ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 ಶತಮಾನ]

                   ನಿಜಗುಣ ಶಿವಯೋಗಿ

ನಿಜಗುಣಶಿವಯೋಗಿ.ಸು 1500 ಈತನು ಅನುಭವಸಾರ, ಅರುವತ್ತು ಮೂವರ ತ್ರಿಪದಿ, ಕೈವಲ್ಯಪದ್ಧತಿ , ಪರಮಾನುಭವಬೋಧೆ, ಪರಮಾರ್ಥಗೀತೆ, ವರಮಾರ್ಥಪ್ರಕಾಶಿಕೆ, ವಿವೇಕಚಿಂತಾಮಣಿ ಈ ಗ್ರಂಥಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ, ಇವನಿಗೆ ನಿಜಗುಣಾರಾಧ್ಯ ಎಂಬ ಹೆಸರೂ ಉಂಟು. ಶಂಭುಲಿಂಗನ ಬೆಟ್ಟದ ಸುತ್ತುಮುತ್ತಿನ ನಾಡಿಗೆ ಅರಸಾ ಗಿದ್ದು ಬಳಿಕ ವಿರಕ್ತನಾಗಿ ಆ ಬೆಟ್ಟದಲ್ಲಿ ನಿಂತು ಶಿವಯೋಗತತ್ಪರನಾಗಿದ್ದ ನೆಂದು ಹೇಳುತ್ತಾರೆ. ಇವನ ಗ್ರಂಥಗಳಲ್ಲೆಲ್ಲಾ ಶಂಭುಲಿಂಗನ ಅಂಕಿತವು ದೊರೆಯುತ್ತದೆ. ಈತನ ವಿವೇಕಚಿಂತಾಮಣಿಯಲ್ಲಿ ಉತ್ತರವಿಾಮಾಂ ಸಯ ವಿಚಾರವನ್ನು ಹೇಳುವಾಗ ಸುಮಾರು 1250 ರಲ್ಲಿದ್ದ ಅಮಲಾನಂದ ನಿಂದ ರಚಿತವಾದ ಕಲ್ಪತರುವೆಂಬ ವ್ಯಾಖ್ಯಾನದ ಹೆಸರನ್ನು ಹೇಳುವುದ ರಿಂದ ಕವಿ ಆ ಕಾಲಕ್ಕೆ ಈಚೆಯವನು ಎಂಬುದು ವ್ಯಕ್ತವಾಗುತ್ತದೆ. ಇದರಿಂದ ಬಸವನ (ಸು, 1160) ಕಾಲದಲ್ಲಿದ್ದ ನಿಜಗುಣನೇ ಇತನು ಎಂಬ ಹೇಳಿಕೆ ನಿರಾಧಾರವಾದುದೆಂದು ತಿಳಿಯುತ್ತದೆ. 1655 ರಲ್ಲಿ ರಾಜ ಶೇಖರವಿಳಾಸವನ್ನು ಬರೆದಡಕ್ಷರದೇವನು ಈತನನ್ನು ಸ್ತುತಿಸುವುದ ರಿಂದ ಇವನು ಆ ಕಾಲಕ್ಕೆ ಹಿಂದೆ ಇದ್ದಿರಬೇಕು, ಎಷ್ಟು ಹಿಂದೆ ಇದ್ದಿರ ಬಹುದೋ ತಿಳಿಯದು. ಇವನು ಚೆನ್ನಸದಾಶಿವಯೋಗಿಯ ಶಿವಯೋಗ ಪ್ರದೀಪಿಕೆಗೆ ಪರಮಾರ್ಥಪ್ರಕಾಶಿಕೆ ಎಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಈ ಚೆನ್ನಸದಾಶಿವಯೋಗಿಯ ಕಾಲವಾವುದೋ ತಿಳಿಯದು, ಇದು ತಿಳ ದಿದ್ದರೆ ಕವಿಯ ಕಾಲವನ್ನು ನಿರ್ಧರಿಸುವುದಕ್ಕೆ ಸ್ವಲ್ಪ ಮಟ್ಟಿಗೆ ಸಹಕಾರಿ ಯಾಗುತ್ತಿದ್ದಿತು, ಇವನ ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ, ಇವನನ್ನು ಅನೇಕವೀರಶೈವಕವಿಗಳು ತಮ್ಮ ಗ್ರಂಥಗಳಲ್ಲಿ ಸ್ತುತಿ ಸಿದ್ದಾರೆ. ಇವನ ಗ್ರಂಥಗಳಲ್ಲಿ 1 ಅನುಭವಸಾರ. ಇದು ತ್ರಿಪದಿಯಲ್ಲಿ ಬರೆದಿದೆ;ಸಂಧಿ 8, ಸೂತ್ರ 46, ಪದ್ಯ 535. 90