ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಕನಕದಾಸ. 239

ಒಳೆಯೊಳು ಕೃಷ್ಣ ಬೈಚಿಡುವಂತೆ ಪಡುವೆಟ್ಟ| ಮಳೆಯೊಳು ರವಿ ಮುಳುಗಿದನು||

                  ಹಿಮವತ್ಪರ್ವತ

ಜಡರಾವಣನಿಂದ ಲಘುವಾದುದಲ್ಲ ಪೆ | ರ್ಗಡೆಗೋಲಾಗಿರ್ದುದಲ್ಲ |

ಮೃಡಕಾರ್ಮುಕವಾದುದಲ್ಲವೆಂದೆನೆ ರಮ್ಯ |ವಡೆದಿರ್ದುದಾಕುಳಿರ್ವೆಟ್ಟ||

                  ಬಾಣನ ಶಿವಪೂಜೆ 

ಪಡೆದ ತಾಯಿಲ್ಲ ತಾಯುಳ್ಳರೆ ತಲೆ ಹೀಗೆ | ಜಡೆಗಟ್ಟಿಕೊಂಡು ಮಾಸಿಹುದೇ ||

ಮಡದಿಯರಿಲ್ಲ ಮಂಡೆಯ ಸಿಕ್ಕ ನೋಡುವ| ರೊಡೆಯ ಕೋ ಎನುತ ನೀರೆಳೆದ||

                  2. ರಾಮಧಾನ್ಯಚರಿತ್ರೆ  
  ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ; ಪದ್ಯ 156. ಇದರಲ್ಲಿ ಕವಿ ರಾಮಧಾನ್ಯದ ಎಂದರೆ ರಾಗಿಯ ಉತ್ಕೃಷ್ಟತೆಯನ್ನು ಬಹಳ ಚಮತ್ಕಾರವಾಗಿ ನಿರೂಪಿಸಿದ್ದಾನೆ. ಈ ಧಾನ್ಯಕ್ಕೆ ನರೆದಲೆಗ ಎಂಬ ಹೆಸರೆಂದೂ ಇದಕ್ಕೆ ರಾಮದೇವರು ರಾಘವ ಎಂಬ ತಮ್ಮ ಹೆಸರನ್ನು ಇಟ್ಟುದರಿಂದ ರಾಗಿ ಎಂಬ ಹೆಸರು ಪ್ರಸಿದ್ಧಿಗೆ ಬಂದಿತೆಂದು ಈ ಗ್ರಂಥದಿಂದ ತಿಳಿಯುತ್ತದೆ.
  ಕಧಾಸಾರ-ಶಾಂಡಿಲ್ಯಮುನಿ ಯುಧಿಷ್ಠಿರನಿಗೆ ರಾಮಕಥೆಯನ್ನು ಹೇಳುತ್ತಾನೆ. ರಾವಣವಧಾನಂತರ ಶ್ರೀರಾಮನು ಖುಷಿಗಳ ಆಶ್ರಮಕ್ಕೆ ಬಂದು ಅವರು ಕೊಟ್ಟ ಭಕ್ಷ್ಯಗಳ ರುಚಿಯನ್ನು ನೋಡಿ ಅವರು ಉಪಯೋಗಿಸಿದ ಧಾನ್ಯಗಳನ್ನು ತರಿಸುವಂತೆ ಹೇಳಲು, ನರೆದಲೆಗ, ನೆಲ್ಲು, ಹಾರಕ, ಬರಗು, ಜೋಳ, ಕಂಬು, ಸಾಮೆ, ನವಣೆ, ಗೋಧಿ ಈ ನವಧಾನ್ಯಗಳನ್ನು ತಂದು ಸುರಿದರು. ಇವುಗಳಲ್ಲಿ ಆವುದು ಶ್ರೇಷ್ಠವೆಂದು ಕೇಳಲು ಒಬ್ಬೊಬ್ಬರು ಒಂದೊಂದನ್ನು ಹೊಗಳುತ್ತಾರೆ. ಆಗ ನರೆದಲೆಗನಿಗೂ ವ್ರೀಹಿಗೂ ವಾಗ್ವಾದವಾಗುತ್ತದೆ. ಶ್ರೀರಾಮನು ಅಯೋಧ್ಯೆಯಲ್ಲಿ ದೇವತೆಗಳನ್ನು ಕರೆಯಿಸಿ ಇವುಗಳ ವಿಚಾರಣೆಯನ್ನು ಮಾಡುವಂತೆ ಹೇಳಿ ಎರಡನ್ನೂ 6 ತಿಂಗಳು ಸೆರೆಯಲ್ಲಿಡಿಸಿ ಹೊರಟುಹೋದನು. ಬಳಿಕ ಗೌತಮನು ಅವುಗಳನ್ನು ಕರೆದುಕೊಂಡು ರಾಮಾಸ್ಥಾನಕ್ಕೆ ಹೋಗಲು ಇಂದ್ರನು ವಿಮರ್ಶೆ ಮಾಡಿ ನರೆದಲೆಗೆ ಸಾರಹೃದಯವೆಂದೂ ವ್ರೀಹಿ ನಿಸ್ಸಾರವೆಂದೂ ಹೇಳಿದನು. ಆಗ ಎಲ್ಲರೂ ನರೆದಲೆಗನಿಗೆ ಬಿರುದುಗಳನ್ನು ಕೊಟ್ಟರು. ಶ್ರೀರಾಮನು ಅದನ್ನು ಕರೆದು ರಾಘವ ಎಂಬ ತನ್ನ ಹೆಸರನ್ನು ಕೊಡಲು ವ್ರೀಹಿ ನಾಚಿಕೊಂಡು ಶಿರವ ಬಾಗಿಸಿತು.