿದ್ವಾಂಸರನ್ನು ವಾದದಲ್ಲಿ ಜಯಿಸಿ ಜಯಪತ್ರವನ್ನು ಪಡೆದಂತೆ
    ಮಂಡಲೇಶ್ವರಪ್ರೌಢರಾಯನ | ಕಂಡು ತತ್ಸಭೆಯಲ್ಲಿ ರಂಜಿಸ | 
    ತಂಡತಂಡದ ವಾದಿವಿದ್ವಾನುಗಳ ಮದದುಲೆದು ||