ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

136 ಕರ್ಣಾಟಕ ಕವಿಚರಿತೆ. [15 ನೆಯ ಜಗದನಾದಿತ್ವನಿರಸನ ಭರದಿನೀಜಗವೆಲ್ಲನಾದಿಯೆಂಬೀನುಡಿಯೆ | ಪುರುಳಲ್ತದೆ೦ತೆನಲ್ ಕಾರ್ಯತ್ವದಿಂದೆ ಭಾ | ಸುರಕಾರ್ಯ ಮಾದುದದು ಘಟದಂತನಿತ್ಯತೆಯೊಳೊಂದಿ ತೋಱುಗುಮನಿಶವೂ 11. ಪಿರಿದುಮದು ಕಾರ್ಯತ್ವಮೆ೦ತಪ್ಪುದೆಂಬೊಡೆದು | ಕರಮೆ ಸಾವಯತ್ವದಿಂದ ಸಾವಯವತ್ವ | ವಿರುತಿರ್ಕುಮಾವುದಱೊಳದು ಭಾವಿಸಲ್ ಕಾರ್ಯ ಮೆಂಬುದಿದು ಸಿದ್ದಾಂತವು || ಚಾರ್ವಾಕಮತಖಂಡನ ಅತಿಶಯಂ ದೇಹಮೇ ಆತ್ಮನಾದೊಡೆ ವೆಱ೦ | ಮೃತಶರೀರಂ ದೃಷ್ಟ ಮಾಗಿರಲ್‌ಭೂಸಲಿಲ | ಹುತವಹಶ್ವ ಸನಂಗಳಿಂ ತೋರ್ಪ ದೇಹಚೈತನ್ಯ ಮಂ ಕಾಣ್ಭರಿಲ್ಲ || ಮತಿವಿಕಳಚಾರ್ವಾಕ ಬಱೆದೆ ಬಕ್ಕುಡಿಗುಟ್ಟು | ತತಿವಾದಿಪೈ ಜನನಮರಣಾದಿಗಳ್‌ ನೋಡೆ | ಸತತಮಾತ್ಮನ ಧರ್ಮಮದಲಿಂಱಿ೦ದೆ ದೇಹದಿಂ ಬೇಱೊವ್ರನಾತ್ಮನು೦ಟು | ಪಿರಿದವಸ್ಥಾತ್ರಯಂಗಳ್ಗ ಕಾರಣಮಪ್ಪ | ಸುರುಚಿರಸ್ಟೂಲಾದಿತನುಗಲಳೋಳ್ ವ್ಯಾಪಿಸು | ತ್ತುರುವಿಶ್ವತೈ ಜಸಪ್ರಾಜ್ಞರೆಂಬಭಿಧಾನದಿಂದೊರ್ವನೇ ಆತ್ಮನು || ನಿರುತದಿಂ ದೇಹದೊಳ್ ತೋಱೆ ತದ್ದೇಹಮದು | ಭರದಿಂದೆ ಚೇತನತ್ವದೊಳೊಂದಿ ತೋಱುಗುಂ | ಕರಮವಂ ತೊಲಗೆ ಮೃತದೇಹವೆನಿಸುಗುಮದಱಿನೀ ದೇಹಮಾತ್ಮನಲ್ತು 11. ಮಿಸುಪ ಚಕ್ರಮನೊತ್ತಿ ಪಿಡಿದಿರ್ದ ದಂಡದಿಂ | ದೊಸೆದು ತಿರುಪಲ್ ಚಕ್ರಿ ಚಕ್ರಮದು ತಿರುಗುವಂ | ತಸವಸಂ ದೇಹಮಾತ್ಮ ಪ್ರೇರಣೆಯಿನುಱದೆ ಚಲಿಸುತಿರ್ಕು೦ ಭಾವಿಸೆ | ನಿಸದಮಾತ್ಮಂ ದೇಹದಿಂ ತೊಲಗಿ ಪೋಗೆ ಮ | ತ್ತಸುಗಳೈದಿದ ಶರೀರಂ ಶುದ್ಧ ಮತ್ತೆಂದು | ವಸುಧಾಜನಂ ಮುಟ್ಟದದಱು೦ದೆ ತನುವಿಲಕ್ಷಣನಾತ್ಮನುಂಟು ಸತತಂ ||