ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172 ಕರ್ಣಾಟಕ ಕವಿಚರಿತೆ, [15 ನೆಯ

                     ಕಲ್ಯಾಣದಸ್ವಾಮಿ ಸು 1500
   ಈತನು ಕಾರಣಾಗಮದ ವಾರ್ಧಕವನ್ನು ಬರೆದಿದ್ದಾನೆ. ಇವನು ವೀರಶೈವಕವಿ; ಸುಮಾರು 1500ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.
    ಇವನ ಗ್ರಂಥ
                      ಕಾರಣಾಗಮದವಾರ್ಧಕ
    ಇದು ವಾರ್ಧಕಷಟ್ಪದಿಯಲ್ಲಿ ಬರೆದಿದೆ; ಪದ್ಯ 25. ಇದರಲ್ಲಿ ಶೈವಾಗ ಮಗಳಲ್ಲಿ ಒಂದಾದ ಕಾರಣಾಗಮದ ವಿಷಯಗಳು ಸಂಗ್ರಹವಾಗಿ ಹೇಳಿವೆ.
                            _ _ _
                       ಯಶಃಕೀರ್ತಿ ನು 1500
    ಈತನು ಧರ್ಮಶರ್ಮಾಭ್ಯುದಯಕ್ಕೆ ಟೀಕೆಯನ್ನು ಬರೆದಿದ್ದಾನೆ. ಇ ವನು ಜೈನಕವಿ; ಲಲಿತಕೀರ್ತಿಯ ಶಿಷ್ಯನು. ಇವನ ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ. ಇವನ ಟೀಕೆಗೆ ಸಂದೇಹ ದ್ವಾಂತದೀಪಿಕೆ ಎಂದು ಹೆಸರು. ಟೀಕೆಯ ಕೊನೆಯಲ್ಲಿ ಈ ಗದ್ಯವಿದೆ:
    ಇತಿ ಶ್ರೀಮನ್ಮಂಡಲಾಚಾರ್ಯಲಲಿತಕೀರ್ತಿ ಶಿಷ್ಯಶ್ರೀಯಶಃಕೀರ್ತಿರಚಿತಾಯಾಂ ಸಂದೇಹದ್ವಾಂತದೀಪಿಕಾಯಾಂ
                             _ _ _
                        ಶುಭಚಂದ್ರ ಸು. 1500
    ಈತನು ನರಪಿಂಗಳಿಯನ್ನು ಬರೆದಿದ್ದಾನೆ. ಇವನು ಜೈನಕವಿ; ಸುಮಾರು 1500ರಲ್ಲಿ ಇದ್ದಿರಬಹುದೆಂದು ತೋರುತ್ತದೆ.
    ಇವನ ಗ್ರಂಥ
                            ನರಪಿಂಗಳಿ
    ಇದು ಕಂದದಲ್ಲಿ ಬರೆದಿದೆ ; ಪದ್ಯ 167. ಇದರಲ್ಲಿ ಜ್ಯೋತಿಷ ಸಂಬಂಧವಾದ ಕೆಲವು ವಿಷಯಗಳು ಹೇಳಿವೆ. ಗ್ರಂಥಾಂತ್ಯದಲ್ಲಿ-ಇದು ಶುಭಚಂದ್ರಸಿದ್ದಾಂತಯೋಗೀಂದ್ರವಿರಚಿತಮಪ್ಪ ನರಸಿಂಗಳಿ-ಎಂದಿದೆ.
                             _ _ _
                         ಲಕ್ಷಣಾಂಕ, ಸು, 1500
    ಈತನು ಶಕುನಸಾರವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ; ಕಮ್ಮವಂಶದವನು. ಇವನ ತಂದೆ ಮಲ್ಲಿನಾಥ, ಇವನು ಸುಮಾರು 1500ರಲ್ಲಿ ಇದ್ದಿರಬಹುದೆಂದು ತೋರುತ್ತದೆ.