ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



   ಶತಮಾನ]                       ನಂಜುಂಡ.                           203
    ಸೆವ ಚದುರಮಾಧವನಾತ್ಮಜ ನಂಜುಂಡ, ಅಂಚದಜಲ್ಲಿಯಾನೆಯ ನಿಗಳಕ್ಕೆ ಮಾರ್ಕೊ೦ 
   ಡು ಮಲೆವ ರಾವುತರ ಹಿಂಡಿನ ಗಂಡ ಮಾಧವನಾತ್ಮಜ ನಂಜುಂಡ, ವಾಗ್ವೈಖರೀವ 
   ಲ್ಲಭ ಕವಿತಾವನಿತಾವಶೀಕರಣವಶ್ಯಮಂತ್ರಸಿದ್ದ ಪ್ರಭುಕುಲಾಗ್ರಗಣ್ಯ ವಿಜಯನ್ರಪಾಲ 
   ಪುತ್ರಮಾಧವಾತ್ಮ ಜನಂಜುಂಡ  ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. 
   ಇದರಿಂದ ಈತನು ಜಯನ್ರಪಕಾವ್ಯವೇ ಮೊದಲಾದ ಗ್ರಂಧಗಳನ್ನು ಬರೆದ ಮಂಗರಸವ! 
   (1508) ಸಹೋದರನ ಮಗನೆಂದು ವ್ಯಕ್ತವಾಗುತ್ತದೆ. ಮಂಗರಸನು ಶುದ್ಧ ಜೈನ 
    ನಾಗಿದ್ದು ಅವನ ಸಹೋದರನ ಮಗನಾದ ಈತನು ಶೈವಮತದಲ್ಲಿ ಪಕ್ಷಪಾತವನ್ನು 
   ತೋರ್ಪಡಿಸಿರುವುದನ್ನು ನೋಡಿದರೆ ಜೈನಮತವನ್ನು ಬಿಟ್ಟು ಶೈವಮತವನ್ನು ಅವಲಂ 
   ಬಿಸಿರಬಹುದು ಎಂಬ ಊಹೆ ಹುಟ್ಟುತ್ತದೆ. ಜೈನಕಧೆಯನ್ನು ಬಿಟ್ಟು ಕುಮಾರರಾಮ  
   ಕಥೆಯನ್ನು ಬರೆದಿರುವುದು ಈ ಊಹೆಗೆ ಉಪಷ್ಟಂಭಕವಾಗುತ್ತದೆ. ಇವನ ಚಿಕ್ಕಪ್ಪ 
   ನಾದ ವಿಜಯನು ತನ್ನ ಪತಿ ನಂಜರಾಯನಸಮಕ್ಷದಲ್ಲಿ ಯುದ್ಧದಲ್ಲಿ ಮಡಿದಂತೆ ಹಿಂದೆ 
   ಹೇಳಿದೆ. ಈ ನಂಜರಾಜನು 1502ರಿಂದ 1533ರ ವರೆಗೆ ಆಳಿದ ಚೆಂಗಾಳ್ವನಂಜ 
   ರಾಜನಾಗಿರಬೇಕು.
      ಈ ಕಾರಣಗಳಿಂದ ಕವಿಯ ಕಾಲವು ಸುಮಾರು 1525 ಆಗಬಹು 
  ದು, “ಕನ್ನಡಸಂಸ್ಕೃತವೆಂಬಿವಳ್ ತೊಡಕೆಳ್ಳನಿತಿಲ್ಲದೆ ನಾಂ ಪೇೞಿ 
  ದೆನು ” ಎಂದು ಕವಿ ಹೇಳುತ್ತಾನೆ.
       ಪೂರ್ವಕವಿಗಳನ್ನು ಈ ಪದ್ಯಗಳಲ್ಲಿ ಸ್ಮರಿಸುತ್ತಾನೆ-- 
       ಕವಿತಾವನಿತೆಯ ಸಂಗಕೆ ಪೆಣ್ತನ | ಸವಿಯಲ್ಲವೆಂದಾವಾಣಿ |
       ತವಕದಿಂ ಗಂಡುರೂಪಾಂತಳೆಂಬಂತಿರ್ದ | ಕವಿಕಾಳಿದಾಸಗೆೞಗುವೆ || 
       ಕ್ಷೋಣಿಯ ತಲೆದೂಗಿಸುವ ಕವಿತೆಯ ಪೇೞ್ದು | ಮಾಣದೆ ಬಲ್ಲವರಿಂದ |
       ಬಾಣೋಚ್ಛಿಷ್ಟಂ ಜಗತ್ರಯಮೆಸಿಸಿದ | ಬಾಣನ ಬಲಗೊಂಬೆನೊಲಿದು ||   
       ಕನ್ನಡಕವಿತೆಗೆ ಮೊದಲಿಗನೆಂದೆಂ | ಬುನ್ನ ತಕೀರ್ತಿಕಾಮಿನಿಯ | 
       ಬೆನ್ನ ಬಿಡದೆ ತೋೞಲುವ ಪಂಪರಾಜನ | ಚೆನ್ನಡಿಗಳಿಗೆೞಗುವೆನು || 
       ಕಾದಂಬರಿಯ ಸುಡಿಸಿ ಲೀಲಾವತಿ | ಗಾದರದಿಂ ಕಪ್ಪನಿಟ್ಟು | 
       ಮೇದಿನಿ'ಯನು ಮೆಚ್ಚಿಸಿದ ನೇಮಿಚಂದ್ರನ | ವಾದಗಳನು ಬಲಗೊಂಬೆ || 
       ಬಲಿದ ಕರ್ಣಾಟಕವಿಗಳೆಲ್ಲರ ಗೆಲ್ದು | ಬಲ್ಲಾಳಭೂಮಿಾಶ್ವರನ |
      ______________________________________________________________
       1. 179 ನೆಯ ಪುಟವನ್ನು ನೋಡಿ