ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ರತ್ನಾಕರವರ್ಣಿ. 273 ತನ್ನನ್ನು ಕ್ಷತ್ರಿಯವಂಶಜನೆಂದು ಕರ್ಣಾಟಕಕ್ಷೇತ್ರಗಳಗಣ್ಣಳೆಂದ, ಧಾತ್ರಿ ನುಡಿವುದು' ಎಂದು ಹೇಳುತ್ತಾನೆ, (ಜನನಮರಣವುಳ್ಳ ಜನಕರ ನಾಮವ ಪೇಟ್ಟಿರುರ್ವಿಯೊಳು; ಶ್ರೀಮಂದರಸ್ವಾಮಿ ನನ್ನಯ್ಯನೆಂದಾನು ಸುಖವಡೆದಿಹೆನು' ಎನ್ನುತ್ತಾನೆ. ಇವನ ಸ್ಥಳ ವೇಣುಪುರ (ಮೂಡ ಬಿದಿರೆ), ದೀಕ್ಷಾಗುರು ದೇಶಿಗಣಾಗ್ರಣಿ ಚಾರುಕೀರ್ತಿಯೋಗಿ, ಮೋಕ್ಷಗುರು ಹಂಸನಾಥ, ಈ ಹಂಸನಾಥನ ಆಜ್ಞೆಯಿಂದ ಭರತೇಶ್ವರಚರಿತೆ ಯನ್ನು ಬರೆದಂತೆ ಹೇಳುತ್ತಾನೆ. ಈ ಗ್ರಂಧವನ್ನು ಬರೆದುದಕ್ಕಾಗಿ ಅನೇಕರು ಸಂತೋಷಿಸಿದರು; ಆದರೆ ನಾ ಲೈಂಟುಮಂದಿ ಪೋಕರು ಬಿಡು ಹೊಸಕವಿತೆಯನು ಎಂದು ಜರೆದು ಹೊಟ್ಟೆಗಿಟ್ಟಿನಿಂದ ಹಿಂಸಿಸಿದರು; ಮಯ್ಯೆಳಗಿದ್ದಾತ್ಮನ ಬತ್ತಲೆಮಾಡಿ ನಾ ( ನೊಯ್ಯನೀಕ್ಷಿಸಿದರೆ ತಾವು! ಮಯ್ಯ ಬತ್ತಲೆಮಾಡಿ ಮನವ ಕತ್ತಲೆವಾಡಿ ಹುಯ್ಯಲಿಡುತ ಸುತ್ತುತಲಿಹರು; ಏನೇ ನುಹೇಳಿದರೂ ಕೇಳದೆ ತಮಗೆ ಕೀರ್ತಿರಾನಿ ರಾಯ್ಕೆಂದು ಬೈದರು; ನಾನು ಸುಮ್ಮ ನಿದ್ದೆನು; ಬುಧರು ರಾಜರುಗಳೇ ಅವರನ್ನು ನೂಕಿಸಿದರು-ಎಂದು ಅಸೂಯಾಪರ ರಿಂದ ತನಗುಂಟಾದ ಕಷ್ಟವನ್ನು ತಿಳಿಸಿದ್ದಾನೆ. ತ್ರಿಲೋಕಶತಕವನ್ನು ' ಮಣಿಶೈಲಂಗತಿಯಿಂದುಶಾಲಿಶಕಕಾಲಂ ಸಂದಿರಲ್ ತೌಳವಾಂಗಣದೊಳ್ ವೇಣುಪುರಾಂಕದೊಳ್ ಸೃಜಿಸಿದಂ ರತ್ನಾಕರಾಗ್ಯಂ' ಎಂಬುದರಿಂದ ಆ ಗ್ರಂಥವನ್ನು ಶಕ 1479 ರಲ್ಲಿ, ಎಂ ದರೆ 1557 ರಲ್ಲಿ, ಬರೆದಂತೆ ತಿಳಿಯುತ್ತದೆ. ಭರತೇಶ್ವರ ಚರಿತೆಯ ಕೊನೆ ಯಲ್ಲಿ ಗ್ರಂಥವು ಪೂರ್ತಿಯಾದಮೇಲೆ ಕೆಲವು ಪದ್ಯಗಳಲ್ಲಿ ಆವನೋ ಒಬ್ಬನು ಶಕ 1582 ಶಾರ್ವರಿಯಲ್ಲಿ ಎಂದರೆ 1660 ರಲ್ಲಿ-ಪ್ರತಿಮಾಡಿ ದಂತೆ (ಲಿಖಿಯಿಸಿದಂ) ಹೇಳಿರುವುದನ್ನು ನೋಡಿ ಇದೇ ಗ್ರಂಥರಚನಾಕಾ ಲವೆಂದು ಕೆಲವರು ಭ್ರಮಿಸಿರುವಂತೆ ತೋರುತ್ತದೆ. ಸುಮಾರು 10,000 ಪದ್ಯಗಳುಳ್ಳ ಈ ದೊಡ್ಡ ಗ್ರಂಥವನ್ನು ಕವಿ 9 ತಿಂಗಳಲ್ಲಿ ರಚಿಸಿದಂತೆ “ವೃಷಭಮಾಸದಿತೊಡಗಿತು ಕುಂಭಮಾಸದಿ ಕೃತಿ ಪೂರ್ಣವಾಯ್ತು” ಎಂಬ ಪದ್ಯಭಾಗದಿಂದ ತಿಳಿಯುತ್ತದೆ. ಆದರೆ ಕವಿ ವರ್ಷದ ಹೆಸರನ್ನು ಹೇಳಿಲ್ಲವಾದುದರಿಂದ ಗ್ರಂಥರಚನಾಕಾಲವು ವ್ಯಕ್ತವಾಗುವುದಿಲ್ಲ. ದೇವಚಂದ್ರನ ರಾಜಾವಳೀ ಕಥೆಯಲ್ಲಿ (1838) ಈ ಕವಿಯ ವಿಷ ಯವಾಗಿ ಹೀಗೆ ಬರೆದಿದೆ.