ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ಕನಕದಾಸ. 237
ತ್ತ್ರಿವಳಿ ಕಲ್ಲೋಲ ಸುಳು ನಾಭಿ ಕಂಧರ ಕಂಬು |
ಜವಳಿಮೊಲೆಗಳ್ ಸಲಿಲಕುಂಭಿಕುಂಭಗಳು ಚೆಮ್ಮಳಲದಿಂಟೆ ಘನಜಘನ ||
ಕುವಲಯಾಂಬಕಿಯೆಸೆವ ಕಣ್ಗಳೆಳರ್ಮೀ ಮಿರುಪ |
ಪವಳ ಚೆಂದುಟಿ ಚರಣ ಕೂರ್ಮ ರದನಂ ರತ್ನ |
ನಿವಹಮೆಂದೆನೆ ಮಹಾದೇವಿ ರಾಜಿಸಿದಳತಿಶೃಂಗಾರಶರಧಿಯಂತೆ ||
ಅತ್ತಿತ್ತ ಚಲಿಸುವ ಜನರ ದಿಟ್ಟಿಗಳ ತ | ನ್ನತ್ತಲೆಳೆವ ಮಿಂಚಿನಂತೆ |
ತತ್ತರುಣಿಯ ದಿಟ್ಟಿವೆಳಗೆಳೆದತ್ತು ತ | ನ್ನತ್ತೆಲ್ಲ ಜನರ ದಿಟ್ಟಿಗಳ||
ಶಾಲಿವನ
ಬಿತ್ತುವಂಕುರದೋರ್ಪ ಪಚ್ಚೆಲೆ | ಗುತ್ತುರಿನಗಳೆ ಮಿಳಿರ್ವ ಬಿರುವಡೆ |
ಯೊತ್ತೆಸೆವ ಪೂದೋರುವಿನಿವಾಲ್ದುಂಬುವವಲಪ್ಪ ||
ಬಿತ್ತುಬಲಿವರಿವಡೆವ ನಿಡುನಿಧಿ | ಯೊತ್ತರಿಪ ಸಾಳಿಯ ಪೊಲಂಗಳ್ |
ಬಿತ್ತರಂಬಡೆದಿಹುವು ಬಿತ್ತಿದ ಬೀಳ್ವೊಲಗಳಲ್ಲಿ ||
---
ಕನಕದಾಸ. ಸು 155೦
ಈತನು ಮೋಹನತರಂಗಿಣಿ, ರಾಮಧಾನ್ಯಚರಿತ್ರೆ, ನಳಚರಿತ್ರ, ಹರಿಭಕ್ತಿಸಾರ ಈ ಗ್ರಂಧಗಳನ್ನು ಬರೆದಿದ್ದಾನೆ. ಅಲ್ಲದೆ ವಿಷ್ಣುಸ್ತುತಿರೂ ಪವಾದ ಹಲವು ಹಾಡುಗಳನ್ನೂ ಬರೆದಿದ್ದಾನೆ. ನೃಸಿಂಹಸ್ತವ ಎಂಬ ಒಂದು ಸಣ್ಣ ಸಾಂಗತ್ಯ ಗ್ರಂಥದಲ್ಲಿ (97 ಪದ್ಯ) ಮೊದಲು ಕಾಗಿನೆಲೆಯ ರಂಗನಮೇಲೆ ಮಂಗಳವೂ ಅನಂತರ ರಾಮಾನುಜಸ್ತುತಿಯೂ ಇರುವುದರಿಂದ ಇದೂ ಏತತ್ಕೃತವಾಗಿರಬಹುದೆಂದು ತೋರುತ್ತದೆ. ಇವನು ಪ್ರಾಯಿಕವಾಗಿ ಕಾಗಿನೆಲೆಯ ಆದಿಕೇಶವದೇವರ ಅಂಕಿತದಲ್ಲಿ ತನ್ನ ಗ್ರಂಥಗಳನ್ನು ಬರೆದಿರುವುದರಿಂದ ಧಾರಾಡಜಿಲ್ಲೆಯ ಕಾಗಿನೆಲೆ ಈತನ ಸ್ಥಳವೆಂದು ತೋರುತ್ತದೆ. ಇವನು ಬೇಡರವನೆಂದೂ ಧಾರವಾಡ ಜಿಲ್ಲೆಯ ಕೊಡತಾಲ್ಲೂಕು ಬಾಡ ಎಂಬ ಗ್ರಾಮದಲ್ಲಿ ಹುಟ್ಟಿ ಕಾಗಿನೆಲೆಯ ಆದಿಕೇಶವದೇವಸ್ಥಾನದಲ್ಲಿ ಸತ್ತನೆಂದೂ ಹೇಳುತ್ತಾರೆ, ರಾಮಾನುಜಗುರುವನ್ನೂ ತಾತಾಚಾರ್ಯನನ್ನು ಸ್ತುತಿಸಿರುವುದರಿಂದ ಶ್ರೀವೈಷ್ಣವರ ಶಿಷ್ಯನಾಗಿ ಸ್ಟಂತೆತೋರುತ್ತದೆ. 'ವಾಲ್ಮೀಕಿವ್ಯಾಸಪುರಾಣಂಗಳ ಕನ್ನಡಿಸಿದ ಕವಿವರರ'