230 ಕರ್ನಾಟಕ ಕವಿಚರಿತೆ. [16 ನೆಯ ನೆರೆ ಕೈಯಿಂ ತೊನೆದಾಡುವಳ್ ಮುಗಿಲ ಪೂವಂ ಸೂಡುವಳ್ ತಾರೆಯಂ || ತಿರುವಳ್ ಮುತ್ತುಗಳೆಂದು ಚಂದ್ರರವಿಯಂ ಕಂಚೋಲೆಯೆಂದಿಕ್ಕುವಳ್ | ನಿರುಯಂ ಸುತ್ತುವಳೇಳುವಾರ್ಧಿಚಯಮಂ ಶ್ರೀಕೀರ್ತಿ ರೇಚಾಂಕನಾ ||
ಚಾಟು ಪುರುಷ ವಿರಹವರ್ಣನೆ ಅದನಿನ್ನೇವೊಗಳ್ವೆಂ ವಿನೋದಭವನಂ ಚಾತುರ್ಯಜನ್ಮಸ್ಥಳಂ |
ಮೃದುಮಾಧುರ್ಯವಚಸ್ಸುಧಾಂಬುಧಿಗೆ ಪೆರ್ಚ೦ ಮಾಳ್ಪ ಚಂದ್ರೋದಯಂ || ಮದನಂ ಪೂಜಿಪ ಮಂತ್ರದೇವತೆಯೆನಿಪ್ಪಾನಲ್ಲಳಂ ಬಿಟ್ಟು ಹಾ | ಬಿದಿರಂ ಕಬ್ಬಿನ ಪೋಲ್ಕೆಗೆಂದು ಸವಿವಂತಾಯ್ತೆನ್ನ ಪುಣ್ಯೋದಯಂ ||
ಮುಕ್ತಕ. ಸಮುದ್ರವರ್ಣನೆ ಪವಳದ ಕೆಯ ಮುಗಿಲ್ಗಳರಮಟ್ಟಿಗೆ ನೀರ್ಗಳ ಸುತ್ತು ಮುತ್ತು ಪು |
ಟ್ಟುವ ಕಣಿ ಬೆಟ್ಟವಕ್ಕಿಗಳ ಗೂಡೆಳನೆ ಸರ ತೊಟ್ಟಿಲುಗ್ರದಾ || ನವರೆಹವಟ್ಟು ಲಕ್ಷ್ಮಿಯ ತವರ್ಮನೆ ತಿಂಗಳ ಪೆತ್ತ ತಂದೆ ಬಾ | ಡವಶಿಖಿಗಂ ನಿವಾಸಮಸುರಾರಿಯ ಸೆಜ್ಜೆ ವಲಂ ಮಹಾರ್ಣವಂ ||
ಶೌರ್‍ಯವರ್ಣನೆ ಗರುಡನ ಮೂಗು ಕೊಂಕಿದೊಡೆ ತಿರ್ದಿ ದುದಿಲ್ಲ ಮುರಾರಿ ಚಂದ್ರನೊಳ್ |
ಪೊರೆದ ಕಳಂಕಮಂ ಕಳೆದುಗಿಲ್ಲ ಮಹೇಶ್ವರನರ್ಕನುಳ್ಕರಿಂ || ದರುಣನ ಕಾಲ್ಗಳಂ ಪಡೆದನಿಲ್ಲಮದೆಂತೆನೆ ಪುಣ್ಯಹೀನನೇ | ದೊರೆಗಳಿನಾಸೆಗೆಯ್ದೊಡಮಗಲ್ವುದೆ ಪೂರ್ವದ ಕರ್ಮಬಂಧನಂ ||
ತಪೋವನವರ್ಣನೆ ಪೊಕ್ಕು ಕುಟೀರಮಂ ಕೆದರಿ ಪುಸ್ತಕಮಂ ಮಸಿಯಕ್ಕರಂಗಳಂ |
ನೆಕ್ಕಿ ಬಿಸುಟ್ಟು ಬೊಕ್ಕಣದ ಬೂದಿಯನುಃಪೆನುತೂದಿ ಮೂಗಿನೊಳ್ || ಪೊಕ್ಕೊಡೆ ಸೀಂತು ಮಾಣ್ದಿರದೆ ಪಾಯ್ದವಲಂಬಿಪ ಕೊಂಬನೇರಿ ಪು | ರ್ಬಿಕ್ಕುವ ಮರ್ಕ್ಕಟಂ ನಗದ ತಾಪಸರಂ ನಗಿಸಿತ್ತರಣ್ಯದೊಳ್ ||
ವೈರಾಗ್ಯವರ್ಣನೆ
ನೆರೆವುದಗಲ್ವುದರ್ಕೆ ಜನನಂ ಮರಣಕ್ಕೆ ವಿನೂತಯೌವನಂ | ಜರೆಗೆ ಧನಂ ದರಿದ್ರತೆಗೆ ನಲ್ಮೆ ವಿರಾಗಪಧಕ್ಕೆ ಸತ್ಸುಖೋ ||