ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೧೪

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ


ಶತಮಾನ ತೆರಕಣಾಂಬಿ ಬೊಮ್ಮರಸ. 429 ಕೊಂಡು ಜಯಪತ್ರವನು ಭೂಗೆ ಪ್ರ | ಚಂಡತಾರ್ಕಿಕರತ್ನ ಸದ್ಗುಣ | ಮಂಡನಾಂಗಗೆ ನೇಮಿಚಂದ್ರಗೆ ಶಿರವ ಮೊಗ್ಗಿಪೆನು || ಪ್ರೌಢರಾಯನ ಮೆಚ್ಚಿಸಿ ಜಯಪತ್ರವ | ಗಾಡಿಯಿಂ ತಂದಿಳೆಯೊಳಗೆ | ರೂಢಿವಡೆದ ನೇಮಿಚಂದ್ರನ ಕುಲದೀಪ | ಮಾಡಿದ ಕೃತಿ ರಾಜಿಸದೇ || ಎಂಬ ಪದ್ಯಗಳಲ್ಲಿ ಹೇಳುತ್ತಾನೆ. ಆದುದರಿಂದ ಕವಿಯ ಕಾಲವು ಸುಮಾರು 1485 ಆಗಬಹುದು. ಸನತ್ಕುಮಾರಚರಿತೆಯ ಒಂದು ಪ್ರತಿಯ ಕೊನೆಯಲ್ಲಿ ಈತನ ವಿಷಯವಾಗಿ ಈ ಗದ್ಯವು ದೊರೆಯುತ್ತದೆ-- ಶ್ರೀಮದಮರನರೋರಗೇಂದ್ರಪ್ರಮುಖ ಸಕಲಸುರನಮಿತಮೌಳಿಕೀಲಿತಮಾಣಿ ಕ್ಯಮಯೂಖಪುಂಜರಂಜಿತಪಾದಾಂಭೋಜವಿರಾಜಿತ ಶ್ರೀಮತ್ಪಾರ್ಶ್ವಜಿನೇಂದ್ರಚರಣ ಕಮಲಮತ್ತಮಧುಕರನುಂ, ಸುಕವಿನಿಕರಮಾನಸೋದ್ಯಾನವರವಸಂತನುಂ, ಕುಕವಿ ಗರ್ವಪರ್ವತಚೂರ್ಣಿಕೃತವಜ್ರನುಂ, ಜಿನಮತಾಚ್ದಿಹ್ಲಾತನಯನೀತಿಸದ್ವಿನಯಭರಿತ ಸುಚರಿತ್ರನುಂ, ಇತ್ಯಾದ್ಯನೇಕಗುಣಗಣಾಲಂಕೃತನಪ್ಪ ನೇಮಿಚಂದ್ರಾನ್ವಯಗಗನ ಪ್ರಕಾಶಿತಬಾಲದಿನಕರ ಬೊಮ್ಮರಸೋಪಾಧ್ಯಾಯಸುಕುಮಾರ ಬೊಮ್ಮ ರಸವಿರಚಿತಸನತ್ಕುಮಾರಪ್ರಬಂಧದೊಳ್, ಈತನ ಗ್ರಂಥಗಳಲ್ಲಿ - 1. ಸನತ್ಕುಮಾರಚರಿತೆ ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ; ಸಂಧಿ 17, ಪದ್ಯ 870, ಗ್ರಂಥಪ್ರಮಾಣ 2175. ಇದರಲ್ಲಿ ಹಸ್ತಿನಾಪುರದ ರಾಜನಾದ ವಿಶ್ವಸೇನನ ಮಗ ಸನತ್ಕುಮಾರರಾಜನ ಕಥೆ ಹೇಳಿದೆ. ಈ ಗ್ರಂಥದ ಉತ್ಕೃಷ್ಟತೆ ಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ ಸೊಗಸುವಾತಿನ ಸೋನೆ ಸದ್ಭಾ | ವಗಳ ಸರಿ ಚಿತ್ರಾರ್ಧ ಪದಬಂ | ಧಗಳ ಮಣಿ ನವರಸಗಳೊಸರುವ ಸಾರ ಬಿನ್ನಣದ || ಸುಗಮದಡಿ..ಡಲನಿಯಮಪ್ರಾ | ಸುಗಳ ಧಾರಾವೃಷ್ಟಿ, ಕಾವ್ಯದೊ | ಳೊಗೆಯ ಭೂಮಿಗೆ ಪೊಸತೆನಲು ರಂಜಿಪುದು ಮತ್ಕೃತಿಯ || ಇ೦ದುಕಿರಣದ ಸಂದಣಿಯೊ ಮಿಗೆ | ಮಂದಮರುತನ ಸೋಂಕೊ ಪಾಡುತ | ಚಂದದಿಂ ನರ್ತಿಸುವ ಕೊರಿಯಪಾಂಗಕಾಂತಿಯಿದೋ || ಚಂದನದ ಘನಸಾರಕತ್ತುರಿ | ಯೊಂದುಗೂಡಿದ ಪರಿಮಳದ ಸೊಗ ಸಿಂದ ವೆಗ್ಗಳವಿನಿದುಬಲ್ಲರಿಗೀಕೃತಿಯ ರಚನೆ |