ಈ ಪುಟವನ್ನು ಪರಿಶೀಲಿಸಲಾಗಿಲ್ಲ.
238 ಕರ್ಣಾಟಕ ಕವಿಚರಿತೆ [16 ನೆಯ
ಸ್ತುತಿಸಿರುವುದರಿಂದ ಕುಮಾರವ್ಯಾಸ (ಸು. 143೦) ಕುಮಾರವಾಲ್ಮೀಕಿ (ಸು. 15೦೦) ಇವರುಗಳ ಕಾಲಕ್ಕೆ ಈಚೆಯವನು ಎಂಬುದು ಸ್ಪಷ್ಟವಾಗಿದೆ; ಸುಮಾರು 155೦ ರಲ್ಲಿ ಇದ್ದಿರಬಹುದು. ಈತನು ಅಂಡೆ ಕುರುಬ ಜಾತಿಯವನೆಂದೂ ವ್ಯಾಸರಾಯನ (ಸು. 1525) ಸೇವೆಯನ್ನು ಮಾಡಿ ಜ್ಞಾನಿಯಾದನೆಂದೂ ಕೆಲವರು ಹೇಳುತ್ತಾರೆ.
ಇವನ ಗ್ರಂಥಗಳಲ್ಲಿ 1. ಮೋಹನತರಂಗಿಣಿ
ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 42, ಪದ್ಯ 2705. ಇದಕ್ಕೆ ಕೃಷಚರಿತ ಎಂಬ ಹೆಸರೂ ಉಂಟು. ಇದರಲ್ಲಿ ಮನ್ಮಥದಹನ, ಕಾಮೋತ್ಪತ್ತಿ, ಶಂಬರಾಸುರವಧೆ, ಅನಿರುದ್ಧನ ಲೀಲೆ, ಬಾಣಾಸುರವಿಜಯ ಮುಂತಾದ ವಿಷಯಗಳು ಹೇಳಿವೆ. ಈ ಗ್ರಂಥದ ಉತ್ಕೃಷ್ವತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ-
ರಸಿಕರ ಕರ್ಣಯುಗ್ಮವ ಪೊಕ್ಕು ಮುದದಿ ಹೃ| ದ್ಬಿಸಜವನಲರಿಚಿ ಮೈಗೆ | ಎಸವ ಪುಳಕದೊಸಗೆಯನಿತ್ತು ಶಿರವ ತೂ | ಗಿಸುವುದೀವಚನಾರಚನ || ಹರಿಶರಣರ ಪೆರ್ಚು ಬುಧಜನರಿಗೆ ಮೆಚ್ಚು | ದುರಿತಾಟವಿಗೆ ಕಾಳ್ಕುಚ್ಚು | ವಿರಹಿಗಳಿಗೆ ಮಚ್ಚು ವೀರರ್ಗೆ ಪುಚ್ಚು ಕೇ | ಳ್ವರಿಗಿದು ತನಿಬೆಲ್ಲದಚ್ಚು || ಗ್ರಂಥಾವತಾರದಲ್ಲಿ ರಾಮಾನುಜಸ್ತುತಿಯೂ, ತಾತಾಚಾರ್ಯಸ್ತುತಿಯೂ ಇವೆ. ಬಳಿಕ ಕವಿ ಶಿವ, ಬ್ರಹ್ಮ, ಕಾಗಿನೆಲೆಯರಂಗ, ಕೃಷ್ಣ, ಲಕ್ಷ್ಮಿ, ಕಾಶೀವಿಶ್ವನಾಥ, ಪಾರ್ವತಿ, ಸರಸ್ವತಿ, ಗಣೇಶ, ಆಂಜನೇಯ, ಗರುಡ, ಆದಿಶೇಷ, ಅಷ್ವದಿಕ್ಪಾಲಕಮನುಮುನಿಜನರು ಇವರುಗಳನ್ನು ಸ್ತುತಿಸಿ ಅನಂತರ ಬಲಿಪ್ರಹ್ಲಾದನಾರದವಿಭೀಷಣಧ್ರುವನಾರ್ಥವಿದುರಾ ಕ್ರೂರಭೀಷ್ಮಶುಕಶೌನಕಪುಂಡರೀಕಾದ್ಯರನ್ನೂ ಸ್ಮರಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ- ದ್ವಾರಕೆ ದಂಡ ಸನ್ಯಾಸಿವರ್ಗದಲುಂಟು ಪುನರಪಿ | ದಂಡ ಗೋಪಾಲರಲುಂಟು | ದಂಡ ಪುಂಡ್ರೇಕ್ಷು ವಾಟಿಯಲುಂಟು ಮಿಕ್ಕಿನ | ದಂಡ ದೇಶಂಗಳಲಿಲ್ಲ || ಸೂರ್ಯಾಸ್ತ ಅಣೆಯಟ್ಟಿ ಖಳರ ಖಂಡಿಸಿ ರಕುತವ ಕೆಂ। ದೋಣಿಯೊಳು ತೊಳೆದು ಚಕ್ರವನು