ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 232 ಕರ್ಣಾಟಕ ಕವಿಚರಿತೆ. [16 ನೆಯ

           ರಾಮರಸವಿರೂಪಾಕ್ಷ . 1538                
      ಈತನು ಹರೀಶ್ಚಂದ್ರಸಾಂಗತ್ಯವನ್ನು ಬರೆದಿದ್ದಾನೆ. ಇವನು ಬ್ರಾಹ್ಮ          
    ಣಕವಿ. ತನ್ನ ವಿಷಯವನ್ನು ಈ ಪದ್ಯದಲ್ಲಿ ತಿಳಿಸಿದ್ದಾನ -
     ವಸುಮತಿಯೊಳು ಪಂಚಾರುಷಯಪ್ರಧಮಶಾಖೆ | ಪೆಸರುಳ್ಳ ಶ್ರೀವತ್ಸಗೋತ್ರ |      
     ಹಸನಾಗಿ ದ್ವಿಜ ರಾಮರಸವಿರೂಪಾಕ್ಷ | ನೆಸಗಿದೀಕೃತಿಯ ಲಾಲವುದು ||
      ತನ್ನ ಗ್ರಂಥವನ್ನು ಶಕ  1460ರಲ್ಲಿ ಬರೆದಂತೆ ಈ ಪದ್ಯದಲ್ಲಿ         
    ಹೇಳಿದ್ದಾನೆ -
     ಶಾಲಿವಾಹನ ಬಂದು ಬಾಳಿದಕಲಿಯೊಳ | ಗಾಳಿದ ಶಕವರ್ಷಗಳು |        
     ಏಳರ ಇಮ್ಮಡಿತಾಳಿದ ಶತಕದ | ಮೇಲಾದ ಅರವತ್ತು ವರುಷ ||
      
      ಇವನ ಗ್ರಂಥ 
            ಹರೀಶ್ಚಂದ್ರಸಾಂಗತ್ಯ                  
     ಒಂದುಪ್ರತಿಯಲ್ಲಿ ಸಂಧಿ 13,ಪದ್ಯ 609 ಎಂದಿದೆ;ಮತ್ತೊಂದು ಅಸ             
   ಮಗ್ರಪ್ರತಿಯಲ್ಲಿ 429 ಪದ್ಯವುಳ್ಳ 2 ಆಶ್ವಾಸಗಳೂ 3ನೆಯ ಆಶ್ವಾಸದಲ್ಲಿ           
   171 ಪದ್ಯಗಳೂ ಇವೆ. ಗ್ರಂಧಾವತಾರದಲ್ಲಿ ಹಂಪೆಯ ವಿರೂಪಾಕ್ಷ             
   ಸ್ತುತಿ ಇದೆ.
              ---
           ಪುರಂದರದಾಸ.ಸು 1540                
      ಈತನು ಕೀರ್ತನೆಗಳನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ;           
   ಇವನ ಸ್ಥಳ ಪುರಂದರಗಡ. ಮೊದಲು ಐಶ್ವರ್ಯವಂತನಾಗಿಯೂ ಪರಮ     
   ಲೋಭಿಯಾಗಿಯೂ ಇದ್ದು ಜ್ಞಾನೋದಯವಾದಮೇಲೆ ಹಣವನ್ನೆಲ್ಲ ದಾನ          
   ಮಾಡಿ ಹಾಡುಗಳಿಂದ ದೇವರನ್ನು ಸ್ತುತಿಸುತ್ತ ಪಂಡರಿಪುರದಲ್ಲಿ ಭಿಕ್ಷೆಬೇಡಿ         
   ಕೊಂಡು ಕಾಲವನ್ನು ಕಳೆದಂತೆ ತಿಳಿಯುತ್ತದೆ. ಮೊದಲು ಸ್ಮಾರ್ತಬ್ರಾ         
   ಹ್ಮಣನಾಗಿದ್ದು ಆಮೇಲೆ ಮಾಧ್ಯನಾದನೆಂದು ಹೇಳುತ್ತಾರೆ. ಇವನ              
   ಕೆಲವು ಕೀರ್ತನೆಗಳಿಂದ ಈತನು 1538ರಲ್ಲಿ ವಿಜಯನಗರದಲ್ಲಿದ್ದಂತೆಯೂ          
   1564 ರಲ್ಲಿ ಸತ್ತಂತೆಯೂ ತಿಳಿಯುತ್ತದೆ ಎಂದು ಮೆ|| ಕಿಟ್ವಲ್ ಬರೆದಿ          
   ದ್ದಾರೆ, ವ್ಯಾಸರಾಯನಿಂದ (ಸು. 1525) ಈತನು ಉಪದೇಶವನ್ನು ಪಡೆ