ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ಕರ್ಣಾಟಕ ಕವಿಚರಿತ. [16 ನೆಯ

ವೀರಶೈವಾಗಮಜ್ಞನೆಂದೂ ಇವನಿಗೆ ಸಲಕರಾಜನ ಮಗನಾದ ತಿರುಮಲರಾಯನೆಂಬ ಪ್ರಭು 1543ರಲ್ಲಿ ಕೊಮರಕೆರೆ ಎಂಬ ಗ್ರಾಮವನ್ನು ಕೊಟ್ಟನೆಂದೂ ಈಚೆಗೆ ದೊರೆತ ಒಂದು ತಾಮ್ರಶಾಸನದಿಂದ ತಿಳಿಯುತ್ತದೆ'. ಹಂದೆಯಬಳಿ ಇರುವ ಜಂಬುನಾಥಕೊಂಡ ಎಂಬ ಬೆಟ್ಟದಲ್ಲಿಯ ಜಂಬುನಾಥನು ಈತನ ಉಪಾಸ್ಯದೇವತೆ ಎಂದು ತಿಳಿಯುತ್ತದೆ. ಹಂಪೆಯೇ ಇವನ ಸ್ಥಳವಾಗಿರಬೇಕು.

  ಈತನ ಕಾಲಜ್ಞಾನದಲ್ಲಿ ಇವನು • ನರಸಿಂಗರಾಯನ ಹಿರಿಯಕುಮಾರನು ಹೊಯ್ಯೊ ಡಂಗುರವ "ಅಯ್ಯ ಅರಸುತನಕ್ಕಿನ್ನು ಕಡೆಗಾಲವಾದೀತು ಹೊಯ್ಯೊ ಡಂಗುರವ ಎಂದು ಸಾರುತ್ತ ಬರಲು ಊರನಾಳುವ ಕೃಷ್ಣರಾಯನು ಹಿಡಿತರಿಸಿ ಪಟ್ಟದಾನೆಯ ಮುಂದಕ್ಕೆ ಇವನನ್ನು ನೂಕಿಸಿ ಪಟ್ಟದಾನೆ ಶರಣೆಂದು ಮಸ್ತಕದಮೇಲಿರಿಸಿಕೊಂಡು ಮೂಡಲರಾಜನ ಬೀದಿಯಲ್ಲಿ ಬಂದುದು; ಮನೆಯಲ್ಲಿರಿಸಿ ಬೀಗಮುದ್ರೆಯನ್ನು ಹಾಕಿದರೂ ಇವನು ತಪ್ಪಿಸಿಕೊಂಡು ಬಂದುದು ಇಂಥ ಮೊದಲಾದ ಇವನ ಮಹಿಮೆಗಳು ಹೇಳಿವೆ.
  ಇವನ ಗ್ರಂಥ ಕಾಲಜ್ಞಾನ. ಇದು ಹೊಯ್ಯೊ ಡಂಗುರವ, ಹಾಕೆಲೊ ಮುಂಡಿಗೆಯ, ಕಣಿಯಕೇ೪ರೊ, ಎಚ್ಚರಿಕೆ ಎಚ್ಚರಿಕೆ, ಹೇಗೆಮಾಡಿತೊ, ದಿಮ್ಮೆಸಾಲಾ, ಕುಕ್ಕುಕ್ಕೂ, ಮ್ಯಾ, ರನ್ನದಕೋಲೆ ಎಂದು ಮುಗಿವ ಹಾಡುಗಳ ರೂಪವಾಗಿ ಮುಂದೆ ಬರುವ ಸಂಗತಿಗಳನ್ನು ತಿಳಿಸುವ ಗ್ರಂಥವಾಗಿದೆ.
                ---
            ಚೆನ್ನಬಸವಾಂಕ. ಸು. 1550
  ಈತನು ಮಹಾದೇವಿಯಕ್ಕನ ಪುರಾಣವನ್ನು ಬರೆದಿದ್ದಾನೆ. ಇವನು ವೀರಶೈವಕವಿ; ಇವನ ಪಿತಾಮಹನು ಬಸವಾಂಕ, ಪಿತಾಮಹಿ ಗಂಗಾಂಭ; ತಂದೆ ರುದ್ರಕವಿ ನಾಗಭೂಷಣಾಚಾರ್‍ಯ; ಗುರು ವ್ಯಾಘ್ರಾಜಿನಾಂ ಬರದ ಕಂಥೆಯಚಿದಾನಂದಯತಿಪ ಬಸವರಾಜ. ಪ್ರೌಢದೇವನಿಗೆ ಹೇಮಕೂಟದ ವಿರಕ್ತರ ಗುಣವನರಿಸಿದ ಕರಸಲದ ನಾಗಿದೇವನನ್ನೂ (ಸು. 1430), ಮಲಬಸವಪುರಾಣಕರ್ತೃವಾದ ಕೃಂಗಿರಾಜನನ್ನೂ (ಸು. 1500) ಸ್ಮರಿಸುವುದರಿಂದ ಕವಿಯ ಕಾಲವು ಸುಮಾರು 1550 ಆಗಿರಬಹುದೆಂದು ಊಹಿಸುತ್ತೇವೆ.
 1. Mysore Archelogieal Report for 1917, para 121. ಜಾಂಬೊನದಾದಿ ಕೋ ದಂಶಜಂಬುನಾಥಪ್ರಭಾವತ‍ಃ | ಪಾಪ್ತಕಾಲಯೋದಂತಪರಿಪರಿಜ್ಞಾನಯ ಧೀಮತೇ ||