ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಮಂಗರಸ III' 179
ಹದಿನಾರನೆಯ ಶತಮಾನದ ಕವಿಗಳು.
-------------------------
ಮಂಗರಸ! III 1508.
ಈತನು ಜಯನೃಪಕಾವ್ಯ, ಪ್ರಭಂಜನಚರಿತೆ, ಶ್ರೀಪಾಲಚರಿತೆ, ನೇಮಿಜಿನೇಶಸಂಗತಿ, ಸಂಯಕ್ತ್ವಕೌಮುದಿ, ಸೂಪಶಾಸ್ತ್ರ ಈ ಗ್ರಂಥಗ ಳನ್ನು ಬರೆದಿದ್ದಾನೆ.
ಇವನು ಜೈನಕವಿ; ಇವನ ಪಿತಾಮಹನು ಮಾಧವ; ತಂದೆ ಯದು ವಂಶದ ಮಹಾಮಂಡಲೇಶ್ವರ ಚೆಂಗಾಳ್ವನೃಸರ ಸಚಿವಕುಲೋದ್ಭವನಾದ, ಉದ್ದವಕುಲಚೂಡಾಮಣಿ ಶಾರ್ದೂಲಾಂಕನೆನಿಸಿದ, ಹೊಯ್ಸಳದೇ ಶದ ಮಧ್ಯದಲ್ಲಿರುವ ಹೊಸವೃತ್ತಿಯನಾಡ ಮಹಾಪ್ರಭು ಕಲ್ಲಹಳ್ಳಿಯ ವಿಜ ಯಭೂಪಾಲ ; ತಾಯಿ ದೇವಿಲೆ : ಗುರು ಚಿಕ್ಕ ಪ್ರಭೇಂದು, ಈತನಿಗೆ ಪ್ರಭುರಾಜ, ಪ್ರಭುಕುಲರತ್ನದೀಪ ಎಂಬ ಬಿರುದುಗಳಿದ್ದಂತೆ ತಿಳಿಯುತ್ತದೆ. ವಿಜಯಭೂಪಾಲನು “ಚೆಂಗಾಳ್ವನೃಪರ ದಂಡನಾಥಕುಲತಿಲಕಂ” ಎಂದೂ " ರಣಕಭಿನವವಿಜಯಂ ” ಎಂದೂ ಹೇಳಿರುವುದರಿಂದ ಆತನು ಯುದ್ಧ ವೀರನಾಗಿದ್ದಂತೆ ತೋರುತ್ತದೆ. ಸಂಯಕ್ತಕ್ಕೌಮುದಿಯನ್ನು ಶಕ 1431ರಲ್ಲಿ, ಎಂದರೆ 1508ರಲ್ಲಿ ಬರೆದಂತೆ ಕವಿ ಹೇಳುತ್ತಾನೆ.
ಪೂರ್ವಕವಿಗಳನ್ನು ತಮ್ಮತಕಾವ್ಯನಾಮದೊಡನೆ ನೇಮಿಜಿನೇಶಸಂ ಗತಿಯ ಈ ಪದ್ಯಗಳಲ್ಲಿ ಸ್ಮರಿಸುತ್ತಾನೆ----
ಪುರುಜೆನಪತಿಯ ಪುರಾಣಮನುಸಿರಿದ| ವರಕವಿಸಂಪರಾಜವನು |
ದುರಿತವಿದೂರಾಜಿತಚರಿತೆಯ ಪೇದ್ದ| ಗರುವರನ್ನನ ಸ್ತುತಿಸುವೆನು ||
ದೇವಚಂದ್ರಪ್ರಭರನು ಕೊಂಡಾಡಿದ| ಶ್ರೀವಿಜಯರ ಪುಷ್ಪದಂತ |
ಭಾವಜಾರಿಯ ಪೊಗಲಿದ ಗುಣವರ್ಮನ|ಭಾವಶುದ್ದಿಯೊಳು ನೆನೆವೆನು ||
ಪದಿನಾಲ್ಕನೆಯ ತೀರ್ಧಕರ ಚರಿತ್ರವ| ನೊದವಿ ಸೇರಿದ ಜನ್ನುಗನ |
ಮುದದಿಂದ ಧರ್ಮಚರಿತ್ರವನುಸಿರಿದ| ಚದುರಮಧುರನ ಸ್ತುತಿಪೆನು ||
ಶಾಂತೀಶನ ಮೊಗದ ಪೊನ್ನನ ರಘು | ಕಾಂತನ ಮಲ್ಲಿತೀರ್ಧಕರ |
ಸಂತಸದಿಂ ಪೊಗರದ ನಾಗಚಂದ್ರನ| ಸಂತತಮಭಿವಂದಿಸುವೆನು ||
1, Vol. 1, 336