ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

103

                               ಕರ್ಣಾಟಕ ಕವಿಚರಿತೆ.
   ಈ ಗ್ರಂಥವು ಪಂಚಾಕ್ಷರಿಯ ಮಹತ್ವದ ಬೋಧೆ ಎಂದು ಕವಿ ಹೇಳುತ್ತಾನೆ. ಇದನ್ನು 'ಕಲ್ಯಾಣದಾದಿಬಸವೇಶ್ವರಮಹತ್ವಮಂ ಕಲ್ಯಾಣವಾಗಿ ಶರಣರ್ಗಳಿಪುವ, ಶಿವನ ಕಲ್ಯಾಣದುತ್ಸವದ ನಾಗವಲ್ಲಿಯ ಮೆಳಿವ' ಶಿವಪೂಜೆಯಾರ್ಯತಿಯ ಆಜ್ಞಾನ ಸಾರವಾಗಿ ರಚಿಸಿದಂತೆಯೂ ನಾಗಲಿಂಗಯ್ಯನ  ಪೌತ್ರನೂ ಲಿಂಗಪ್ಪನ 1 ಪುತ್ರನೂ ಆದ ತನ್ನ ಭಕ್ತ ಚೇರಮಾಂಕನಿಗೆ ಹೇಳಿದಂತೆಯೂ ತಿಳಿಯುತ್ತದೆ.
   ಗ್ರಂಥಾವತಾರದಲ್ಲಿ ಭೋಗಮಲ್ಲೇಶನ ಸ್ತುತಿ ಇದೆ. ಬಳಿಕ ಕವಿ ಅಮರಗುಂಡದ  ಶರ್ವ, ಸಿದ್ಧಮಲ್ಲಿಕಾರ್ಜುನಗುರು,   ಭೃಂಗಿ, ನಂದಿ, ವೀರಭದ್ರ, ಅಲ್ಲಮ, ಬಸವ, ಚೆನ್ನಬಸವ, ಶಿವಲೆಂಕಮಂಚಣ್ಣ ಶ್ರೀಸತೀಶ್ವರ ಮಲ್ಲಿಕಾರ್ಜುನಪಂಡಿತರೆಂಬ ಪಂಡಿತತ್ರಯ, ಸಿದ್ಧರಾಮ, ಗೂಳೂರಶಾಂತದೇವ. ಗುಮ್ಮಳಾಪುರದಶಾಂತೇಶ, ಶಿವಪೂಜೆಯಾರ್ಯ , ಚಿಕ್ಕಬಸವಾಂಕ ಇವರುಗಳನ್ನು ಪರಿವಿಡಿಯಿಂದ ಸ್ತುತಿಸಿದ್ದಾನೆ.
   ಇವನ ಬಂಧವು ಪ್ರೌಢವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದರಿಸಿ ಬರೆಯುತ್ತೇವೆ-
                            ಮುನಿಗಳು 

ಪೂವಿಲ್ಲ ಗಡ ತನಗೆ ಕುಸುಮಶರನೆಂಬ ಪೆಸ | ರಾವಕಾರಣವಾದುದಳಿವೆದೆಯನಾಗಿ ಲೋ | ಕವಳಿಯ ಗೆಲ್ಧ ಬಗೆಯೆಂತು ಪೆಣ್ಮಕ್ಕಳಂ ಕೊಂದುಕೂಗಿಡುವ ತನಗೆ || ಕಾವನೆಂದೆಂಬ ಪೆಸರೇ ಮೈಯಳೆಯಬಾರ | ದಾವಿಗಡನವಿಚಾರದಿಂ ಲಜ್ಜೆ ಗೆಟ್ಟವಂ | ಗಾವಳ್ಕೆವೆಂದು ಮಾರನ ಜಳಿದು ತಪವಿರ್ದರಲ್ಲಿ ವರಸನ್ನುನಿಗಳು ||

                             ಭತ್ತದಮಡಿ

ಮೂಡೆಗಟ್ಟಂ ಕಟ್ಟಿ ಹುಡುಕುನೀರೊಳ್ ಮೆಟ್ಟಿ | ಕಾಡುತಿಹ ಪಾಮರರ ಕೈವಿಡಿತೆಗೊಳಗಾಗಿ | ನಾಡೆ ಪಂಕಂಬೊಗುತ್ತೆದೆಯೊಡೆದು ಪುಲ್ಗರ್ಚ ಕಂಟಕಂಬಡೆದೆವಿನ್ನು || ರೂಡಿಸಿದ ಕಾವೇರಿಯಿಕ್ಕೆಲನೊಳಿರ್ದು ಶಶಿ | ಚೊಡಂಗೆ ಸಲ್ವ ಪೀರೊಲ್ಮೆಯಂ ಪಡೆದವರ | ಕೂಡೆ ಬಾಯ್ವಿಡಿಸದಿರೆವೆಂದು ರಾಗಿಸುವ ಕಳಮೆಯ ಮಡಿಯ ಸಾಲ್ ಮೆಳಿದುವು|| 1 ಚೇರಮಕಾವ್ಯದಲ್ಲಿ ಗಂಗಪ್ಪ ಎಂದಿದೆ.