ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ]

                           ಕವಿಲಿಂಗ,

181 ಕವಿಲಿಂಗ ಸು. 1490 ಈತನು ಕವಿಲಿಂಗನಪದ ಎಂಬ ಗ್ರಂಥವನ್ನು ಬರೆದಿದ್ದಾನೆ. ಇವ ನು ವೀರಶೈವಕವಿಯೆಂದು ತೋರುತ್ತದೆ, ಕಾಮಶಾಸ್ತ್ರದಲ್ಲಿ ಪ್ರವೀಣನಾಗಿ ದ್ದಂತೆಯೂ ಗುಂಡರಾಜನ ಮಗನಾದ ಸಾಳುವನರಸಿಂಗರಾಜನ (14871493) ಆಸ್ಥಾನಕವಿಯಾಗಿದ್ದಂತೆಯೂ ಇಂಗಿತವನಱುಯಲೆಂದೀನಾರಿಯರಿಗಿತ್ತ | ಮಂಗಳಾಲಂಕಾರಸಮವಾಗಿರೆ | ಅಂಗಜಕಲಾನಿಪುಣ ಗಂಡಭೇರುಂಡ ಕವಿ | ಲಿಂಗ ನುಡಿಜಾಣಕವಿ ಸಾಳ್ವಗೆ || ಮಲೆವ ರಿಪುರಾಯಗಿರಿವಜ್ರವನದಾವಾ | ನಲ ವೈರಿವಾರ್ಧಿ ವಡಬ ಸಾಳ್ವ ? ಕುಲರತ್ನ ಗುಂಡಭೂವರನರಸಿಂಗಗೆ | ತಲೆಯೊಡ್ಡಿ ಬಾಱ್ವಿ ಭೂಭುಜರುಂಟೆ || ಎಂಬ ಪದಗಳಿಂದ ತಿಳಿಯಬಹುದಾಗಿದೆ. ಈ ನರಸಿಂಗನನ್ನು ಕವಿ ಬಹಳಕಡೆ ಸ್ತುತಿಸಿದ್ದಾನೆ. ಒಬ್ಬ “ಕನ್ನಡಜಾಣ ಎಳಚನ ಹೆಸರು ಹೇಳಿದೆ, ಈಶನಾರೋ ತಿಳಿಯದು, ಕವಿಯ ಕಾಲವು ಸುಮಾರು 1490 ಆಗಬಹುದು. ಇವನ ಗ್ರಂಥ ಕವಿಲಿಂಗನ ವದ ಇವು ಪ್ರಾಯಿಕವಾಗಿ ಶೃಂಗಾರರಸಪ್ರಧಾನವಾದ ಹಾಡುಗಳು, ಪದ ವನ್ನು ಹೇಳಿ ಬಳಿಕ “ಈ ಪದಕ್ಕೆ ಸೂತ್ರ” ಎಂದು ಪದ್ಯಗಳು ಬರೆದಿವೆ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ಆಳಿಗುರುಳಳ್ಗೆ ಪೂ ತಿಲಕಮಿಂದುನಿಭಾನನೆಗಂ ಲತಾಂಗಿಗ೦ | ಮಲಯಜನ ಫರಂ ಕಲಮರಾ ಳಸುಯಾನೆಗೆ ಮುತ್ತಿನೊಚ್ಚರ೦ | ನಳಿನನಿಭಾಸ್ಯೆಗಂ ಪದಕ ಮೋಹಘನಸ್ತನಿಗ೦ ಸುರತ್ನ ಕಂ | ಗೊಳಿಸುವ ಕಂಕಣಂ ಪವಳಬಾಯ್ದೆ ೞೊಯಳ್ಗೆ ನಿತಂಬಸೂತ್ರಮಂ | ಸೆಳೆನಡುವೊಪ್ಪುವಳ್ಗೊಲಿದು ನಾಯಕನಿತ್ತನದೇಂ ಮನಃಪ್ರಿಯಾ | ಎಲ್ಲಿಯ ? ಸಾರಪ೦ ಚದುರಿದೆಲ್ಲಿಯದಿಂತು ವಿವೇಕದೊಳ್ಪು ತಾ | ನೆಲ್ಲಿಯದಾಕೆಯಾಳ್ದಿಹಳು ದಂಭವದಾದಿಯೊಳಾ ಶಿಶುತ್ವದೊಳ್ | ನಿಲ್ಲದೆ ಪಾಲನೀಂಟುವವೊಲುಂ ಜನನಾಂತ್ಯ ದವೋಲು ನಲ್ಲನೊಳ್ | ತಲ್ಲೀಲವಾಗಿ ತೋೞಿಸಿತನೆಂಬಳು ಬೊಮ್ಮನ ಕೂಟದೆಚ್ಚ ಯಿಂ | ಸೊಲ್ಲಿಸಲೆಂದು ಪಟ್ಟುವುದೊ ಮೂಸಸದೊಲ್ಮೆಯನೆಂದು ಕಾಣ್ಬುದೋ | (ಇವು ಪಂಚಪಾದವೃತ್ತಗಳು)