ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶತಮಾನ] ಸಾಳ್ವ, 243

ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ ||
          5 ಹಾಡುಗಳು 
  ಈತನ ಹಾಡುಗಳಲ್ಲಿ ಒಂದೆರಡನ್ನು ತೆಗೆದು ಬರೆಯುತ್ತೇವೆ.

ಪಲ್ಲವಿ|| ನಾರಾಯಣ ನಿಮ್ಮ ನಾಮಂಗಳಿರುತಿರೆ|ಬೇಂಱೊಂದುನಾಮವಿನ್ನೇಕಯ್ಯ|| ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆ | ಬೆಟ್ಟವ ಬಳಸುವುದೇಕಯ್ಯ | ಅಷ್ಟೈಶ್ವರ್ಯವು ಅಮೃತಾನ್ನ ವಿರುತಿರೆ | ಬಿಟ್ಟಿಕೂೞನೆ ತಿನಲೇಕಯ್ಯ ||1|| ಪರುಸದ ಪಾಳಂಗಳಿರುತಿರೆ ಬೀದಿಯ | ಜರಗನು ತೊಳೆಯಲಿನ್ನೇಕಯ್ಯ ಹರಿವಾಣದಲ್ಲಿ ಅಮೃತಾನ್ನ ವಿರುತಿರೆ | ತಿರುಪಗೂೞ ತಿನಲೇಕಯ್ಯ ||2|| ಬಲ್ಲವು ಕರದೊಳಗಿರುತಿರೆ ಕಾಡು | ಗಲ್ಲನು ಕಡಿಯಲಿನ್ನೇಕಯ್ಯ | ಬಲ್ಲಿದ ಬಿಡದಾದಿಕೇಶವನಿರುತಿರೆ | ಎಲ್ಲದೈವದ ಹಂಬಲೇಕಯ್ಯ ||3|| ಪಲ್ಲವಿ| ನಾನು ನೀನು ಎನ್ನದಿರೊ ಹೀನಮಾನವ ನಿನ್ನ | ಸ್ಧಾನಸ್ಧಾನದಲ್ಲಿ ನೀನು ತಿಳಿದು ನೋಡೆಲೋ || ಅನ್ನದಿಂದಬಂದ ಕಾಮ ನಿನ್ನದೇನೆಲೋ|ಕರ್ಣದಲ್ಲಿವೋಪ ಪ್ರಾಣ ನಿನ್ನ ದೇನಲೋ|| ಹೊನ್ನು ಹೆಣ್ಣು ಮಣ್ಣು ಮೂಱು ನಿನ್ನದೇನೆಲೋ | ಬಣ್ಣ ಗೆಟ್ಟು ಬಾೞ್ವ ಜೀವ ನಿನ್ನ ದೇನೆಲೋ ||2|| ಕೀಲುಬಿಗಿದ ನರದ ಬೊಂಬೆ ನಿನ್ನ ದೇನೆಲೋ | ಬಾಲ ಆದಿಕೇಶವರಾಯನ ಭಕ್ತ ನಾಗೆಲೋ ||3||

        ನಾಳ್ವೆ. ಸು. 1550 
 ಈತನು ಭಾರತ, ರಸರತ್ನಾಕರ, ವೈದ್ಯಸಾಂಗತ್ಯ ಇವುಗಳನ್ನು 

ಬರೆದಿದ್ದಾನೆ. ಶಾರದಾವಿಲಾಸವೂ ಏತತ್ಕೃತವೆಂದೇ ತೋರುತ್ತದೆ. ಇವನು ಜೃನಕವಿ; ಇವನ ತಂದೆ ಧರ್ಮಚಂದ್ರ,'ಗುರು ದೇಶಿಗ ಣದ ವಿಜಯಕೀರ್ತಿಯ ಮಗ ಶ್ರುತಕೀರ್ತಿ', ಇವನ ಭಾರತದಿಂದ ಇವನ ಪೋಷಕನ ವಿಷಯವಾಗಿ ಈ ಅಂಶಗಳು ತಿಳಿಯುತ್ತವೆ.

 ತೌಳವಹೈವಕೊಂಕಣದೇಶದಧಿನಾಧನೂ ಲಕ್ಷ್ಮಿಯ ಪುತ್ರನೂ ಅಭಿನವನಿಂ ಬನೂ ಆದ ಮಹಾಮಂಡಲೇಶ್ವರಭೈರವರಾಯನು ನಗಿರನಗರದಲ್ಲಿ ಆಳುತ್ತಿದ್ದನು. 

ಇವನ ಮಹಿಷಿ ನಾಗಲಾಂಬಿಕೆ, ಮಗ ಸಂಗನೃಪ, ಭೈರವರಾಜನ ಕಾಲವಾದ