ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ)

                          ನಿಜಗುಣ ಶಿವಯೋಗಿ,                    169

ಶಂಕರಭಾಷ್ಯಕ್ಕೆ ವೃತ್ತಿ-ಸಂಚಪಾದಿಕೆ, ರಾಮಾನಂದೀಯ, ಬ್ರಹ್ಮವಿದ್ಯಾಭರಣ ಮುಂತಾದ ಅನೇಕವ್ಯಾಖ್ಯಾನಂಗಳ್ ತಚ್ಛಿಷ್ಯರಿಂ ರಚಿಸಲ್ಪಟ್ಟುವು ಆ ಶಂಕರಧಾ ಷ್ಯಕ್ಕೆ ತಾತ್ಪರ್ಯಬೋಧಕಮಾಗಿ ವಾಚಸ್ಪತಿಮಿಶ್ರರಿಂ ಭಾಮತಿಯೆಂಬ ವ್ಯಾಖ್ಯಾನಂ ಮಾಡಲ್ಪಟ್ಟಿತದಕೆ ಕಲ್ಪತರುವೆಂಬ ವ್ಯಾಖ್ಯಾನವದಕೆ ಕೌಸ್ತುಭವೆಂಬ ಟೀಕೆ ಇಂತು ಸಿದ್ಧಾಂತಿತಮಾದ ಗ್ರಂಧಜಾತವೆ ವೇದಾಂತಶಾಸ್ತ್ರವೆನಿಸಿಕೊಳುತಿರ್ಕು೦

                       ವಿಘ್ನತ್ರಯ ಪರಿಹಾರ,

ಅಂತಾಮುಕ್ತಿಗೆ ಪ್ರತಿಬಂಧಂಗಳಾದ ಮೂರು ವಿಘ್ನೆಂಗಳನೆಂತು ನಿವಾರಿಸಲ ಕ್ಕುಮೆನೆ-ಶ್ರವಣಮನನಿಧಿಧ್ಯಾಸನಂಗಳೆಂಬ ಪ್ರಾಯಶ್ಚಿತ್ತರೂಪಮದ ಮಂಗಳಂ ಗಳಿ೦ ಕ್ರಮಮಾಗಿ ವಿಘ್ನತ್ರಯವಳೆವುದು.ಆಪ್ತವಚನದಿಂದಾಶೌಚಶ್ರವಣವಾಗಲು ತಾನು ಸೂತಕಿಯೆಂದು ದೃಢತರವಾಗಿ ನಂಬುವಂತೆ ಪ್ರತ್ಯಗಾತ್ಮಬ್ರಹ್ಮಗೈಕ್ಯತಾತ್ಪ ರೄವನಧರಿಸುವುದೆ ಶ್ರವಣವೆನಿಸುವುದಾಗಿ ಇದರಿಂದ ಸಂಭಾವನೆ ನಿರಾಕೃತ ಮಕ್ಕುಂ.ಅಂತು ಶ್ರುತಮಾದ ವೇದಾಂತಾರ್ಧಮಂ ಸದ್ಯುಕ್ತಿಸತ್ತರ್ಕ೦ಗಳಿ೦ ಚಿಂತ ನಂಗೈವುದೆ ಮನನವೆನಿಸುವುದು. ಇದರಂ ಸಂಶಯಭಾವನೆ ನಿವೃತ್ತಮಕ್ಕುಂ. ಆ ಶ್ರವಣಮನನಂಗಳ ದೆಸೆಯಿಂದೆ ದೃಢತರಮಾಗಿ ನಿಶ್ಚಿತಮಾದರ್ಧಮಂ ನಿಶ್ಚಲಚಿತ್ತ ದಿಂದತುಸಂಧಾನಂಗೊಂಡು ಬ್ರಹ್ಮಾಕಾರಾಂತಃಕರಣನಾಗಿರ್ಪುದೆ ನಿಧಿಧ್ಯಾಸನವೆನಿಸುವುದು, ಇದರಂ ವಿಪರೀತಭಾವನೆಯೆಂಬ ವಿಘ್ನಂ ಪರಿಹಾರಮಕ್ಕುಂ.

                           ಅಜಹಲ್ಲಕ್ಷಣೆ.
ಕುಂತಾಃ ಪ್ರವಿಶಂತಿ ಎಂಬಲ್ಲಿ ಅಚೇತನಂಗಳಾದ ಕುಂತಾಯುಧಂಗಳ್ ಚೇತನ ಸಂಬಂಧಮಿಲ್ಲದೆ ಪ್ರವೇಶಿಸುವುದನುಪಪನ್ನಮಾಗಿ ಕುಂತಶಬ್ದಂ ತನಗೆ ವಾಚ್ಯಾರ್ಧ ಮಾದ ಕುಂತಾಯುಧಂಗಳಂ ಬಿಡದೆ ಕುಂತಧಾರಿಗಳಂ ಲಕ್ಷಿಪುದೆ ಅಜಹಲ್ಲಕ್ಷ್ಯರ್ಧ ಮೆನಿಸುವುದು.
                       7 ಪರಮಾರ್ಥಪ್ರಕಾಶಕ.

ಇದು ಚೆನ್ನಸದಾಶಿವಯೋಗಿಕೃತ ಶಿವಯೋಗಪ್ರದೀಪಿಕೆಗೆ ಕನ್ನಡ ವ್ಯಾಖ್ಯಾನ; ಪರಿಚ್ಛೇದ 5, ಸಂಸ್ಕೃತಜ್ಞಾನವಿಲ್ಲದ ಮೋಕ್ಷಾಪೇಕ್ಷಿಗಳಿಗೆ ಸುಲಭವಾಗಿ ತಿಳಿವಂತೆ ಈ ವ್ಯಾಖ್ಯಾನವನ್ನು ಬರೆದುದಾಗಿ ಕವಿ ಹೇಳುತ್ತಾನೆ.