ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಬಿರುದುಗಳು. 177
ಕ್ಷಿತಿಯೊಳ್ ಕರ್ಣಾಟಂ ಸಂ | ಸ್ಕೃತಕಧಿಕಮದೆಂತೆನಲ್ಕೆ ಯವ್ವನೆಯಪ್ಪಾ | ಸತಿಯ ಸುರೂಪಂ ಜಾಣು | ನ್ನತಿ ರತಿಯೇನವ್ವೆಗುಂಟೆ ಚೂಡಾರತ್ನಾ |
ಬಲ್ಲವರರಸ ಪರವಧುವಿಂಗಳಿಪಿದೊಡಿಹ|ಪರ ಕೆಡುಗುಂ ನೃಪತಿ ಮುಳಿಗು ಗಂಡರ್ ಕೊಲ್ವರ್ | ಪುರದೊಳಗೆ ಹೊಲೆಯಕೆಲಳಾವರ್| ಪರವಧುವಿನ ಸಂಗ ಬೇಡ ಬಲ್ಲವರರಸಾ ||
ಬುಧಜನಮಿತ್ರ ಕುತ್ತದ ಹರವರಿ ಪಾಪದ | ಬಿತ್ತು ಪರಾಭವದ ಬೆಳಸು ಪಸಿದ ಕೃತಾಂತಂ | ಗೆತ್ತಿದ ಬೋನಂ ತನುವಿದ | ನಿತ್ಯಂ ತಾನೆಂದು ತಿಳಿಗೆ ಬುಧಜನಮಿತ್ರಾ ||
ಭೂಭುಜರತ್ನ ಒಡವೆಯನಿತ್ತುಂ ಸಂತತ | ಮೊಡನುಂಡುಂ ಕೂಸುಗೊಟ್ಟು ಮೆಂದುದನೆಂದುಂ|| ಕಡುಗೂರ್ತುಮಹಿತಒಲಮಂ | ಕಿಡಿಸುವುದುಚಿತಂ ನೃಪಂಗೆ ಭೂಭುಜರತ್ನಾ ||
ವಿದಗ್ಗಲಲಾಮ ನಡೆವೆಡೆಯೊಳ್ ನುಡಿವೆಡೆಯೊಳ್ | ಕುಡುವೆಡೆಯೊಳ್ ತನಗೆ ನಿಂದೆ ವೊರ್ದದತೆರದಿಂ। ನಡೆವುದು ನುಡಿವುದು ಕುಡುವುದು | ಪಡೆವುದು ಸತ್ಕೀರ್ತಿಯಂ ವಿದಗ್ನಲಲಾಮಾ || ಬಲ್ಲವರಿವರರಿಯದರಿವ | ರೊಲ್ಲದರಿವರೊಲ್ವರಿವರದೆನ್ನದೆ ಸಲೆ ಸಂ | ದೆಲ್ಲರ ಚಿತ್ತಕ್ಕಂ ಸಲೆ | ಬಲ್ಲೊಡವಂ ಬಲ್ಲವಂ ವಿದಗ್ಧ ಲಲಾಮಾ ||
ವಿವೇಕಚೂಡಾರತ್ನ ಪರಾವಾವುದು ಕುಲಭಂಗಂ | ತಿಳಿವಾವುದು ಸಮತೆ ಬಂಧವಾವುದು ಮೋಹಂ | ಕಳವಾವುದನೃತವೆಡರಿ೦ | ದುಳಾವಾವುದು ಧೃತಿ ವಿವೇಕಚೂಡಾರತ್ನಾ || ಒಂದನೆಯ ಮಂಗರಾಜನ (ಸು, 1360) ಖಗೇಂದ್ರಮಣಿದರ್ಪಣ ದಲ್ಲಿ ವಿವೇಕಚೂಡಾರತ್ನ, ವಿದಗ್ದಚೂಡಾರತ್ನ, ಬುಧಮಿತ್ರ ಎಂದು ಮುಗಿ ವ ಕೆಲವು ಪದ್ಯಗಳು ದೊರೆಯುತ್ತವೆ. ವೈರಾಗ್ಯನಿಧಿ ಮುಚ್ಚದ ಹಟಿಹುಣ್ಣಂ ಕೊಳೆ | ಬಚ್ಚಲ ಕುಚಿ ಕೀವಿನೊರತೆಯಿವನಂಗನೆಯರ್ | ಮುಚ್ಚಿ ಮುಸುಕಿಟ್ಟು ಲೋಕ | ಕ್ಕಚ್ಚುಗಮಂ ಮಾಳ್ಪರ್ರೈಸೆ ವೈರಾಗ್ಯನಿಧೀ || I Vol. 1, 337,
23