ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಮಾನ] •ಬಾಚರಸ 171

ಗಳನಾರಾರುರ್ಕನಲ್ಲಾಡಿಸದು ಕೆಡಿಸದಾರರ ಬೀರಂಗಳಂ ಮಾ | ಯ್ಧಳಿಪೆನ್ನಂ ವೊರ್ದದತ್ತತ್ತಲೆ ತಳರ್ಗಿನಿಸಂ ಬೇಳ್ಪೆನರ್ಧೇಂದುಮೌಳೀ || ಸಿರಿಯುಳ್ಳಂದೇಳಿಪೆಂ ಪೂಜಿಪೆನೆಡರಿನೊಳತ್ಯರ್ಧದಿಂ ಪ್ರಾಯದೊಳ್ ಮಾಂ | ಕರಿಪೆಂ ಮುಪ್ಪಾಗಲಾಗಳ್ ನೆನೆಯಲೊಡರಿಪೆಂ ಸಂತಮಿರ್ದ೦ದು ಕಾಣೆಂ || ಶರಣೆಂಬೆಂ ನೋವುಸಾವಾದೆಡೆಯೊಳದಳೆನಾನೆಲ್ಲಿಯುಂ ಢಾಳನೈ ಶಂ | ಕರ ಕೈಕೊಂಡೆನ್ನು ಮಂ ಪಾಲಿಪುದು ಕರಮೆ ನಿರ್ವಾರ್ಯಜಮರ್ಧೇಂದುಮೌಳೇ ||

                              _ _ _
                          ಬಾಚರಸ ಸು 1500
    ಈತನು ಅಶ್ವವೈದ್ಯವನ್ನು ಬರೆದಿದ್ದಾನೆ. ಇವನು ಜೈನಕವಿ ಎಂದು ತೋರುತ್ತದೆ. ಇವನ ತಂದೆ ಚೌಂಡರಾಜ. ಇವನಿಗೆ ಸುಜನೈಕಬಾಂ ಧವ ಎಂಬ ಬಿರುದಿದ್ದಂತೆ ತಿಳಿಯುತ್ತದೆ. ಇವನ ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ.
    ಇವನ ಗ್ರಂಥ
                              ಅಶ್ವವೈದ್ಯ 
    ಇದರಲ್ಲಿ 35 ವೃತ್ತಗಳೂ ಕುದುರೆಗಳ ವರ್ಣ, ಸೆಲೆ ಮುಂತಾದ ವಿಷಯಗಳನ್ನು ಹೇಳುವ ಸ್ವಲ್ಪ ಗದ್ಯಭಾಗವೂ ಇವೆ. ತನ್ನ ಗ್ರಂಥದಲ್ಲಿ ಪ್ರತಿಪಾದಿತವಾದ ಅಂಶಗಳೇಮುಂತಾದ ವಿಷಯಗಳನ್ನು ಈ ಪದ್ಯದಲ್ಲಿ ಹೇಳಿದ್ದಾನೆ-
  ಸುಶ್ರುತಶಾಲಿಹೋತ್ರನಳವಾಕ್ಯದೊಳಂ ಹಯಚೇಷ್ಟೆ ರೂಪು ದಂ |
  ತ ಶ್ರವಣಾಕ್ಷಿ ವರ್ಣ ಸುಳು ನಾಲಗೆ ಗಂಧಶುಭಾಶುಭಂಗಳಂ ||
  ವಿಶ್ರುತಮೂವತೈದೆನಿಪ ವೃತ್ತದೊಳಂ ನೆಳೆ ಪೇಳ್ವೆನಾಗಮೈ | 
  ಕಾಶ್ರಯಚೌಂಡರಾಜಸುತಬಾಚರಸಂ ಸುಜನೈಕಬಾಂಧವಂ || 
       ಈ ಗ್ರಂಥದಿಂದ ಒಂದುಪದ್ಯವನ್ನು ತೆಗೆದು ಬರೆಯುತ್ತೇವೆ--

ಪೇರುರಮಾಗಿ ಮಾಂಸಲತೆವೆತ್ತು ಮಯೂರನ ಕರದಂದದಿಂ | ದೋರಣಮಾಗಿಯುಂ ನಿಡುಗೊರಲ್ ಕಡುಸಣ್ಣಮೆ ಗಂಡಮಂಡಲಂ || ಚಾರುಕವೋಲಮುಂ ತೆಳುಪವೆತ್ತೆಸೆಯಲ್ ಕಿವಿ ಸಣ್ಣಮಾಗಿಯುಂ | ನೇರಿದಮಾಗಿ ಮಣ್ಣುನಯಮಂ ಪಡೆಯಲ್ಕಿದು ರಾಜವಾಹನಂ ||