ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+88 ಕರ್ಣಾಟಕ ಕವಿಚರಿತೆ. [16 ನೆಯ ಪುಟ್ಟುವ ಬಾಲಕರೊಳ್ ನೆಟ | ಹುಟ್ಟಿದ ಕಡೆಯವರತೆಅದಿ ಬೆಳೆವವರೊಲ್ ತಾಂ| ಪಟ್ಟಿ ಹುದಲ್ಲದೆ ನಲ್ಲನ | ನೆಟ್ಟನೆ ತನಗಪ್ಪನೆಂಬುದೆಂತೆಲೆ ರಮಣೀ || ಚತುರ್ಮುಖ ಬೊಮ್ಮರಸ, ಸು. 1500 ಇವನು ರೇವಣಸಿದ್ದೇಶ್ವರ ಪುರಾಣವನ್ನು ಬರೆದಿದ್ದಾನೆ ಈತನು. ವೀರಶೈವಕವಿ, ಮಾಯಣನ ಮಗನು, ಕಾಶ್ಯಪಗೋತ್ರದವನು, ಬೋಧಾ ಯನಸೂತ್ರದವನು, ಯಜುರ್ವೇದಿ ರೇವಣಸಿದ್ದೇಶ್ವರನ ವಂಶೋದ್ಭವ ನಾದ ಒಬ್ಬ ಬಾಲನಿದ್ದೇಶ್ವರನನ್ನು ವಿಶೇಷವಾಗಿ ಸ್ತುತಿಸಿದ್ದಾನೆ ಇವನು ಕವಿಯ ಗುರುವಾಗಿದ್ದಂತೆ ತೋರುತ್ತದೆ. ಇವನ ಆಜ್ಞಾನುಸಾರವಾಗಿ ಆವಿ ಈ ಗ್ರಂಥವನ್ನು ಬರೆದಂತೆ ಹೇಳುತ್ತಾನೆ. ಸರಸಗೀರ್ವಾಣಭಾಪಾಯುಕ್ತ ಕರ್ನಾಟವರವಕಲಸಿತವದನತಾಮರಸ, ಶೈವಾಗಮಜ್ಞ, ವರ್ಣಕ ಕವೀಂದ್ರಚತುರಾಸ್ಯ, ಕವಿಸಭಾಮಾಣಿಕ್ಯದೀಪ ಎಂದು ತನ್ನನ್ನು ವಿಶೇ ಪಿಸಿ ಹೇಳಿಕೊಂಡಿದ್ದಾನೆ. ಪೂರ್ವಕವಿಗಳಲ್ಲಿ ಮಗ್ಗೆ ಯಮಾಯಿದೇವನನ್ನು (ಸು, 1430) ಸ್ತುತಿಸುವುದರಿಂದ ಅವನ ಕಾಲಕ್ಕಿಂತ ಈಚೆಯವನೆಂಬುದು ಸ್ಪಷ್ಟ ವಾಗಿದೆ. ಈ ಗ್ರಂಧವನ್ನು ಕಾಂತಮಲ್ಲೇಶ್ವರನ ಅಂಕಿತದಲ್ಲಿ ಬರೆ ದಿದ್ದಾನೆ, ಯದ್ಯಪಿ ಈ ಗ್ರಂಧಕ್ಕೂ ಸೌಂದರಪುರಾಣ' ಆದಿಭಾಗ ದಲ್ಲಿ ಬಹಳ ಮಟ್ಟಿಗೆ ಹೋಲಿಕೆಯಿದ್ದರೂ ಗುರು, ಅಂಕಿತ ಈಯಂಶಗಳಲ್ಲಿ ವ್ಯತ್ಯಾಸವಿರುವುದರಿಂದ ಈ ಬೊಮ್ಮರಸನು ಆ ಗ್ರಂಧವನ್ನು ಬರೆದ ಬೊಮ್ಮರಸನಿಗಿಂತ ಬೇರೆಯವನೆಂದು ತಿಳಿಯಬೇಕಾಗಿದೆ. ಈ ಹೋಲಿಕೆ ಯನ್ನು ನೋಡಿದರೆ ಇವರಿಬ್ಬರೂ ಸವಿಾಪಸಂಬಂಧಿಗಳಾಗಿ ಇದ್ದಿರಬಹು ದೆಂದು ತೋರುತ್ತದೆ. ಈ ಕವಿ ಆ ಕವಿಯ ಮೊಮ್ಮಗನಾಗಿದ್ದರೂ ಇರಬ ಹುದು, ಹಾಗಿದ್ದ ಪಕ್ಷದಲ್ಲಿ ಇವನ ಕಾಲವು ಸುಮಾರು 1500 ಆಗಬಹುದು. ಪೂರ್ವಕವಿಗಳಲ್ಲಿ ಭಾರವಿ, ಮಲುಹಣ, ಕಾಳಿದಾಸ, ಬಾಣ, ಮಯೂರ ಈ ಸಂಸ್ಕೃತಕವಿಗಳನ್ನೂ ಹರೀಶ್ವರ, ಮಗ್ಗೆ ಯಮಾಯಿದೇವ, ಕೆರೆಯಪದ್ಮರಸ, ಪಾಲ್ಕುರಿಕನೋಮನಾಧ ಈ ಕನ್ನಡ ಕವಿಗಳನ್ನೂ ಸ್ಮರಿ ನಿದ್ದಾನೆ. 1, 89ನೆಯ ಪುಟವನ್ನು ನೋಡಿ