ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಕರ್ಣಾಟಕ ಕವಿಚರಿತ. [15ನೆಯ ಬಸವಣ್ಣನಾದ ಷಟ್ಟಲಾನುಭಾವಜ್ಞರು ಪೇಟಿ ಪ್ರಸಾದವಾಕ್ಯಂಗಳ ಸಮ್ಮತಿಯಿಂದ ನಾನು ಬಲ್ಲಂತೆ ಕನ್ನಡಿಸಿದ ನುಡಿಗಳೊಳಗೆ ಇತ್ಯಾದಿ.

      ಈ ವಿವರಣಕಾರನು ಸುಮಾರು 1560ರಲ್ಲಿ ಇದ್ದಿರಬಹುದು ಎಂದು ಊಹಿಸುತ್ತೇವೆ.
           --------------------
              ಮಾಧವ, ಸು 1500           ಈತನು ಮಾಧವಾಲಂಕಾರವನ್ನು ಬರೆದಿದ್ದಾನೆ. ಇವನು ಬ್ರಾಹ್ಮ ಕವಿ, ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ'-ಕುಂತಳ ದೇಶದ ಹರಗಟನಾಡ ಹಿರಿಯೂರಪ್ರಭುವಾದ “ ವಾಜಿಕುಲತಿಲಕ ಕೌಂಡಿ 'ಗೋದ್ಭವ ಪ್ರಭುಲಲಾಮ ಆಹವಭೀಮ ಹರಪಾದಾಂಬುಜಶೃಂಗ' ಆದಿರಾಜ ; ಇವನ ಮಗ ದೇವರಸ; ಇವನ ಮಗ “ಶಿವಪಾದಾಂಬುಜಚಂ ಚರೀಕ ವಿದ್ಯಾನಟೀನೃತ್ಯಮಂದಿರ ರಿಪುಸೈನ್ಯ ಶೈಲಸುರನ ದ್ವಿಜಕುಳಾಕಲ್ಪ ಸಕಲವಿದ್ಯಾಮಾಧವೀಮಾಧವ ” ಹಿರಿಯೂರಪ್ರಭು ಮಾಧವ, ಇವನೇ ಕವಿ, ಮೇಲಣ ವಿಶೇಷಣಗಳಿಂದ ಇವನು ಅಧಿಕಾರಿಯಾಗಿಯೂ ಶೂರ ನಾಗಿಯೂ ಇದ್ದಂತೆಯೂ ತಿಳಿಯುತ್ತದೆ, ಆಶ್ವಾಸಾಂತ್ಯಗದ್ಯಗಳಲ್ಲಿ ತಾನು ಮೇಲುಕೋಟೆಯ ನಾರಾಯಣಸ್ವಾಮಿಯ ಭಕ್ತನೆಂದು ಹೇಳುತ್ತಾನೆ. ಇವನ ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ. ತನ್ನ ಪಾಂಡಿತ್ಯವನ್ನೂ ಗುಣಾದಿಗಳನ್ನೂ ಈ ಪದ್ಯಗಳಲ್ಲಿ ಹೇಳಿಕೊಂಡಿ ಪ್ಲಾನೆ:-

ಭರತಂ ಛಂದಮಳಂಕೃತಂ ಮದನಶಾಸ್ತ್ರಂ ಗಾರುಡಂ ಚಾಸವಿ | ದೈ . ಸ, ಪಾ . ನಿಘಂಟು ಕಲ್ಪಿತಲಿಪಿ ಪ್ರಖ್ಯಾತಶಿಲ್ಪಿ ಕ್ರಮಂ | ಕರಣಂ ವ್ಯಾಕರಣಂ ಸಮಸ್ತಶಕುನಂ ನಾನಾವಧಾನಂಗಳೀ | ಹಿರಿಯೂರಪ್ರಭು ಮಾಧವಾಂಕನೊಳೆ ತೋರ್ಕು೦ ನೋಡೆ ಭೂಭಾಗದೊಳ್ || ವಿವಿಧಾಲಂಕಾರಮೊಲ್ಪಂ ಪಡೆಯೆ ಸರಸರೇಖಾ ವಿಳಾಸಂ ಬೆಡಂಗಾ | ನೆ ವಿನೂತಾನೇಕಭಾವಂ ನೆಗಟ್ಟಿ ಸೆರೆ ಸದನ್ಯಾಸಮಿಂಬಾಗೆ ವಾಲ್ಮಾ | ರ್ದವವತ್ಯಾನಂದವಂ ಮುಂದಿಡೆ ವರಕವಿತಾಕಾಂತೆಯಂ ಸತ್ತಳಾಸೌ | ಷ್ಣ ವದಿಂದುತ್ಸಾಹಮಂ ಪಟ್ಟಿ ಸಿ ತನಗೆ ವಶಂಮಾಡಿದಂ ಮಾಧವಾಂಕಂ || ಸರಸತೆಯಿಂ ನಾನಾಲಂ | ಕರಣಾಭಿಜ್ಞಾನದಿಂದ ಕರ್ಣಾಟಕಳ |