ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ 241

                             ಕನಕದಾಸ
          ನೆತ್ತಿನೆತ್ತಿಯ ಬಡಿದು ಕಡೆಯಲಿ | ತುತ್ತನಿಡುವರು ಶಿಶುಗಳಿಗೆ ನೀ |
          ನೆತ್ತಿದೆಯಲಾ ತನುವ ಸುಡಬೇಕೆಂದ ನರೆದಲೆಗ ||
                          3 ನಳಚರಿತ್ರೆ 
   ಇದು ಭಾಮಿನೀಪಟ್ಟದಿಯಲ್ಲಿ ಬರೆದಿದೆ, ಸಂಧಿ 9, ಪದ್ಯ 481. ಯದ್ಯಪಿ ಈ ಗ್ರಂಥದಲ್ಲಿ 
   ಕನಕದಾಸನ ಹೆಸರಿಲ್ಲವಾದರೂ, ಆತನ ಇತರ ಗ್ರಂಥಗಳಂತೆ ಆರಂಭದಲ್ಲಿ ಚನ್ನಿಗರಾಯಸ್ತುತಿಯೂ 
   ಚೆನ್ನಿಗರಾಯನ ಅಂಕಿತವೂ ಇರುವುದರಿಂದ ತತ್ಕ್ರತವೆ೦ದೇ ತೋರುತ್ತದೆ ಹಾಗೆಯೇ ಜನಗಳಲ್ಲಿ 
   ಪ್ರತೀತಿಯೂ ಇದೆ. ರೋಮಶಮುನಿ ಧರ್ಮರಾಯನಿಗೆ ಹೇಳಿದ ನಳ ಮಹಾರಾಯನ ಚರಿತೆಯನ್ನು 
   ಕವಿ ಕನ್ನಡಿಸಿದಂತೆ ಹೇಳುತ್ತಾನೆ. ಗ್ರಂಧಾ ವತಾರದಲ್ಲಿ ಚೆನ್ನಿಗರಾಯ, ಗಣೇಶ, ಸರಸ್ವತಿ ಇವರುಗಳ 
   ಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
                           ದಮಯಂತಿ 
       ನುಡಿಗೆ ಶುಕಪಿಕ ನೆಲಿಯೆ ಮಿಗೆ ಸೆಳೆ | ನಡು ಒಳುಕ್ಕೆ ವೃತ್ತಸ್ತನೆಕೆ ಸೋ | 
       ರ್ಮುಡಿಯ ಭಾರಕೆ ಕೊರಳು ಕೊಂಕಲು ಮೆಲ್ಲಡಿಯನಿಡುತ ||
       ಕುಡಿತೆಗಂಗಳ ನೋಟ ಕಾಮು೯ಗಿ | ಲೊಡೆದು ಮಿಂಚುವ ಮಿಂಚಿನಂದದಿ |
       ಸಡಗರದಿ ಒರುತಿರ್ದಳ೦ಗನೆ ಹೊಹಿ » ಬೀದಿಯಲ ||
           ಕಾರ್ಕೋಟಕನು ಕಚ್ಚಿದಮೇಲೆ ನಳನ ರೂಪ 
           ದೊಡ್ಡ ಹೊಟ್ಟೆಯ ಕೂನುಬೆನ್ನಿನ | ಅಡ್ಡ ಮೋರೆಯ ಗಂಟುಮೂಗಿನ |
           ಮೊಂಡುಕೈಕಾಲುಗಳ ಉದುರಿದ ರೋಮಮಾಸೆಗಳ ||
           ಜೆಡ್ಡು ದೇಹದ ಗುಜ್ಜುಗೊರಲಿನ | ಗಿಡ್ಡು ರುಪಿನ ಹಕುಗಡ್ಡದ || 
           ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ ||
           
                            ಸ್ತ್ರೀಗರ್ಹಣ 
  ಕಪಟವನು ಬಿಡರಾತ್ಮ ಬುದ್ದಿಯೊ | ಳುಪಮೆಗಾಣದೆ ನುಡಿದು ಹೊಳೆವರು | 
  ಚಪಲಚಿತ್ತದಿ ಮನವ ವಂಚಿಸಿ ಮಾತನಾಡುವರು ||
  ಗುಪಿತಕಳವಡರಾಪ್ತರೊಡವೆಯ | ನಪಹರಿಸಿ ಸಾಹಸದಿ ಮೆ ಹಿತವರು | 
  ನಿವುಣೆಯರಿಗಿದು ಸಹಜಗುಣವಮನರೇಂದ್ರ ಕೇಳೆಂದ ||

31