ಶತಮಾನ] ಚೇರಮಾಂಕ 211
ಮಾವಿನಹಣ್ಣು.
ಚಂದಿರಗದಿರ್ದಂಪನಬಲಾರುಣಾಧರದ | ಮಂದರಾಗದ ರುಚಿಯನೆಳವೆಣ್ಣ ನಲ್ಗೂಟ | ದಿಂದಾದ ಸೊಗಸನಾಸತ್ಕವೀಶ್ವರರ ವಾಕ್ಯಾಮೃತದ ಮಾಧುರ್ಯದ || ಚಂದದಮರರ ಧೇನುವಿನ ಸುಧೆಯ ಸವಿಯನಿವ | ನೊಂದುಗೂಡುತ ಚೈತ್ರನೆಂಬ ಪರಮೇಷ್ಟಿ ಸಿರಿ | ಗಂದಗೆಂದೀಯುಪವನದೊಳಿಟ್ಟನೆನೆ ರಸಾಲದ ಪಕ್ವಫಲಮೆಸೆದುವು ||
ಹಲಸಿನಹಣ್ಣು.
ಮಿಸುನಿದಗಡುಗಳ ಮಿಗೆ ಸುರುಳ್ದು ಮೃದುಮಧುರತೆಯ | ನೊಸೆದಿತ್ತು ಕಂಪೂಡಿಯದಱೆದೊಳಗೆ ನೆಱೆಯಮೃತ ! ರಸಮನೊಯ್ಯನೆ ತೀವಿ ಸಲೆ ಚೈತ್ರನೆಂಬಜಂ ಪೊಸಪಟ್ಟಸಾಲೆಯೊಳಗೆ || ಮಸಗದಂತವನಿಡುತ್ತವಱಮಲ್ಬಳಸಿನೊಳ್ | ಪಸುರ್ಮುಗುಳ್ವಚ್ಚೆಗಳ ಮದನನೃಪಗೆಂದು ಸೇ | ರಿಸಿ ಬೈತ ಬೋನಗುಡಿಕೆಯತಱದೆ ಸಾಲ್ಟಿಡಿದ ಪನಸಫಲತತಿ ಮೆಱೆದುವು ||
ಮುತ್ತಗ.
ಧರೆ ಬಿರಿಯಲುರಗನ ನಣಾಮಣಿಯ ದೀಪ್ತಿ ವಿ | ಸ್ಫುರಿಸಿದಪುದೋ ಬೇಸಗೆಯ ಬಿಸಿಲ ಬೇಗೆಗಾ | ಧರೆ ಬೆಂದು ನಿಂದುರಿದಪುದೊ ಮೇಣು ಧರೆ ರತ್ನ ಗರ್ಭೆಯೆಂದೆಂಬ ಪೆಸರ | ಪಿರಿದಾಗಿ ಕನ್ನಡಿಸಿದಪುದೊ ಕಾಷ್ಠದೊಳಗ್ನಿ | ಪರಿಜುವೆತ್ತುದೊ ಪಸಿಯ ಕಾಱ್ಕೆಚ್ಚೊ ಎಂದೆನಲ್ | ದೊರೆವೆತ್ತು ರಂಜಿಸುವುದಾವನಾಂತರದೊಳಗೆ ಪೂತ ಮುತ್ತಗದ ವೃಕ್ಷಂ ||
ದುಂಬಿ.
ಉತ್ತಮದ ಮಿಸುಪಿಂದ್ರನೀಲದ ಹೊಳೆವ ಮಣಿಗೆ | ಕತ್ತುರಿಯುರುಳಿಗಳ್ಗೆ ಮುನ್ನ ವೀಜಗಮುಮಂ | ಪೆತ್ತಚಂ ನಾಸಿಕಮನಾಱಡಿಯನೊಳ್ಗ ಱುಗಳಿತ್ತನಲ್ಲದೊಡಂತಹ || ಚಿತ್ತರದ ಕಾಂತಿ ಪೊಸಕಂಪಿನೊಂದೇಱ್ಗೆಯಂ | ಮತ್ತವೇಂ ಪಡೆವುವೇ ತಾವೆಂಜಮಾಱ್ಕೆಯಿಂ | ಪೊತ್ತು ಪರಿಮಳವನಾವನದೊಳಗೆ ಬಿಡದೆ ಸುಱುಯುತ್ತಿರ್ಪುವರಸುದುಂಬಿ ||
_________________