ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18ರಿ ಕರ್ಣಾಟಕ ಕವಿಚರಿತೆ. [16 ನೆಯ

                    ಸುರಂಗಕವಿ, ಸು, 1500
   ಈತನು ತ್ರಿಷಷ್ವಿಪುರಾತನರ ಚರಿತ್ರೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ ; ಇವನ ತಂದೆ ಸಂಗಮವಿಭು, ತಾಯಿ ಮಹದೇವಿ." ಪುಲಿಗೆರೆಯ ಪುರಾಥಿಪ ಶ್ರೀಸೋಮನಾಥಭಕ್ತಿಯುಕ್ತ” ಎಂಬುದರಿಂದ ಇವನ ಸ್ಥಳವು ಪುಲಿಗೆರೆಯಾಗಿರಬಹುದು, ಈ ಸೋಮನಾಥದೇವರ ಅಂಕಿತದಲ್ಲಿ ಗ್ರಂಥವನ್ನು ಬರೆದಿದ್ದಾನೆ. ಇವನಿಗೆ ಕರ್ಣಾಟಕಕವಿಚಕ್ರವರ್ತಿ ಎಂಬ ಬಿರುದಿದ್ದಂತೆ ತಿಳಿಯುತ್ತದೆ. " ಮನುಜಸ್ತುತಿಯಂ ಬಿಟ್ಟು ಸುರಂ ಗಕವಿ ನಾಲಗೆಯಂ ಗಿರಿಶಂಗೆ ಮಾರ'ದಂ” ಎಂದು ಹೇಳಿಕೊಂಡಿದ್ದಾನೆ.
   ಇವನ ಕಾಲವನ್ನು ನಿರ್ಧರಿಸುವುದಕ್ಕೆ ಆವ ಆಧಾರವೂ ಇಲ್ಲ. ಇವನು ಹಿಂದಣ ಕನ್ನಡಕವಿಗಳಲ್ಲಿ ಆರ ಹೆಸರನ್ನೂ ಹೇಳಿಲ್ಲ ; ಇವನ ಹೆಸರೂ ಕೂಡ ಮತ್ತಾವ ಕವಿಯಿಂದಲೂ ಉಕ್ತವಾಗಿಲ್ಲ, ಆದರೆ ಬಸವ, ಚೆನ್ನಬಸವ, ಪ್ರಭುದೇವ ಇವರುಗಳನ್ನು ಸ್ತುತಿಸಿದ್ದಾನೆ ; ಅಲ್ಲದೆ 1 ನೆಯ ಅಶ್ವಾಸದ 28 ನೆಯ ಪದ್ಯದಲ್ಲಿ "ಪಾಲುಂಡು ಮೇಲುಂಬುದೇ" ಎಂಬ ವಾಕ್ಯವನ್ನು ಸೇರಿಸಿದ್ದಾನೆ ; ಈ ವಾಕ್ಯವು ಪಾಲ್ಕುರಿಕೆ ಸೋಮನಾಧನ (ಸು 1195) ಸೋಮೇಶ್ವರಶತಕದಲ್ಲಿ ದೊರೆವುದರಿಂದ ಆಕವಿಯ ಕಾಲಕ್ಕಿಂತ ಇವನು ಈಚೆಯವನಾಗಿರಬಹುದು ; ಎಷ್ಟು ಈಚೆಯವನೋ ಹೇಳಲು ಸಾಧ್ಯವಲ್ಲ, ಸುಮಾರು 1500ರಲ್ಲಿ ಇದ್ದಿರಬಹುದೆಂದು ತೋರುತ್ತದೆ. ಈ ವಿಷಯದಲ್ಲಿ ಹೀಗೆಯೇಸರಿ ಎಂದು ಖಂಡಿತವಾಗಿ ಹೇಳಲಾರೆವು, ಷಡಕ್ಷರಿಗೂ (1655) ಇವನಿಗೂ ಹಲವುಕಡೆ ಹೋಲಿಕೆಗಳು ದೊರೆಯುತ್ತವೆ ಆದರೆ ಷಡಕ್ಷರಿಗಿಂತ ಈಚೆಯವನೆಂದು ನಿರ್ಧರಿಸಿ ಹೇಳುವುದಕ್ಕಾಗುವುದಿಲ್ಲ,

- ಹಿಂದಣ ಸಂಸ್ಕೃತಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸಿದ್ದಾನೆ:-

   ಭಲ್ಲಟನೋಜೆ ಬಾಣನ ಜಸಂ ಭವಭೂತಿಯ ಸಂದ ಬಿನ್ನಣಂ |
   ಬಿಲ್ಹಣನುಕ್ತಿ ಭಾರವಿಯ ರೀತಿ ಮಯೂರನ ಬಂಧಗೌರವಂ |
   ಮಲ್ಹಣನಚ್ಛಭಕ್ತಿ ವರಮಾಘನ ಜಾಣ್ಣುಡಿ ದಂಡಿಯೊಳ್ವು ವಾ | 
   ಗ್ವಲ್ಲಭಕಾಳಿದಾಸನ ರಸಂ ನೆಲಸಿರ್ಕೆ ಮದೀಯಕಾವ್ಯದೊಳ್ ||.
   ತನ್ನ ಕವಿತಾಚಾತುರಿಯನ್ನೂ ಗುಣಾದಿಗಳನ್ನೂ ಈಪದ್ಯಗಳಲ್ಲಿ 
   ಹೇಳಿಕೊಂಡಿದ್ದಾನೆ-
   ವರ್ಣಕವಸ್ತು ಕಕವಿಜನ | ಕರ್ಣಾಭರಣಂ ಶಿವೈಕಸಮುದಯಪೀಯೂ |