ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

104 ಕರ್ಣಾಟಕ ಕವಿಚರಿತೆ. [16 ನೆಯ

 ನಿಲ್ಲದೆ ಮೆಚ್ಚಿಸಿಕೊಂಡ ಜನ್ನನ ಪದ | ಪಲ್ಲವಗಳಿಗೆಳಗುವೆನು || 
 ಇಂಪುವಡೆದ ಕವಿತಾರಸಲಹರಿಯ | ಸೊಂಪಿನಿಂ ವಾದಿಗಳೆದೆಗೆ |
 ಕಂಪನವನು ಪುಟ್ಟಿಸುವ ಗುಣನಂದಿಯ | ನಾಂ ಪೊಗಳುವೆ ಬಲಗೊಂಬೆ ||
 ಗಜಗನ ಗುಣವರ್ಮನ ನಾಗಚಂದ್ರನ |ಸುಜನೋತ್ತಂಸನಸಗನ |
 ಸುಜನರನ್ನನ ಶಾಂತಿವರ್ಮನ ಪದಸರ | ಸಿಜಗಳಿಗೊಲಿದೆಳಗುವೆನು ||
 ರಗಳೆಯಕವಿಯೆಂದು ತೆಗಳೈ ವಾದಿಗಳುಱೈ | ಸೊಗಸೊಗುವಂತೆ ವಸ್ತುಕವ |
 ನೆಗಳುದ ಹಂಪೆಯ ಹರಿಯಣ್ಣನ ಪದ | ಯುಗಳಕೆಳಗುವೆನಱ್ತುಯೊಳು ||
 ಹಿಂದಣವರ ಸವಿವಾತುಗಳಿಗೆ ಸರಿ | ಬಂದಿದೆ ಮೆಲ್ನುಡಿ ನಿನ್ನ |
 ಎಂದು ಕೊಂಡಾಡಿಸಿಕೊಂಡ ಮಧುರನನಾ | ನಂದದಿಂ ಬಲಗೊಂಬೆನೊಲಿದು ||

ಅವನ ಗ್ರಂಥ

                  ಕುಮಾರರಾಮನಕಥೆ
    ಇದು ಸಾಂಗತ್ಯದಲ್ಲಿ ಬರೆದಿದೆ ; ಅಲ್ಲಲ್ಲಿ ಕೆಲವು ಪಟ್ಪದಿಗಳ ಇವೆ ಆಶ್ವಾಸ 12, ಸಂಧಿ 47, ಪದ್ಯ 5807. ಇದರಲ್ಲಿ ಕರ್ಣಾಟದೇಶಾಧೀಶ್ವ ರನಾದ ಕಂಪನೃಪತಿಯ ಕುಮಾರ ಕುಮಾರರಾಮನ ಚರಿತವು ವರ್ಣಿತ ವಾಗಿದೆ.
    ಚೆಂಡಾಟವಾಡುತ್ತಿದ್ದಾಗ ಚೆಂಡು ಅರಮನೆಗೆ ಹೋಗಿಬೀಳಲು ಕುಮಾರರಾ ಮನು ಅದನ್ನು ತೆಗೆದುಕೊಳ್ಳುವುದಕ್ಕೆ ಹೋದಾಗ ಅವನ ಮಲತಾಯಿಯಾದ ರತ್ನಾಜಿ ಅವನನ್ನು ಕೆಟ್ಟಮನದಿಂದ ಹಿಡಿದಳು. ಅವನು ತಪ್ಪಿಸಿಕೊಂಡುಹೋಗಲು ರತ್ನಾಜಿ ಗಂಡನೊಡನೆ ಇಲ್ಲದ ಚಾಡಿಯನ್ನು ಹೇಳಿ ಅವನನ್ನು ಕೊಲ್ಲಿಸಬೇಕೆಂದಾಗ ದೊರೆ ಮಂತ್ರಿಗೆ ಆಜ್ಞಾಪಿಸಲು ಅವನು ರಾಜಕುಮಾರನನ್ನು ನೆಲಮಾಳಿಗೆಯಲ್ಲಿರಿಸಿ ಕೊಂದೆನೆಂದು ಹೇಳಿಬಿಟ್ಟನು, ಈ ಸುದ್ದಿಯನ್ನು ಕೇಳಿ ತುರುಕರು ರಾಜ್ಯವನ್ನು ಮುತ್ತಲು ಕುಮಾ ರರಾಮನು ಬಹಳಪರಾಕ್ರಮದಿಂದ ಅವರೊಡನೆ ಏಕಾಕಿಯಾಗಿ ಕಾದಿ ಮಡಿದನು. ಎಂಬುದೇ ಕಥಾಗರ್ಭ, ಇದನ್ನು
 ರಸದಿಂದ ಪುಟ್ಟಿಸಿ ಭಾವದಿಂ ಬಲಿಯಿಸಿ | ಪೊಸಬಗೆವೆತ್ತಲಂಕೃತಿಯ |
 ಎಸಕದಿಂ ಬಳೆಯಿಸಿ ಕೃತಿಯೆನಿಸುವೆನಿದ | ರಸಿಕರು ಮೆಚ್ಚುವಂದದಲಿ||
ಎಂದು ಕವಿ ಹೇಳುತ್ತಾನೆ. ನಮಗೆ ದೊರೆತ ಪ್ರತಿಗಳಲ್ಲಿ ಮೊದಲು ಸ್ವಲ್ಪಭಾಗವಿಲ್ಲ. ಆಮೇಲೆ ಶಿವ, ಸರಸ್ವತಿ, ಗಣೇಶ ಇವರುಗಳ ಸ್ತುತಿಯಿದೆ. ಆಶ್ವಾಸಾಂತ್ಯದಲ್ಲಿ *