ಈ ಪುಟವನ್ನು ಪರಿಶೀಲಿಸಲಾಗಿಲ್ಲ.
202 ಕರ್ಣಾಟಕ ಕವಿಚರಿತೆ. [16 ನೆಯ
ಕಾರಣವನ್ನು ಹಿಂದೆಯೇ ತಿಳಿಸಿದ್ದೇವೆ, ಗ್ರಂಥಾವತಾರದಲ್ಲಿ ಕವಿ ವೈಭೋ ಗರಾಯನನ್ನು ಸ್ತುತಿಸಿ ಬಳಿಕ ಪಾರ್ವತಿ, ಗಣಪತಿ ಇವರುಗಳನ್ನು ಹೊಗ ಳಿದ್ದಾನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯು ತ್ತೇವೆ__ ಗಣಪತಿ ಮುಂಬನಿಸೊರ್ಕನುಂಬ ಮುೞುದುಂಬಿಯ ಬಂಬಲಿನುಣ್ಮು ವಿಂಚರಂ | ತುಂಬಿರೆ ಗರ್ಭ ಭೋಗಿ ಸಿರವೆತ್ತಿ ಫಣಾಮಣಿರೋಚಿ ದೇಹಮಂ || ತಾಂ ಒಳಸೊಪ್ಪೆ ರಕ್ತ ಪಟಮಂ ತಳೆದಂತಿರೆ ರಾಜೆಸಿರ್ಪ ಹೇ | ರಂಬನುಮೇಶನೂನು ಮಿಗೆ ಮಾಡುಗೆ ಮುತ್ತಿಗೆಲ್ಲ ವಿಘ್ನಮಂ || ಸ್ತ್ರೀಯರು ತಳಿರ ಬೆಡಂಗು ನುಣ್ದೊಡೆಯ ರಂಗಳವಾೞ್ ಯ ಪೊಂಗು ಚೆಲ್ವ ತ | ಣ್ಭು ೞುಲ ಪೊಡರ್ಪು ಸಣ್ಣಲತೆಯರ್ಷ ಮಳ್ವಕ್ಕಿಯ ನೇರ್ಪು ಬಳ್ಳಿಯೊಳ್ || ಬಳಸಿಕೆಗೊಂಬ ಕಂಬು ಸಲೆ ಕೋಗಿಲೆಯಿಂಬುೞ್ ಮಾವಿನಂಬು ಕ | ಣ್ಗಳಿಕುಳದೋರ್ಪು ಸೋಗೆಗಳ ನೀಳ್ವರೆ ಬಂದರದಂದುಕಾಂತೆಯರ್ || ____________ ನಂಜುಂಡ. ಸು. 1525 ಈತನು ಕುಮಾರರಾಮಕಥೆಯನ್ನು ಬರೆದಿದ್ದಾನೆ. ಇವನು ವೀರ ಶೈವಕವಿಯೆಂದು ತೋರುತ್ತದೆ. ಇವನ ಪಿತಾಮಹನು ಯದುಕುಲಾಮಾತ್ಯವಂಶೋದ್ಭೂತನಾದ ಪ್ರಭುಕುಲಾ ಗ್ರಗಣ್ಯ ವಿಜಯನ್ರಪಾಲ ; ತಂದೆ " ಅಂಡದಜಲ್ಲಿಯನಾನೆಯ ನಿಗಳಕೆ ಕಂಡರಿಸಿದ ಮಾನಣ್ಣದ ಬೊಂಬೆಯ ಕಂಡು ಮನದೊಳುೞ್ ಮಚ್ಚರಿಸುವ ಮಾೞಾಂತ ರಾವು ತರ ಗಂಡನೆನಿಪ ” ಮಾಧವ , ಹಿರಿಯಯ್ಯನು ತುರಗದಂಡಕೆ ಬಲುಜಲ್ಲಿಯ ಕಟ್ಟಿದ ಬಿರುದುಳ್ಳ ರಾವುತ; ಕಿರಿಯ ತಂದೆ ವಿಜಯ : ಈ ವಿಜಯನು ಧರಣಿಯೞಿಯ ಧುರದೊಳಗೆ | ರಾಯದೞವ ಕಾಣುತ ತನ್ನ ಪತಿ ನಂಜ | ರಾಯನ ಮುಂದೆ ಕುದುರೆಯ | ರಾಯರಾವುತರಮೇಲೇೞು ತಿವಿದು ಸುರ | ರಾಯನಗರಿಗೈದಿದನು || ಎನ್ನು ತ್ತಾನೆ, “ ಚೆಂಗಳನಾಡ ನಾಲ್ವತ್ತುನಾಯಕಗಜಸಿಂಗವೆನಿಪ ಮಾಧವನ ಅ೦ ಗೋದ್ಭವ ನಂಜುಂಡ, ಯದುಕುಲಾಮಾತ್ಯರೆಂದೆಂಬ ಕುಲಾಗತವಿದಿತಬಿರುದನಾಂತೆ