ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ.

                                [16ನೆಯ 

ವಸುಧೆಯೊಳ್ ಕವಿ ಚೆನ್ನ ಬಸವನ ಕೃತಿ ಬಲ | ರಸಿಕರ ಕರ್ಣಾಮೃತವ || - ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣೇಶ, ವೀರಭದ್ರ, ಸರಸ್ವತಿ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ

                  ಸ್ತ್ರೀವರ್ಣನೆ 

ನಳಿನಚಂಪಕವಟ್ಟಿ ಪಲಬಾಳೆಬಾವನ್ನ |ವೆಳಲತೆಕುಮುದಕೇತಕಿಯು| ಅಳಿಸಿಕಕೊಳಹಂಸೆ ತಳಿತಿರ್ಪವನದಂತೆ | ಎಳೆಯಳೊರ್ವಳು ರಾಜಿಸಿದಳು || ಅಂಬರಗತ್ತಲೆ ತುಂಬಿದ ಸಸಿಕಳೆ | ಬಿಂಬಕೆ ಕುಮುದಗಳರಳೆ | ಅಂಬುಜ ಮುಗಿದು ರಂಜಿಸುವಿರುಳಂದದಿ | ಸಂಭ್ರಮಿಸಿದಳೊರ್ವ ತರುಣಿ ||

             ಗಂಗಾಧರ ಸು. 1550 

ಇವನು ರಟ್ಟನ ಜಾತಕವನ್ನು ಬರೆದಿದ್ದಾನೆ. ಈತನು ಬ್ರಾಹ್ಮಣ ಕವಿ; ಶ್ರೀವತ್ಸಗೋತ್ರದವನು ; ಕೊಮ್ಮಣ್ಣಾರ್ಯನು ; ನರಸಿಂ ಹನ ತಮ್ಮನು, ಇವನಿಗೆ ಕವಿತಾಮನೋಹರ ಎಂಬ ಬಿರುದು ಇದ್ದಂತೆ ತಿಳಿಯುತ್ತದೆ. ಕೆಲವುಕಡೆ ಉಭಯಕವಿತಾರತ್ನ, ಉಭಯಕವಿತಾಭರಣ, ಉಭಯಕವಿತಾರಮಣ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ಇವನು ಸುಮಾರು 1550ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. "

    ಇವನ ಗ್ರಂಥ
               ರಟ್ಟನ ಜಾತಕ
ಇದು ಜ್ಯೋತಿಷಗ್ರಂಥ; ಕಂದವೃತ್ತಗಳಲ್ಲಿ ಬರೆದಿದೆ; 120 ಪದ್ಯ ಗಳಿವೆ. ಇದರಲ್ಲಿ ಪ್ರಶ್ನಭಾಗ, ಗ್ರಹಗಳಿಗೆ ಷಡ್ಬಲ, ಜಾರಪುತ್ರಲಕ್ಷಣ ಆಯುರ್ಧಾಯ ಮುಂತಾದ ವಿಷಯಗಳು ಹೇಳಿವೆ. ಆರಂಭದಲ್ಲಿ ದೇವತಾಸ್ತುತಿ ಏನೂ ಇಲ್ಲ. ವೈದ್ಯ ಜ್ಯೋತಿಷಗ್ರಂಥಗಳೊಳಗೆ ಅಪಶಬ್ದಗಳನ್ನು ನೋಡಕೂಡದು ಎಂದು--

ಪುನರುಕ್ತಮಿದಪಶಬ್ದಮಿ | ದೆನಲಾಗದು ವೈದ್ಯ ಜೋಯಿಸಂಗಳೊಳೆತ್ತಂ ! ಜನಕತಿಹಿತಮಂ ಪ್ರತಿಭೋ | ಧನೆಯಂ ಕೈಕೊಳ್ವುದೆಂದರಾಮುನಿಮುಖ್ಯರ್ || ಎಂಬ ಆದಿಪದ್ಯದಲ್ಲಿ ಹೇಳಿದ್ದಾನೆ, ತನ್ನ ಗ್ರಂಥದ ವಿಷಯವಾಗಿ ಹೀಗೆ ಹೇಳುತ್ತಾನೆ--