ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ನಂಜುಂಡ, 206

  ಇದು ಯದುಕುಲಾಮಾತ್ಯ ವಂಶದೊಳಗುದಯಿಸಿದ |
  ಸದಮಲಯಶೋವಿರಾಜಿತವಿಜಯನೃಪತನುಜ | 
  ವಿದಿತವಿತರಣವಿನಯವಿಕ್ರಮವಿಭಾಸಿಯೆಂದೆನಿಪ ಮಾಧವನಾಮನ ||
  ಉದರಾಬ್ಧಿಭವಚಂದ್ರ ನಂಜುಂಡನೊಲಿದೊರೆದ | 
  ಕದನಕಲಿಕಾಲಕಪಿಕೇತು ಕಲಿಶುಚಿರಾಮ |
  ನುದಿತಕೃತಿಬಂಧದೊಳ್ ಮೃದುಪದನ್ಯಾಸದೊಳ್.
ಎಂಬ ಪದ್ಯವೂ ಗ್ರಂಥಾಂತ್ಯದಲ್ಲಿ
     ಇದುಸಮಸ್ತಸುರಾಸುರಮೌಲಿಮಾಲಾಕೀಲಿತನೂತ್ನ ರತ್ನಪ್ರಭಾಪುಂಜರಂಜಿತಚ೦ ದ್ರಚೂಡಚರಣಾರವಿಂದಮಧೂಳೀಮಧುಕರಾಯಮಾನ ಮಾಧವಸೂನು ಕವಿತಾವಿಶಾರ

ದನಂಜುಂಡವಿರಚಿತಮಪ್ಪ ಕುಮಾರರಾಮಮಹಾಪ್ರಬಂಧದೊಳ್ ಎಂಬ ಗದ್ಯವೂ ಇವೆ.

     ಇವನ ಬಂಧವು ಲಲಿತವಾಗಿದೆ ಈ ಗ್ರಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ...
                        ಸಮುದ್ರ
ಅರುಣಪ್ರವಾಳನಿಕರದಿನುತ್ಕಳಿಕಾ | ಭರದಿಂದ ಕುಶಚಯದಿಂದ |
ತಿರುಗುವ ವನಚರತತಿಯಿಂದಾಕಡ | ಲಿರದೆಸವುದು ವನದಂತೆ ||
                        ಕರ್ಣಾಟದೇಶ
ಕಾವೇರಿಯಿಂದ ಗೋದಾವರಿವರೆಗಮಿ | ರ್ದಾವಸುಧಾತಳವಳಯ |
ಭಾವಿಸೆ ಕರ್ಣಾಟಕ ಜನಪದವದ | ನಾವನೊಲಿದು ಬಣ್ಣಿಸುವನು || 
ನಡೆವಂಚೆ ನುಡಿವರಗಿಳಿ ನಲಿದಾಡುವ | ಬೆಡಗಿನ ನವಿಲು ಕೂಗಿಡುವ |
ಪಡಿಯಳವಕ್ಕಿ ಮೊರೆವ ಪರಮೆಗಳೆರ್ದೆ | ಗೆಡಿಪುವು ಪಧಿಕರನಲ್ಲಿ ||
ಮಡಿಯೆಂಬ ಮಾತು ಸಂಖ್ಯಾವಾಚಿಗಳ ಕಟ್ಟ| ಕಡೆಯೊಳು ಶಾಕವಾಟಿಯೊಳು |                  
ತಡೆಯದಾರಜಕರೊಳಲ್ಲದಾ ಜನಪದ | ದೆಡೆಯೊಳೆಲ್ಲೆಲ್ಲಿ ನೋಡಿದಡಂ||
                     ತುಂಗಭದ್ರೆ
ಮಡುವಿಂದ ಬಾನ್ಗುಳೈ ನೆಗೆವೆಳಮಿಾನ್ಗಳ | ಗಡಣದಿಂದಾನದಿಯೆಂಬ |
ಮಡದಿ ಮುದದೊಳಾಡುವಣ್ಣೆಕಲ್ಲ೦ತೆ ಕ | ಣ್ಗೊಡನೆಸೆದುದು ನೋಟಕರ ||