ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

174 ಕರ್ಣಾಟಕ ಕವಿಚರಿತೆ. [13 ನೆಯ

ಸ್ವರವಾಕಸ್ಮೀಕಚೇಷ್ಟಾ ಗತಿಸಮುದಯಮುಂ ರಾಜ್ಯಮುಂ ಸೇವೆಯುಂ ಬಂ| ಧುರದೃಷ್ಟ್ಯಘ೯೦ ವಿವಾಹಂ ಬೆಳೆ ರುಜೆ ಗಮನಂ ಗರ್ಭಮುಂ ದ್ಯೂತನಷ್ಟಂ|| ವರಚೋರಂ ಬಂಧನಂ ಭೋಜನಮತಿಶಯನಿಕ್ಷೇಪಮೆಂದೆಂಬ ನಾನಾ | ಪರಿಯಿಂ ಸರ್ವಾಧಿಕಾರಂಗಳನೆ ಶಕುನದಿಂ ಪೆಲ್ದಿನೀಚಾಕರಾಜಂ ||

ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ-

ಇದು ಸಕಲಜನಮನೋರಂಜನಂ ಪಿಂಗಲಿಶಾಸ್ತ್ರಸಮುದಿತತ್ರಿ ಕಾಲಜ್ಞಾನೋದಯಂ ಶ್ರೀಚಾಕರಾಜವಿರಚಿತಮಪ್ಪ ಶಕುನಪ್ರಪಂಚದೊಳ್

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇನೆ-

ಕಳಸಂ ಕನ್ನಡಿ ಎಪ್ರಸಂಕುಳಮು, ದ್ಯಾನಮುಂ ಗೀತಮಂ | ಗಳಸದ್ವಾಕ್ಯ ಪತಾಕೆ ತೋರಣ ಗಜಂ ಮೇಣಶ್ವ ಸೌಗಂಧಮು || ಜ್ವಳಸತ್ಪುಷ್ಪಫಲಾಳಿಯುಂ ಮೊಸರು ಪಾಲುಂ ತುಪ್ಪಮಿಂತೆಲ್ಲಮುಂ | ತಿಳಿಯಲ್ಕೊಳ್ಳಿದುವೆಂದು ಪೇಲ್ದಿನೊಲವಿಂ ಶ್ರೀಲಕ್ಖರಾಜಾತ್ಮಜಂ || ಮದುವೆಯ ಗೃಹದೊಳ್ಪಕ್ಕಿಯು | ಮುದದಿಂ ಶಿಖರವದಿನಂತರಾಳದಿ ಕೂಗಲ್ | ಮದುವೆಯುಮಕ್ಕುಂ ಕಡೆಯೊಳ್| ಮದವಳಿಗೆಯು ಬೇರದೊರ್ವಗಂ ವಧುವಪ್ಪಳ್ || ಸಲೆ ಮಧ್ಯಾಹ್ನಂಬರಂ ಸೇವೆಗಳು ಸಮಮುವಾಗಲ್ಕೆ ಮೇಣ್ ಬೈಗುಮುಟ್ಟಂ| ಬಳಿವೆಂತುಂ ತೋರಲಾಗಳ್ ಸಮಮನೊಡನೆ ಬಾಯ್ಕೊಳ್ವೊಡಂ ಮತ್ತೆ ಗೀತಂ || ಗಳುಮೆಂತುಂ ಭಾವಿಸಲ್ಕಾವಿಷಮಮೆನಿಪೊಡಂ ಪ್ರಾಜ್ಯಸಾಮ್ರಾಜ್ಯಮಕ್ಕುಂ| ತಿಳಿ ನೀನೆಂದೈದೆ ನೋಲ್ಪರ್ಗುಸಿರಿದನೊಲವಿಂ ಕೂರ್ತು ತಾಂ ಚಾಕರಾಜಂ||

                   ---
       ರೇಚುಗ, ಕುಂತಿ, ಚವುಂಡಿ, ಸು 1500°  
ಮುದ್ರಿತವಾಗಿರುವ ನೀತಿಸಾರವೆಂಬ ಗ್ರಂಥದಲ್ಲಿಯ ವರರುಚಿ ಕಾಳಿದಾಸ ಸುಕುಮಾರಕುಮಾರಕವ್ಯಾಸ ಬಾಣನುಂ |

ಹರಿಹರಸಾರ್ವಭೌಮಕವಿ ರನ್ನನು ರೇಚುಗ ದುರ್ಗಸಿಂಹನುಂ | ವರಕವಿಬತ್ತಲೇಶ್ವರನು ರಾಘವನಗ್ಗಳರುದ್ರಭಟ್ಟನುಂ | ತುರಗಮಯೂರಹಂಪುಗನು ಕುಂತಿಚವುಂಡಿಯರೇ ಕವೀಂದ್ರರು || ಎಂಬ ಪದ್ಯದಲ್ಲಿ ರೇಚುಗ, ಕುಂತಿ, ಚವುಂಡಿ ಎಂಬವರನ್ನು ಕವಿಗಳ ಗೋಷ್ಠಿಯಲ್ಲಿ ಸೇರಿಸಿದೆ, ಇವರು ಆವ ಗ್ರಂಥಗಳನ್ನು ಬರೆದಿದಾ