ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಮುರಿಗೆಯಶಾಂತವೀರ. 213

       ಒಳಹೊಱಗೆಡಬಲದೊ೪' ಮೇಣ್ |  ಕೆಳಗಂ ಮೇಲೆಸೆವ ಮುಂದೆ ಹಿಂದೆಲ್ಲೆಡೆಯೊಳ್ | ದಳಕುಳಕರಣಕದಂಬ | ಸ್ಥಳದೊಲಳ್ ಧಳಧಳಿಪ ರಾಜಲಿಂಗಪ್ರಭುವೇ || ರವಿಗಂಗಾಪಿಂಗಲೆಯಾ | ಸವಿಗದಿರನ ಜಗುನೆಯಿಾಡೆಯನಲಕಸತಿಯ | ರ್ಗವನಿಸುಷುಮೆಣ್ಣ್ಯ“ಸಂಗಮ | ದವಗಡದುರುಗಿರಿಯ ರಾಜಲಿಂಗಪ್ರಭುವೇ ||

ಈ ಗ್ರಂಥಕ್ಕೆ ಪರ್ವತಶಿವಯೋಗಿ (ಸು. 1650) ಒಂದು ವಾಖ್ಯಾನವನ್ನು ಬರೆದಿದ್ದಾನೆ.

                    2. ವೈರಾಗ್ಯಷಟ್ಟದಿ
     ಇದರಲ್ಲಿ ನೀತಿವೇದಾಂತಬೋಧಕವಾದ 101 ವಾರ್ಧಕವಟ್ರದಿಗ ಳಿವೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ..

ವಿರತಿಯಂಕುರದೋಱು ಸುಜ್ಞಾನ ಮದವೇಱು

| ಸ್ಥಿರಚಿತ್ತ ಕಳೆಹಱೆ ಸತ್ಯಗಣಗಳ ಬೀಱಿ

' | ದುರಿತಪಂಕವು ತಾಱೆ ಸಂಶಯಂಗಳು ಹಾಱಿ ಲಿಂಗಕ್ಕೆ ಮನವ ಮಾಱೆ |

 ದುರಳಮಾಯೆಯ ತನುವಿನೊಳ್ ಕ್ರಿಯೆಯ' | ಕರಚರಿತೆಗಳ ಸಾಯಿ ನುಕ್ಕಿಗಂ ಬಾಯಾಡ್ | ಧರೆಗೆ ಭಕ್ತಿಯ ತೋಟ' ಕುಟಿಲಸಟೆಯಂ ತೂ' ಚರಿಪ ಸುಜನೋಪಕಾರಿ || ನಿಂದ್ಯದನ್ನವನುಂಡು ಹಾಸ್ಯರಸವೀಂಟುತ್ತ | ಹಿಂದದಜ್ಞಾನವಸನವ ಪೊದ್ದು ತ್ರಿಗುಣಂಗ | ಳೊಂದುಗೂಡಿದ ವೀಳ್ಯಮಂ ಮೆದ್ದು ವ್ಯಸನಸಪ್ತಕದ ನೀರ್ಮುಕ್ಕುಳಿಸುತ || ಮುಂದೆ ಮುಮ್ಮಲವೆಂಬ ಸುರೆಯನತಿಹೊಟ್ಟೆಯೊಡೆ | ವಂದದಿಂದೀ೦ಟಿ ಪಾಪದ ಶಿಲಾಸ್ತಂಭಕ್ಕೆ | ಯೊಂದಿದಕ್ಕರಗಳಾಗುತ ಭವವನಾಳುವರ ಮೇಳಮಂ ಬಿಡು ಗಡಣುಗಾ || ಮಾಧವಗೆ ಹರಿನಾಮವೆನಗೆಯುಂ ಹರಿನಾಮ | ಮಾಧವಗೆ ಜಲಶಯನವೆನಗೆಯುಂ ಜಲಶಯನ | ಮಾಧವನ ಪಿರಿದೆನು ಎನ್ನ ಕಿಯಿದೇನೆನುತ ಕಪ್ಪೆ ವಿಷ್ಣುವ ಜವವೊಲು | ಬಾಧಕರು ಹಸಿವು ತೃಷೆ ನಿದ್ರೆ ಜನನಂ ಮರಣ | ವೀಧರಿತ್ರಿಯೊಳೆಮಗೆ ನಿಮಗೆ ಸರಿಯದು:ನಿ॰ | ದಾದುದೇಂ ನಿಮಗೆ ದೇವತ್ವವೆಂದೆನುತ ಪೊಳವಾತುಗಳ ಸೊಅಹುತಿಹರು ||