ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                            ಗುಬ್ಬಿಯ ಮಲ್ಲಣಾರ್ಯ. 
ನಾಮನಂ ಸದ್ಗುಣಸ್ತೋಮನಂ ಬುಧಸಾರ್ವ |
ಭೌಮನಂ ಸಜ್ಜನಪ್ರೇಮನಂಶೀಲವಿ |
ಶ್ರಾಮನಂ  ಪಾಲ್ಕುರಿಕೆಸೋಮನಂ ಹೃಳ್ಳು ಮುದಧಾಮದೊಳ್ ಮಿಗೆ ಚಾನಿಸೆಂ || 
ಪರಮಸುಖವಾಸನಂ ವರಕಾಳಿದಾಸನಂ | ಕರವಾನಿಜಾಣನಂ ಶರಣನಹ ಬಾಣನಂ|
ನಿರುಪಮವಿಚಾರನಂ ಗರುವಮಾಯೂರನಂ ಪದ್ಮ ರಸರಂ ಸುರಸನಂ || 
ಹರಿಹರಕವೀಶನಂ ಗುರುಭಕ್ತಿ ಕೋಶನಂ|ಹರನ ಕಣ್‌ ಕೈಮೈಗಳಾಗಿ ತನುಮನವಿತ್ತ |
ಪರಿಣತರ ನೆನೆದು ಕೃತಿವೇಳ್ವನು.
  ಈತನನ್ನು ಚೇರಮ (156), ಸಿದ್ಧನಂಜೇಶ (ಸು. 1650), ಷಡಕ್ಷರದೇವ (1655)ಮೊದಲಾದ ಅನೇಕವೀರಶೈವಕವಿಗಳು ತಮ್ಮ ಗ್ರಂಧಗಳಲ್ಲಿ ಸ್ತುತಿಸಿದ್ದಾರೆ
  ಇವನ ಗ್ರಂಥಗಳಲ್ಲಿ
                          1 ಭಾವಚಿಂತಾರತ್ನ  
  ಇದು ವಾರ್ಧಕಷಟ್ಯದಿಯಲ್ಲಿ ಬರದಿಗೆ ; ಸಂಧಿ 9, ಪದ್ಯ 371. ಈ ಗ್ರಂಥಕ್ಕೆ ಸತ್ಯೇಂದ್ರಚೋಳಕಧೆ ಎಂಬ ಹೆಸರೂ ಉಂಟು ಇದಕ್ಕೆ ಭಾವಚಿಂತಾರತ್ನ ಎಂಬ ಹೆಸರನ್ನಿಡಲು ಕಾರಣವನ್ನು ಕವಿ 'ಕೃತಿಯ ಪಲ್ಲವತೊಡಗಿ ಪೂರ್ಣಮಸ್ಸನ್ನವಿನಾ | ಕೃತಿಯೊಳುತ್ವ್ರೆಕ್ಷೆಯಿಲ್ಲದುದೊಂದುಪದನಿಲ್ಲ | ಕೃತಿಗದುನಿಮಿತ್ತದಿಂ ಭಾವಚಿಂತಾರತ್ನೆವೆಂಬ 

ಪೆಸರು' ಎಂಬ ಪದ್ಯಭಾಗದಲ್ಲಿ ಹೇಳಿದ್ದಾನೆ. 'ತಿರುಜ್ಞಾನಸಂಬಂಧೀಶನು ಜಿನಮತ ವಿದಾರಣಂಗೈದು ತಿರುಪಾ ಟುಪದಿನಾರುಸಾವಿರವನೊರೆಯುತ ಕುಲಚ್ಚರೆಯ ಗೆಪ್ರಣವಪಂಚಾಕ್ಷರಿಯ ಮಹಿಮೆಯಂ ತಿಳುವೆ ಸತ್ಯೇಂದ್ರಚೋಳಭೂಪನ ಕಥೆಯಂ ದ್ರಾವಿಡದೊಳೊರೆದುದಂ' ತಾನು ಕನ್ನಡಿಸಿದಂತೆ ಹೇಳುತ್ತಾನೆ. ಇದರ ಕಧಾಗರ್ಭವು ಈ ಪದ್ಯದಲ್ಲಿ ಹೇಳಿದೆ-- ತರುಣಿ ಪೊರೆದಣುಗನಶ್ವದ ಖುರದ ಹತಿಯಿಂದ |

ಹರಭಕ್ತನಳಿಯಲದ ಕೇಳ್ದು ಕೊಲೆಯಂದಮಂ |
ಪರಿಕಿಸಿ ನಿಜಾತ್ಮಜಂ ಮೊದಲಳ್ತಿಗೆಂದ ನುಡಿಗಾಮುದ್ದುಮಗನ ತಲೆಯ ||
ಆರಿಸುವೆಡೆಯೊಳ್ ಮತ್ತೆ ಭಕ್ತ ವಧೆಯಂದು ನಿಜ | 
ಶಿರದೊಡನೆ ತರಿದೆಂಟುತಲೆಗಳಂ ಪಡೆದು ಶಂ |
ಕರನೂರ್ಗೆ ಪೋದ ಸತ್ಯೇಂದ್ರಚೋಳನ ಕಥೆಯನಿದ ಬೆಳಸಿ ಕೃತಿಮಾಳ್ಯನು |

25