ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

242 [18ನೆಯ

                    ಕರ್ಣಾಟಕ ಕವಿಚರಿತೆ.
ಸಾವಿಗೆಣಿಸರು ಮನದಿ ಸತ್ಯವ | ಭಾವಿಸರು ಹುಸಿಯೆಲುಪುದೋರುವ | 
ರಾವಪರಿಯಲಿ ಹೃದಯಗೊಡರನೃ‍ತಗಳನಾಡುವರು || 
ವಾವಿವರ್ತನವಿಲ್ಲ ಸತ್ಯಕೆ | ಪಾವಕನ ಮುಟ್ಟುವರು ಸತಿಯರ |
ನಾವಪರಿಯಲಿ ನಂಬಬಹುದೈಯೆನುತ ಹೂವ೦ಟ ||
                      4 ಹರಿಭಕ್ತಿಸಾರ
ಇದು ಭಾಮಿನೀಪಟ್ಟದಿಯಲ್ಲಿ ಬರೆದಿದೆ; ಪದ್ಯ 110. ಪ್ರತಿಪದ್ಯವೂ ರಕ್ಷಿಸು ನಮ್ಮನನವರತ' ಎಂದು 
ಮುಗಿಯುತ್ತದೆ. ಇದು ನೀತಿ, ಭಕ್ತಿ, ವೈರಾಗ್ಯ ಇವುಗಳನ್ನು ಬೋಧಿಸುವ ಗ್ರಂಥ. ಬಾಲ್ಯಪಾಠಕ್ಕೆ ಇದನ್ನು 
ಉಪಯೋಗಿಸುವ ವಾಡಿಕೆ ನಮ್ಮಲ್ಲಿ ಪೂರ್ವದಿಂದಲೂ ಇದೆ. ಈ ಗ್ರಂಥವನ್ನು ಶ್ರೀಪುರದ 
ಆದಿಕೇಶವಮೂರ್ತಿಗೆ ಅಂಕಿತವಾಗಿ ಕವಿ ಬರೆದಿದ್ದಾನೆ. ಗ್ರಂಥಾವತಾರದಲ್ಲಿ ಸುರಪುರನಿಲಯ 
ಚೆನ್ನಿಗರಾಯನ ಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ-
       ದೀನ ನಾನು ಸಮಸ್ತಲೋಕಕೆ | ದಾನಿ ನೀನು ವಿಚಾರಿಸಲು ಮತಿ |
       ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು || 
       ಏನ ಬಲ್ಲೆನು ನಾನು ನೆವ ಸು | ಜ್ಞಾನಮೂರುತಿ ನೀನು ನಿನ್ನ ಸ | 
       ಮಾನರುಂಟೇ ದೇವ ರಕ್ಷಿಸು ನಮ್ಮನನವರತ ||
       ಪೇಬಿ ಲೆನ್ನಳವಲ್ಲವೀಯಮ | ನಾಳುಗಳು ನೆಯಂಗದೇಶವ |
       ಧಾಮಾಡುವರಕಟಕಟ ಸೆವಸೂಗಳ ಹಿಡಿದು ||
       ಕಾಟುಮಾಡುವರಿನ್ನು ತನುವಿದು | ಬಾಟಿಲರಿಯದು ಕೋಟೆಯವರಿಗೆ | 
       ಕೋಳುಹೋಗದಮುನ್ನ ರಕ್ಷಿಸು ನಮ್ಮನನವರತ || 
       ಎತ್ತಿದೆನು ನಾನಾಶರೀರವ | ಹೊತ್ತು ಹೊತ್ತಲಸಿದೆನು ಸಲೆ ಬೇ |
       ಸತ್ತು ನಿನ್ನಯ ಪದವ ಕಾಣದೆ ತೋಟಲಿ ಒಟಲಿದೆನು ||
       ಸತ್ತು ಹುಟ್ಟುವ ಹುಟ್ಟಿ ಹಿಂಗುವ | ಸುತ್ತು ತೊಡಕನು ಮಾಣಿಸೆಲೆ ಪುರು |
       ಷೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ |
       ಎಂಜಲೆಂಜಲು ಎಂಬರಾನುಡಿ | ಎಂಜಲಲ್ಲವೆ ವಾರಿ ಜಲಚರ | 
       ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೇ || 
       ಎಂಜಲೆಲ್ಲಯದೆಲ್ಲಿಯುಂ ಪರ | ರೆಂಜಲಲ್ಲದೆ ಬೇಳ ಭಾವಿಸ ||