ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಚಾಕರಾಜ. 173

     ಇವನ ಗ್ರಂಥ
                              ಶಕುನಸಾರ 
     ಇದು ವೃತ್ತದಲ್ಲಿ ಬರೆದಿದೆ ; ಅಧಿಕಾರ 8, ಪದ್ಯ 312. ನಮಗೆ ದೊರೆತ ಪ್ರತಿ ಬಹಳ ಅಶುದ್ದವಾದುದು. ಗ್ರಂಧಾವತಾರದಲ್ಲಿ ಶಿವಸ್ತುತಿ ಇದೆ. ಇದರಲ್ಲಿ ಪ್ರತಿಪಾದಿತವಾದ ವಿಷಯಗಳು ರಾಜ್ಯ, ಓಲಗ, ಯಾತ್ರೆ ಲಾಭ, ಮಳೆ, ಫಲಾರ್ಘ, ವಿವಾಹ, ಗರ್ಭ, ಪುತ್ರೋತ್ಪತೀ, ಜಯ, ಆಕಸ್ಮಿಕಕಾಲ ಇತ್ಯಾದಿ.
     ಈ ಗ್ರಂಥದಿಂದ ಒಂದು ಪದ್ಯವನ್ನು ಉದ್ಧರಿಸಿ ಬರೆಯುತ್ತೇವೆ-
   ಎಡದೊಳ್ ಪಿಂಗಲಿ ಸುಸ್ವರಂಗಳಸಮಂಗಳ್ ಮಾಡೆ ಮೇಣಾವಗಂ |
   ಕೊಡೆ ದುಶ್ಯಬ್ದ ಮುಮಂ ಸಮಂಗಳುಂ ಪೋಗಕ್ಕೆ ತನ್ನಿ ಷ್ಟಮಂ ||
   ಪಡೆಗಂತಲ್ಲದೆ ಸುಸ್ವರಂ ? ವಿಟಸಮಂಗಳ್ಕಾಗಿ ಬಾಯ್ಕೊಂಡೊಡಾ |
   ನುಡಿಗೇಳುತ್ತದೆ ಪೋದವಂಗೆ ಪಿರಿದುಂ ಕೈಗೂಡದೊಳ್ವಾವಗಂ ||
                               _ _ _
                           ಚಾಕರಾಜ ಸು I500
     ಈತನು ಶಕುನಪ್ರಪಂಚವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿ ಎಂದು ತೋರುತ್ತದೆ; ಇವನ ತಂದೆ ಲಕ್ಟರಾಜ. ನಮಗೆ ದೊರತ ಈತನ ಗ್ರಂಥದ ಪ್ರತಿ 1714ರಲ್ಲಿ ಬರೆದುದು. ಕವಿಯ ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ. ಹಿಂದೆ ಶಕುನಶಾಸ್ತ್ರವನ್ನು ಬರೆದವರಲ್ಲಿ ವಸಿಷ್ಠ, ಗಾರ್ಗ್ಯ, ಲಾಕುಳನಾಥ, ವಸಂತರಾಜ ಇವರುಗಳ ಹೆಸರನ್ನು ಕವಿ ಹೇಳಿದ್ದಾನೆ. 
     ಇವನ ಗ್ರಂಥ
                             ಶಕುನಪ್ರಪಂಚ
     ಇದು ಕಂದವೃತ್ತಗಳಲ್ಲಿ ಬರೆದಿದೆ; ಅಧ್ಯಾಯ 25, ಪದ್ಯ 620. ಇದಕ್ಕೆ ಸಿಂಗಲಿಯಶಾಸ್ತ್ರ, ಪಿಂಗಲಿಯಶಕುನ ಎಂಬ ಹೆಸರುಗಳೂ ಉಂಟು, ಗ್ರಂಥಾವತಾರದಲ್ಲಿ ಪಂಪಾವಿರೂಪಾಕ್ಷಸ್ತುತಿಯಿದೆ. ಬಳಿಕ ಕವಿ ಗಣೇಶ, ಸರಸ್ವತಿ ಚಾಮುಂಡಿ, ದಿಕ್ಪಾಲರು ಇವರುಗಳನ್ನು ಸ್ತುತಿಸಿ “ಒಂಗಲಿಯ ಶಾಸ್ತಾನೀಕಸಾರಂಗಳಂ ಬೇಳ್ವೆಂ ” ಎಂದು ಗ್ರಂಥವನ್ನು ಆರಂಭಿಸಿದ್ದಾನೆ. ಇದರಲ್ಲಿರುವ ವಿಷಯಗಳು ಈ ಪದ್ಯದಲ್ಲಿ ಸೂಚಿಸಿವೆ: