ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಬಿರುದುಗಳು, 175

ರೆಯೋ ತಿಳಿಯದು. ಇವರ ಕಾಲವು ಸುಮಾರು 1500 ಆಗಿರಬಹುದೆಂದು ತೋರುತ್ತದೆ.

                                          ---

ಹದಿನಾರನೆಯ ಶತಮಾನದ ಕವಿಗಳ ಚರಿತವನ್ನು ಬರೆವುದಕ್ಕೆ ಮುಂದೆ ಕೆಲವು ಪದ್ಯಗಳಲ್ಲಿ ದೊರೆವ ಕವಿಗಳ ಬಿರುದುಗಳ ವಿಷಯವಾಗಿ ಒಂದೆರಡು ಮಾತುಗಳನ್ನು ಹೇಳುವುದು ಅವಶ್ಯಕವೆಂದು ತೋರುತ್ತದೆ.

                                    ಬಿರುದುಗಳು ಸು. 1500 

ಈ ಕೆಳಗೆ ಕೊಟ್ಟಿರುವ ಬಿರುದುಗಳು ಕೆಲವು ನೀತಿಬೋಧಕವಾದ ಪದ್ಯಗಳಲ್ಲಿ ದೊರೆಯುತ್ತವೆ. ಇವು ಆವ ಕವಿಗಳಿಗೆ ಅನ್ವಯಿಸುತ್ತವೆಯೋ ತಿಳಿಯದು. ಕವಿಗಳು ಸ್ವಕೃತಪದ್ಯಗಳ ಕೊನೆಯಲ್ಲಿ ತಮ್ಮ ಹೆಸರುಬಿರುದುಗಳನ್ನು ಹೇಳಿಕೊಳ್ಳುವ ಸಂಪ್ರದಾಯವಿರುವುದರಿಂದ ಈ ಬಿರುದುಗಳಲ್ಲಿ ಕೆಲವಾದರೂ ಕವಿಗಳಿಗೆ ಅನ್ವಯಿಸಬಹುದೆಂದು ತೋರುತ್ತದೆ. ಆದರೆ ಕವಿಗಳು ಇಂಥವರು, ಈಕಾಲದವರು ಎಂದು ನಿರ್ಣಯಿಸುವುದು ಸಾಧ್ಯವಲ್ಲ. ಸುಮಾರು 1500 ಎಂದು ಸ್ಥೂಲವಾಗಿ ಕಾಲವನ್ನು ಮೇಲೆ ಕೊಟ್ಟಿದ್ದೇವೆ. ಈ ಬಿರುದುಗಳಲ್ಲಿ ಕೆಲವು ಕವಿಗೆ ಸಂಬಂಧವಿಲ್ಲದೆ ಶ್ರೋತೃವಿಗೆ ಅನ್ವಯಿಸಬಹುದು.

                                        ಬಿರುದುಗಳು 
  ಕನ್ನಡಜಾಣ, ಕವಿಪಂಚಮಾರ್ಗಣ, ಗುಣರತ್ನ, ಚಂದನತಿಲಕ, ಚೂಡಾರತ್ನ, ಜಿನಮುನಿಪಾದ, ಬಲ್ಲವರರಸ, ಬುಧಜನಮಿತ್ರ, ಭೂಭುಜರತ್ನ, ಭೂಸುರತಿಲಕ, ಮದನಾಂಗನಾಶನ, ವರಕವಿಚಂದ್ರ, ವಾಣೀಮುಕುರ, ವಿದಗ್ಧಚೂಡಾರತ್ನ, ವಿದಗ್ಧಲಲಾಮ, ವಿವೇಕಚೂಡಾರತ್ನ, ವೈರಾಗ್ಯನಿಧಿ, ಸರಸ್ವತೀಮಣಿಹಾರ, ಸರಸ್ವತೀಮುಖತಿಲಕ, ಸುಕವಿಕಂಠಾಭರಣ, ಸುಕವಿಚೂಡಾರತ್ನ, ಸುಕವಿನಿಕರನಿಳಿಂಪ, ಸುಗುಣಕಂಠಾಭರಣ, ಸುಗುಣಕರಂಡ, ಸುಗುಣರತ್ನಕರಂಡ, ಸುಗುಣಾಭರಣ, ಸುಜನಮನೋಜ, ಸುಜನಮುಖಮಣಿಮುಕುರ, ಸುಜನೈಕಬಾಂಧವ.
  ಈ ಬಿರುದುಗಳು ಬರುವ ಕೆಲವು ಪದ್ಯಗಳನ್ನು ಕೆಳಗೆ ಬರೆಯುತ್ತೇವೆ--
                                        ಕನ್ನಡಜಾಣ 

ಪೊಸಕಾಲದ ನವಿಲಾಟಂ | ಸಿಸುಗಳ ಮುದ್ದಾಟ ಹರಿಣಹರಿಣಿಯ ನೋಟಂ | ರಸಕವಿಗಳ ಕರ್ಣಾಟಂ | ಶಶಿಮುಖಿಯೊಡಗೂಟದಂತೆ ಕನ್ನಡಜಾಣಾ ||