ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

974 ಕರ್ಣಾಟಕ ಕವಿಚರಿತೆ. [16 ನೆಯ ರಸಯುಕ್ತಂ ಮೃದುಳಂ ಸುಗಂಧನಿಧಿ ತಾಪಾನ್ಯಂ ಸ್ವಕೀಯೃಕವ || ರ್ಣಸಮುದ್ಭಾಸಿತಚಂಸಕಂ ಪಳೆದುವಾಪೊನ್ನಂ ತದುಧ್ಯಾನದೊಳ್ !! ಕರಡಿ ತಲೆವಾಗುತ್ತಡಿಯಿಟ್ಟು ತೂಂಕಡಿಸುತುಂ ತೂಗುತ್ತೆ ತೇಗುತ್ತುಮಿ | ರ್ಕಲನಂ ನೋಡುತೆ ಜೇನ್ಗಳಿರ್ಪಡೆಗಳಂ ಕಾಣುತ್ತವಂ ಕೊಂಡು ಬಂ ! ದೊಲವಿಂದಂ ಬೆಳವಣ್ಗಳೊಳ್ ಕಲಸುತಿಪ್ಪಾಪೂರ್ತಿ ಯಪ್ಪನ್ನೆಗಂ | ಮೆಲುತಾನಂದಿಸುತಿರ್ಪ ಪೆಗೇ ರಡಿವಿಂಡಿರ್ದುತ್ತು ತನ್ನಿಚ್ಚೆಯಿಂ | ಕೋಡಗ ಬಲ್ಗೊನೆಯೊ೦ದನೇಳೆ ಕುಳಿತಳ್ಕದೆ ನಟ್ಟಿದಿರಲ್ಲಿ ಹೆಣ್ಗಳಂ | ಪಲ್ಗಿರಿದೇಡಿಸುತ್ತೆ ಕಿಳುಕಿಳೆನುತುಂ ಬರಿಯಂ ಒರುಂಟಿ ಪು || ಬ೯ಲ್ಲಿಸಿ ಕಣ್ಗಳಂ ಮುಗಿದು ಝುಮ್ಮನಲರ್ಚುತೆ ಪೆಣ್ಗ ಳಿಟ್ಟ ಕಿ | ರ್ಗಲ್ಗಳನೊಂದಿನಿತ್ತೊಲೆದು ತಪ್ಪುತೆ ಕಾಡಿದುದೊಂದು ಕೋಡಗಂ || ಸೌಂದಯ್ಯ ನಳನಳಿಕೆಯ ಗರಗರಿಕೆಯ | ಕಳಕಳಿಕೆಯ ಗರುವಿಕೆಯ ವಿಡಾಯದ ಗಮಕದ | ಚಳಬಳಿಕೆಯ ಚೆಲ್ವಿಕೆಯೊ | ಬ್ಬುಳಿಯೆಳೆಗಳ ಸೊಬಗು ನೋಡಲತ್ಯಾಶ್ಚರೈಂ || --.- ರತ್ನಾಕರವರ್ಣಿ: 1557. ಈತನು ತ್ರಿಲೋಕಶತಕ, ಅಪರಾಜಿತೇಶ್ವರಶತಕ, ಭರತೇ ಶ್ವರಚರಿತೆ, ಹಾಡುಗಳು ಇವುಗಳನ್ನು ಬರೆದಿದ್ದಾನೆ. ರತ್ನಾಕರಾಧೀ ಶ್ವರಶತಕವನ್ನೂ ಈತನೇ ಬರೆದನೆಂದು ಪ್ರತೀತಿಯಿದೆ, ಆದರೆ ಆಶತ ಕವು ಹಂಸರಾಜನೆಂಬ ಬೇರೆ ಒಬ್ಬ ಕವಿಯಿಂದ ರಚಿತವಾದಂತೆ ಆಗ್ರಂ ಥದಿಂದ ತಿಳಿಯುತ್ತದೆ. ಅಲ್ಲದೆ ರತ್ನಾಕರವರ್ಣಿಯ ಗ್ರಂಥಗಳಲ್ಲಿ ದೊರೆವ ಅಪರಾಜಿತೇಶ್ವರಮಂದರಸ್ವಾಮಿಗಳ ಸ್ತುತಿಯೂ ಚಿದಂಬರಪುರುಷ, ನಿರಂಜನಸಿದ್ದ ಎಂಬ ಅಂಕಿತಗಳೂ ಆಶತಕದಲ್ಲಿ ಇಲ್ಲವಾದುದರಿಂದ ಅದು ಅನ್ಯಕವಿಕೃತವೆಂಬುದು ದೃಢವಾಗುತ್ತದೆ. ಇವನು ಜೈನಕವಿ, ಇವನಿಗೆ ರತ್ನಾಕರಸಿದ್ದ, ರತ್ನಾಕರ ಅಣ್ಣಗಳು ಎಂಬ ಹೆಸರೂ ನಿರಂಜನಸಿದ್ದ ಎಂಬ ಬಿರುದೂ ಇದ್ದಂತೆ ತಿಳಿಯುತ್ತದೆ.