ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

212 ಕರ್ಣಾಟಕ ಕವಿಚರಿತೆ. [16 ನೆಯ

                              ಪದ್ಮಕವಿ. 1528. 
            ಇವನು ವರ್ಧಮಾನಚರಿತೆಯನ್ನು ಬರೆದಿದ್ದಾನೆ. ಈತನು ಜೈನ ಕವಿ ; ನಾಗಯ್ಯನ ಮಗನು. ಈ ಗ್ರಂಥವನ್ನು ಶಕ 1450 ಸರ್ವಧಾರಿಯಲ್ಲಿ, ಎಂದರೆ 1528ರಲ್ಲಿ ಬರೆದಂತೆ ಹೇಳುತ್ತಾನೆ.

ಇವನ ಗ್ರಂಥ

                              ವರ್ಧಮಾನಚರಿತೆ 
           ಇದು ಸಾಂಗತ್ಯದಲ್ಲಿ ಬರೆದಿದೆ : ಸಂಧಿ 12. ಇದರಲ್ಲಿ 24ನೆಯ ತೀರ್ಥಂಕರನಾದ ವರ್ಧಮಾನನ ಅಥವಾ ಮಹಾವೀರನ ಕಥೆ ಹೇಳಿದೆ.
                        _____________
                   ಮುರಿಗೆಯಶಾಂತವೀರ. ಸು. 1530 
           ಈತನು ಪ್ರಭುಲಿಂಗದಕಂದ, ವೈರಾಗ್ಯಷಟ್ಪದಿ, ಏಕೋನವಿಂಶತಿಪ್ರ ಬಂಧ ಇವುಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ ; ಮುರಿಗೆಮಠದ ಸ್ವಾಮಿಯಾಗಿದ್ದಂತೆ ತೋರುತ್ತದೆ. ಸಿದ್ದಲಿಂಗನ ಕರುಣಶೇಷಂ ಸಿದ್ಧಿಸಿದ ನಿಜಬೋಳಬಸವನ ಪ್ರಸಾದಸೇವನೆಯಿಂದ ಬೆಳೆದಿರ್ದ, ಉದ್ಧವಾದಾಗುರುವಿನಿಂ ಸಲೆ ಸಿದ್ದಕಟ್ಟಿಗೆಹಳ್ಳಿ ದೇವನ ಶುದ್ಧಜ್ಞಾನದಿ ಬೆಳೆದ, ಮುರಿಗೆಯಶಾಂತವೀರದೇವ ಎಂಬ ಈತನ ಸ್ತುತಿರೂಪವಾದ ಪದ್ಯಭಾಗದಿಂದ ಇವನು ತೋಂಟದ ಸಿದ್ದಲಿಂಗನ (ಸು, 1470) ಶಿಷ್ಯನಾದ ಬೋಳಬಸವನ ಅನುಗ್ರಹಕ್ಕೆ ಪಾತ್ರನಾಗಿದ್ದಂತೆಯೂ ಕಟ್ಟಿಗೆಹಳ್ಳಿ ದೇವನಿಂದ ಜ್ಞಾನವನ್ನು ಪಡೆದಂತೆಯೂ ತಿಳಿಯುತ್ತದೆ. ತೋಂಟದಸಿದ್ದಲಿಂಗದೇವನ ಪ್ರತಿಷ್ಯನಾದುದರಿಂದ ಇವನ ಕಾಲವು ಸುಮಾರು 1530*ಆಗಬಹುದು. ಇತನ ಸ್ತುತಿರೂಪವಾದ ಒಂದು ಪಟ್ರದೀಗ್ರಂಥವಿದೆ.

ಇವನ ಗ್ರಂಥಗಳಲ್ಲಿ ,

                   I. ಪ್ರಭುಲಿಂಗದಕಂದ 
         ಈ ಗ್ರಂಥದಲ್ಲಿ 53 ಕಂದಗಳಿವೆ. ಇವು ಪ್ರಾಯಿಕವಾಗಿ ರಾಜಲಿಂಗ ಪ್ರಭುವೇ ಎಂದು ಮುಗಿಯುತ್ತವೆ. ಈ ಗ್ರಂಥದಲ್ಲಿ ಯೋಗಶಾಸ್ತ್ರಕ್ರಮದಿಂದ ಶಿವಪೂಜೆ ನಿರೂಪಿತವಾಗಿದೆ. ಇದರಿಂದ ಒಂದೆರಡು ಪದ್ಯಗಳನ್ನು ತಗೆದು ಬರೆಯುತ್ತೇವೆ___