ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಗುಬ್ಬಿಯ ಮಲ್ಲಣಾರ್ಯ. 197

             ಗ್ರಂಥಾವತಾರದಲ್ಲಿ ಶಾಂತಮಲ್ಲಿಕಾರ್ಜುನಸ್ತುತಿ ಇದೆ. ಬಳಿಕ ಕವಿ 

ಬಿಟ್ಟ ಮಂಡೆಯಪ್ರಭು, ಸ್ವಗುರು ಶಾಂತನಂಜೇಶ, ಇವರುಗಳನ್ನು ಸ್ತುತಿಸಿ ದ್ದಾನೆ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ.

                                                                ಶಿವಸ್ತುತಿ 

ಶರದ ಮಗನೇ ಸೂತನವನ ಬಾಯೊಳಗಾದ | ತುರಗವಾನಿಜನೇತ್ರವೆರಡು ಗಾಲಿಗಳಗಜೆ | ಯರಸ ನೀಂ ನೊಗನ ತುದಿಯೊಳ್ ಕುಳಿತೆ ತಿರುವಿನಗ್ರದೊಳು ರಧವದರ ನಡುವೆ|| ಪರಮತೊಣೀರವಾಮಧ್ಯದೊಳು ಬಿಲ್ಲ೦ಬು | ನಿರುತೈಕವದಕೆ ಗುರಿ ಮೂರೆಂದೆನಿಪ್ಪ ಮು | ಪ್ಪುರಮಂ ಗೆಲಿದ ಚಿತ್ರತರಶಾಂತಮಲ್ಲೇಶಮೂರ್ತಿ ದಿಗ್ವರಿತಕೀರ್ತಿ ||

                                                           ಅರ್ಧನಾರೀಶ್ವರ 

ಪಣೆಗೆಣ್ಣು ಕತ್ತುರಿಯ ಬೊಟ್ಟು ಶಶಿರವಿನಯನ | ವಣಿಯರದ ಚೆಲ್ಲೆ ಗಂಗಳು ಗೇಯರಸವಾಂತ | ಫಣಿಕುಂಡಲದ ರತ್ನ ಕಿರಣದಾಪೊನ್ನೋಲೆ ಸುಲಿಪಲ್ಲು ಕೆಂಒಲ್ಗಳು | ಅಣಿಯರದ ಕರಿಗೊರಲು ರನ್ನ ದಾಳಿಯ ಬೆಳ್ಪು | ಪೆಣನಾಂತ ಶೂಲಾದಿಗಳು ಬಲಿಕ ಲೀಲಾಬ್ಜ | ಗಣನಾತಿಶಯನವ್ಯಗುಣಗಣನೆಯಳವಟ್ಟ ಮೂರ್ತಿ ರಾಜಿಸುತಿರ್ದುದು ||

                                                        ಅಮರಾವತಿಯ ವರ್ಣನೆ 

ಅಳ್ಕಿ ಬೆಟ್ಟವನೇರಿ ನೀರೊಳಗೆ ಪೊಕ್ಕು ನೇಟ | ಕಾಟ್ಕುಟಯ ಪುಲ್ಗಚ್ಚಿ ತಿಂದೆಂಜಲಂ ಭಂಗ | ದೊಳ್ಕೂಡಿದೆಮ್ಮ ನೀಪುರದ ಬೀದಿಯೊಳಕಟ ಕಟ್ಟಿ ತೂಗುತ್ತಿರ್ಪರು || ಕೊಳ್ಕಯ್ಯ ದೇವ ಎಂದು ದೂಳುತಿರ್ಪೊಂದು | ಮಾಳ್ಕಿ ಯಿಂ ಮಣಿಕಂ ಮುತ್ತು ನೀಲಂ ಪಚ್ಚೆ | ಗಳ್ಕೇರಿಯಂಗಡಿಯೊಳೆಸೆಯೆ ಬರುತಿರ್ದ ನೀರೇಳ್ಜ ಗದ ಜನದೊಡೆಯನು ||

                                                              ಸ್ತ್ರೀಯರು 

ಇವರ ನುಡಿ ಯತಿವರರ ಬಾಯ ಹುಡಿ ಭಾವಿಸ | ಲ್ಕಿವರ ಬಾಹುಗಳು ಸಜ್ಜನರ ಬೇಹುಗಳು ಬಳು | ಕಿವರ ಚೆಲ್ವಿನ ತುಳುಬು ಸುಜ್ಞಾನಿಗಳ ಸದಾಚಾರಿಗಳ ಮನದ ಬಿಳುಬು ||