ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ

                           ನೀಲಕಂಠಾಚಾರ್ಯ.

135 ಶ್ರೀಗಿರಿಯಲ್ಲಿಯ ಶಿವಭಕ್ತರು ಪಾಲ್ಕುರಿಕೆಯಸೋಮೇಶ್ವರನನ್ನು ಕರೆ ದು ಪಂಡಿತಾರಾಧ್ಯಚರಿತವನ್ನು ಬರೆಯೆನಲು ಆತನು ಆಂಧ್ರಭಾಷೆಯಲ್ಲಿ ಬರೆದಂತೆಯೂ ಅದನ್ನು ತಾನು ಕನ್ನಡದಲ್ಲಿ ರಚಿಸಿದಂತೆಯೂ ಕವಿ ಹೇಳುತ್ತಾನೆ. ಗ್ರಂಥಾವತಾಗದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ನಂದಿ, ಭ್ರ೦ಗಿ, ವೀರಭದ್ರ, ಅಲ್ಲಮ, ಬಸವ, ಚೆನ್ನಬಸವ, ಪಂಡಿತಾರಾಧ್ಯ, ದಕ್ಷಿಣಾ ಮೂರ್ತಿಗುರು, ವಿಶ್ವನಾಥಾರ್ಯ, ಸ್ವಗುರು ಗಂಗಾಧರಾಚಾರ್ಯ ಇವರುಗಳನ್ನು ಸ್ತುತಿಸಿದ್ದಾನೆ. ಸಂಧಿಗಳ ಅಂತ್ಯದಲ್ಲಿ ಈ ಪದ್ಯವಿದೆ. ಸದಮಲಪ್ರಚುರವಿಶ್ರುತಪರಮಭಕ್ತಗಣ | ಪದಸರೋರುಹಸಾಂದ್ರಮಕರಂದಪಾನಸಂ || ಮುದಿತಚಂಚಚ್ಚಂಚರೀಕನನವರತಪಂಚಾಕ್ಷರೀಪ್ರಸಿತಹೃದಯಂ || ವಿದಿತಮಂಜುಳನೀಲಕಂರಾಹ್ವಯಂ ಮನೋ || ಮುದದೆ ಪೇಱ್ರು ರುತರಾರಾಧ್ಯ ಚಾರಿತ್ರದೊಳ್. ಇವನ ಬಂಧವು ಲಲಿತವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗ ೪ನ್ನು ತೆಗೆದು ಬರೆಯುತ್ತೇವೆ ಶಿವಸ್ತುತಿ ಸುರನಿಕರವರಮಕುಟಮಣಿಕಿರಣಲಹರಿತತಿ | ಪರಿಕಲಿತಪರಚರಣಸರಸಿರುಹಭಜಕಕುಲ | ದುರಿತಸಮುದಯರುಚಿರಮದಕರಟಿದಳನಪಟುಹರಿಸದೃಶನತನುರಹಿತಂ || ಕರಿಲಪನಪಿತನಮಲಶತತರಣಿಘ್ರುಣಿವಿಸರ | ಪರಿಭವವಿಲಸಿತತನು ಫಣಿಪಕರಕಟಕನುರು | ತರಗರಳಸರಳಗಳನನವರತವವನಿಯಂ ಪೊರೆಗೆ ಗುರುನೀಲಕಂರಂ || ಗುರುಸ್ತುತಿ ಚರವೆ ಚರಲಿಂಗಯುತಶಿರವೆ ಹರಭಕ್ತಗೋ | ಚರವೆ ಚರಿತವ್ರಶೋತ್ಕರವೆ ಕರುಣಾಂಬುಸಾ ! ಗರವೆ ಗುರುತರಗುಣನಿಕರವೆ ಸುರು ಚಿರಕಳೇವರವೆ ಪರಮದ ಮುಕುರವೇ 11, ವರವೆ ನಿರವಧಿಪುಣ್ಯಪುರವೆ ಸಠಸೋಕ್ತಿವಿ | ಸ್ತರವೆ ದುರಿತಾಬ್ಜ ಕುಂಜರವೆ ಪರಮಾರ್ಧಮಂ | ದಿರವೆ ನಿರುಪಮಶಾಂತಿಕರವೆ ಪುರರಿಪುಂಚಿದಾಕರವೆ ಕರುಣಿಪುದು ಗುರುವೇ |