ಕರ್ಣಾಟಕ ಕವಿಚರಿತೆ
[16 ನೆಯ ತುಳುವದೇಶದ ಮೂಡಬಿದರೆಯೊಳ್ ಸೊಧ್ಯ ವಂಶದರಸುಗಳನ್ವಯದೊಳೆ ದೇವ ರಾಜನ ಪುತ್ರಂಗೆ ಕಡಲಾದಿಪರಮೇಶನ ಪೆಸರಿಡೆ ಬಾಲಕಾಲದೊಳೆ ಕಾವ್ಯಾಲಂ ಕಾರಲಕ್ಷಣಶಾಸ್ತ್ರದೊಳತಿನಿಪುಣನಾಗಿ ಸಾರತ್ರಯಕ್ಕೆ ಕೇಶವವರ್ಯರು ರಚಿಸಿದ ವ್ಯಾಖ್ಯಾನಂಗಳಂ ಕುಂದಕುಂದಾರ್ಯೋಕ್ತ ಅಧ್ಯಾತ್ಮ ಸಿದ್ಧಾಂತಕ್ಕೆ ಪ್ರಭೇಂದುಗಳು ಮಾಡಿದ ಟೇಕಂ ಸಮಾಧಿಶತಕ ಏಕಸಪ್ತತಿ ಸ್ವರೂಪಸಂಭೋಧನೆ ಮೊದಲಾದನೇಕ ಪರಮಾಗಮಂಗಳಂ ಹೃದ್ಗತಮಾಗೆ ತಿಳಿದು ಕವೀಶ್ವರನಾಗಿ ಆ ದೇಶದರಸು ಸೋಮವಂಶದ ಭೈರಸ ಒಡೆಯರ ಸಭೆಯೊಳೆ ಶೃಂಗಾರಕವಿಯೆಂಬ ಪೆಸರಾಂತು ವಿದ್ವಾಂಸರ್ಗಧಿಕನಾಗಿ ಯೋಗರತ್ನಾಕರಶಾಸ್ತ್ರಾಭ್ಯಾಸದಿಂ ದಶವಾಯುಗಳಂ ಸಾಧಿಸಿರ್ದು ರತ್ನಾ ಕರ ನೆಂಬಭಿಧಾನದಿಂ ಪೂರ್ವವಯಸ್ಸಿನೊಳೆ ಭೈರಸಒಡೆಯರ ಪುತ್ರಿ ಮೋಹಿಸೆ ಸೌಧಾಗ್ರ ಮನೇರಿ ವಾಯುಧಾರಣೆಯಂ ಮಾಡಿ ದಶವಾಯುಗಳಂ ಸಾಧಿಸಿ ಯೋಗಾಭ್ಯಾಸ ದೊಳೆ ಪ್ರೌಢನಾಗಿರ್ದುದರಿದಾಕೆಯೊಳತ್ಯಾಸಕ್ತನಾಗಿ ಆಕೆಯಂ ಕೂಡಲು ಸೌಧಾಗ್ರದ ಮೇಖಲೆಯನೇರಿ ವಾಯುಧಾರಣೆಯಿಂ ಗವಾಕ್ಷಗಿಂದೈತ್ತೆ ಅವಳೊಳೆನೇಹಂ ಮಾಡುತ್ತಿರಲ್ ಅರಸನರಿದು ಪಿಡಿಯಲುದ್ಯೋಗಿಸಲ್ ಆ ರಾತ್ರಿಯೊಳೆ ಪೋಗಿ ನಿಜಗುರುವಪ್ಪ ಮಹೇಂದ್ರಕೀರ್ತಿಗಳಿಂದ ಅಣುವ್ರತದೀಕ್ಷೆಗೊಂಡು ಆಗಮಂಗಳೊಳತಿ ನಿಪುಣನಾಗಿ ಅಧ್ಯಾತ್ಮದೊಳಹರ್ನಿಶಂ ಕೂಡಿರೆ, ವಿಜಯಕೀರ್ತಿಗಳೆಂಬ ಪಟ್ಟಾಚಾರ್ಯರ ಶಿಷ್ಯರಾದ ವಿಜಯಣ್ಣಗಳು ದ್ವಾದಶಾನುಪ್ರೇಕ್ಷೆಗಳಂ ಕನ್ನಡದಿಂ ಸಂಗೀತಮಾಗಿ ವೃತ್ತವಚನದೀಂ ಮಾಡಿ ಆನೆಯಮೇಲೆ ಪ್ರಭಾವನೆಯಂ ಮಾಡಿಸಲೀರತ್ನಾ ಕರಾರ್ಯಂ ಭರತೇಶ್ವರಚರಿತಮಂ 84 ಸಂಧಿಯಂ ಮಾಡಿ ಮಾತಂಗಮನೇರಿಸಿ ಮೆರೆಯಿಸವೇ ಳ್ಕೆಂಬುದುಂ ಪಟ್ಟಾಚಾರ್ಯರು ಇದರೊಳೆರಡುಮೂರ್ರವಾಕ್ಯಂ ಪುರಾಣಕ್ಕೆ ವಿರೋ ಧಮಿರ್ಪುದದರಿಂದಾಗದೆಂಬುದುಂ ಅದೆ ಸಂವಾದವಾಗಿ ಚರ್ಚಿಸಿದೊಡೆ ತನ್ನ ತಿರಸ್ಕರಿಸಿ 700 ಶ್ರಾವಕರ ಗೃಹದೊಳ್ ಚರಿಗೆಯಂ ಮಾಡದಿರಲು ನಿಜಾನುಜೆಯಿಂದಾಹಾ ರಮಂ ಕೊಳ್ಳುತ್ತೆ ಕೋಪಮುದಯಿಸಿ ಆತ್ಮಜ್ಞಾನಿಗೆ ಜಾತಿಕುಲಮಾವುದಾದೊಡಂ ಸಮಮೆಂದು ಲಿಂಗಮಂ ಕಟ್ಟಿ ಕೊಂಡು ವೀರಶೈವಶಾಸ್ತ್ರಂಗಳಂ ಬಸವಪುರಾಣಂಮೊ ದಲಾಗೆ ಮಾಡಿ ಕೆಲವು ದಿನದಿಂ ಮೇಲೆ ಉಪಶಮವಂ ತಾಳ್ದು ಸನ್ಮಾರ್ಗದೊಳ್ ನಂಬಿ ನಡೆದಂ, ರತ್ನಾಕರಶತಕಂ, ಅಪರಾಜಿತಶತಕಂ, ತ್ರಿಲೋಕಶತಕಂ, ಅಧ್ಯಾ ತ್ಮಗೀತಂಗಳ್ 2000 ಗ್ರಂಧದಷ್ಟು ಪೇಳಿದಂ ಶಕವರುಷ 1479 ಸಂದಿರ್ದುದು ರಾಜಬಡೆಯರ ಕಾಲವಾದಮೇಲೆ ಚಾಮರಾಜನ ಕಾಲದಲ್ಲಿ ಸಭೆಯಲ್ಲಿ ರತ್ನಾ ಕರಾರವಿರಚಿತ ಭರತೇಶ್ವರಚರಿತೆ 84 ಸಂಧಿಯನೋದಿದರು,