ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಬಸವ. 269

  ಪ್ರೇಮದಿಂ ಕಾಕೊಳಲಧಿಪ ರಾಮೇಂದ್ರ | 
  ಭೂಮಿಾಶ್ವರನೊರೆದನು || 

ಎಂಬ ಪದ್ಯದಲ್ಲಿ ಹೇಳಿದ್ದಾನೆ. ಆರಂಭದಲ್ಲಿ ಕಾಕೊಳಲ ಸೋಮೇಶ್ವರ ದೇವರ ಸ್ತುತಿ ಇದೆ. ಈ ಗ್ರಂಥದಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ--

          ಕಾಕೊಳಲ ಸೋಮನಾಥಸ್ತುತಿ ಶ್ರೀಮದಶೇಷಪಂಕಜಭವಾಂಡಗಳೆಲ್ಲಕೆ ಸೌಖ್ಯಗರ್ಭವೇ | 

ದಾಮಮೆನಲ್ಕೆ ಕಲ್ಪಿಸಿದೆ ವಿಷ್ಣು ಪಿತಾಮಹಶಕ್ರವಂದ್ಯ ಚಿ || ನ್ಯಾಮವಿಶೇಷ ಕಾಕೊಳಲದಿವ್ಯನಿವಾಸದ ಸೋಮನಾಥ ನೀಂ|ರಾಮನೃಪಾಲನಿಷ್ಟವೆನಿಪೀಕೃತಿಗೀವುದು ಯುಕ್ತಿಯೇಳ್ಗೆಯಂ |

             ___________
             ಬಸವ. ಸು- 1550
ಈತನು ಚಿಕ್ಕಯ್ಯನಸಾಂಗತ್ಯವನ್ನು ಬರೆದ್ದಾನೆ. ಇವನು ವೀರಶೈವಕವಿ. ಇವನಿಗೆ ಚೆನ್ನಬಸವ ಎಂಬ ಹೆಸರೂ ಇದ್ದಂತೆ ತಿಳಿಯುತ್ತದೆ. ಇವನ ಗುರು ಕುಪ್ಪಸಗಂತೆಯ ಗಂಗಾಧರಪ್ರಭು. ಕವಿಯ ಕಾಲವು ಸುಮಾರು 1550 ಆಗಿರಬಹುದೆಂದು ತೋರುತ್ತದೆ.
    ಇವನ ಗ್ರಂಥ
             ಚಿಕ್ಕಯ್ಯನ ಸಾಂಗತ್ಯ 
   ಸಂಧಿ 4, ಪದ್ಯ 830. ಇದಕ್ಕೆ ಭಕ್ತಿಮೋಹನಸಾರ ಎಂಬ ಹೆಸರೂ ಉಂಟು. ಇದರ ಕಥಾಗರ್ಭವನ್ನು ಕವಿ ಈ ಪದ್ಯಗಳಲ್ಲಿ ಸೂಚಿಸಿದ್ದಾನೆ-

ಈಕೃತಿ ಚೋರಚಿಕ್ಕಯ್ಯನು ಬಸವನ | ತಾ ಕೊಲ್ವೆನೆಂದೈತಂದು | ವ್ಯಾಕುಲರಹಿತನಾಗಿಯೆ ಮುಕುತಿಯ ಪಡೆ | ದಾಕಧೆಯನು ಬಣ್ಣಿಪುದು || ಪೃಧ್ವಿಗುತ್ತರದಲ್ಲಿ ಜೋರಚಿಕ್ಕಯ್ಯನು | ಶಿತಿಕಂಠನ ಭಕ್ತನಾಗಿ | ಸತಿಯ ಕಣ್ಬೇಟಕ್ಕೆ ಸಿಕ್ಕದೆ ಸಿರವಿತ್ತ | ಕಥೆಯಸಜ್ಜನರು ಲಾಲಿಪುದು | ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಹೀಗೆ ಹೇಳಿದ್ದಾನೆ-- ಬಲ್ಲರಿಗೀಕೃತಿ ಬೆಲ್ಲದ ಮೂಲೆಯ | ನೆಲ್ಲಿ ಸವಿಯೆ ಮಧುರೆಸವು |