ಈ ಪುಟವನ್ನು ಪರಿಶೀಲಿಸಲಾಗಿಲ್ಲ.
$40 ಕರ್ಣಾಟಕ ಕವಿಚರಿತೆ. [16 ನೆಯ
ಗ್ರಂಥಾವತಾರದಲ್ಲಿ ಚೆನ್ನಿಗರಾಯನ ಸ್ತುತಿ ಇದೆ. ಈ ಗ್ರಂಥದಿಂದ ನರೆದಲೆಗನಿಗೂ ವ್ರೀಹಿಗೂ ನಡೆದ ವಾಗ್ವಾದರೂಪವಾದ ಕೆಲವು ಪದ್ಯಗಳನ್ನು ತೆಗೆದುಬರೆಯುತ್ತೇವೆ-
ವ್ರೀಹಿಯ ಮಾತು
ಕ್ಷಿತಿಯಮರರುಪನಯನದಲಿ ಸು | ವ್ರತಸುಭೋಜನಗಳಲ ಮಂತ್ರಾ |
ಕ್ಷತೆಗಳಲಿ ಶುಭಶೋಭನದಲಾರತಿಯ ಬೆಳಗುವಲಿ ||
ಕ್ರತುಗಳೆಡೆಯೊಳಗರಮನೆಗಳಲಿ | ಪ್ರತಿದಿನವು ರಂಜಿಸುತ ದೇವರಿ |
ಗತಿಶಯದ ನೈವೇದ್ಯವಾಗಿಹೆನೆಂದನಾವ್ರಿಹಿಗ ||
ಜನಪರಿಗೆ ಶಿಶುಗಳಿಗೆ ಬಾಂಧವ | ಜನರೆಡೆಗೆ ಬ್ರಾಹ್ಮರ ಸಮಾರಾ |
ಧನೆಗೆ ವಿದ್ಯಾರಂಭಕಲಿಸುವ ಸಕಲಭೂಸುರರ ||
ಮನೆಗಳಲಿ ಹರಿದಿವಸದೌಪಾ | ಸನಗಳಲಿ ತಾ ಯೋಗ್ಯ ನಹುದೆ೦|
ದೆನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೊಲಗೆಂದ ||
ಹೊಸಮನೆಯ ಪುಣ್ಯಾರ್ಚನೆಗೆ . | ... ಹಸುಮಕ್ಕಳಿಗೆ ಸೇಸೆಗೆ |
ವಸುಮತೀಶರ ಗರುಡಿಯಲಿ ಶಸ್ತ್ರಾಸ್ತದರ್ಚನೆಗೆ ||
ಎಸೆವ ವಿಪ್ರರ ಫಾಲದಲಿ ರ೦ | ಜಿಸುತ ಗಂಧಾಕ್ಷತೆಯಹೆನು ಭಾ |
ವಿಸಲು ಲೋಕದೊಳಾರು ಸರಿ ತನಗೆಂದನಾವ್ರಿಹಿಗ ||
ನರೆದಲೆಗನ ಮಾತು
ಸತ್ವಹೀನರ ಒಡವರನು ಕ | ಣ್ಣೆತ್ತಿ ನೋಡೆ ಧನಾಢ್ಯರನು ಬೆಂ |
ಬತ್ತಿ ನಡೆವೆಯುಪೇಕ್ಷೆ ನಿನ್ನದು ಪೇಳೇಲೇನದನು ||
ಹೆತ್ತ ಬಾಣತಿಯರಿಗೆ ರೋಗಿಗೆ | ಪಧ್ಯಪಾನದಿ ಹೆಣದ ಬಾಯಿಗೆ |
ತುತ್ತು ನೀನುಹೆ ನಿನ್ನ ಜನ್ಮ ನಿರರ್ಧಕರವೆಂದ ||
ಮಳೆದೆಗೆದು ಬೆಳೆಯಡಗಿ ಕ್ಷಾಮದ | ವಿಳಯಕಾಲದೊಳನ್ನವಿಲ್ಲದೆ |
ಯಳುವ ಪ್ರಾಣಿಗಳಾದರಿಸಿ ಸಲಹುವೆನು ಜಗವಳೆಯ ||
ಎಲವೊ ನೀನೆಲ್ಲಿಹೆಯೊ ನಿನ್ನಯ | ಬಳಗವದು ತಾನೆಲ್ಲಿಹುದೊ ಈ |
ಹಲವುಧಾನ್ಯಗಳೆನಗೆ ಸರಿಯಲ್ಲೆಂದ ನರೆದಲೆಗ ||
ಸತ್ತವರ ಪ್ರತಿಬಿಂಬರೂಪನು | ವಿಸ್ತರಿಸಿ ಪಿತೃನಾಮಗಳ ನಿನ |
ಗಿತ್ತು ಮೂವರ ಪೆಸರಿನಲಿ ಕರೆಕರೆದು ದರ್ಭೆಯಲಿ ||