ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ರತ್ನಾಕರವರ್ಣಿ 277 ಇವನ ಗ್ರಂಥಗಳಲ್ಲಿ
1. ತ್ರಿಲೋಕಶತಕ ಇದು ಕಂದದಲ್ಲಿ ಬರೆದಿದೆ; ನಮಗೆ ದೊರೆತ ಎರಡು ಪ್ರತಿಗಳಲ್ಲಿ ಪದ್ಯಸಂಖ್ಯೆ ವ್ಯತ್ಯಾಸವಾಗಿದೆ, ಒಂದರಲ್ಲಿ 113, ಮತ್ತೊಂದರಲ್ಲಿ 128; ಕೊನೆಯಲ್ಲಿ 'ಸಪಾದಶತಕಸ್ಯ ಭದ್ರಂಭೂಯಾತ್' ಎಂಬ ವಾಕ್ಯವಿರುವುದ ರಿಂದ ಎರಡನೆಯ ಸಂಖ್ಯೆಯೇ ಸರಿ ಎಂದು ತೋರುತ್ತದೆ. ಈ ಗ್ರಂಥದಲ್ಲಿ ಜೈನಮತಾನುಸಾರವಾಗಿ ಪ್ರಪಂಚದ ಸ್ಥಿತಿ ಹೇಳಿದೆ. ಗ್ರಂಥವು ನರಕ, ಭವನಲೋಕ, ನರಲೋಕ, ವ್ಯಂತರಲೋಕ, ಜ್ಯೋತಿರ್ಲೋಕ, ಸ್ವರ್ಗ ಲೋಕ, ಭೋಗಭೂಮಿ, ನಿಗೋದ, ಸಿದ್ಧಲೋಕ ಇತ್ಯಾದಿ ವಿಭಾಗಗಳನ್ನು ಒಳಕೊಂಡಿದೆ. ಗ್ರಂಥಾವತಾರದಲ್ಲಿ ಅಪರಾಜಿತೇಶ್ವರಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಲೋಕದ ಆಕಾರ
ಅಡಿ ಚಕ್ಕಳವೆಂಬಂದಂ | ನಡು ಝಲ್ಲರಿಯಂತೆ ಮೇಲೆ ಮದ್ದಳೆಯಂ ನೇ | ರ್ಪಡಿಸಿರಿಸಿದಂತೆ ಮೊದಲಿಂ | ಕಡೆಮುಟ್ಟಲ್ ನೋಡೆ ಲೋಕದಾಕೃತಿಯೆಸೆಗುಂ|| ನರಕ
ಲೋಹದ ಪೆಣ್ಣುತ್ತಳಿಯಂ | ಕಾಹೇರಿಸಿ ಕಾಸಿ ತಂದು ಪರಸತಿಯಿವಳೊಳ್ | ಮೋಹಿಸುತಪ್ಪೆನುತುಂ ಪಿಡಿ | ದಾಹಾದರದರಿಕೆಯವರ್ಗೆ ತಂದಪ್ಪಿಸುವರ್ |
ಮೊರೆಯಿಡುವರ್ ಗೋಳಿಡುವರ | ದರದರನೆಳೆಯಲ್ಕೆ ಹಲ್ಲ ಕಿರಿವರ್ ಮೊರೆವರ್ | ಕಿರಿಕಿರಿದಾಗಿರೆ ಮೆಯ್ಯಂ | ಕೊರೆವಾಗಳ್ ಪುಯ್ಯಲಿಡುವರೇಳ್ವರ್‌ಬೀಳ್ವರ್ || ಚಿದಂಬರಪುರುಷರು ತುಂಬಿದ ಚಿದ್ದು ಣಮಂಬರ | ಮೆಂಬಂದದ ಒಯಲ ರೂಪು ಪುರುಷಾಕಾರಮು | ಮೆಂಬಿವು ಮೂರುಂಟವಗ್ರೆ ಚಿ | ದಂಬರಪುರುಷರ್ಕಳೆಂದು ಸಾರ್ಧಕನಾಮಂ|| ಪಲ್ಯ ಸಾಗರಮಂ ಸುಜ್ಞಾನದಿ | ಭಾಗಿಸಿ ದಶಕೋಟಿಬಾರಿ ಕೋಟೆಯನಿಟ್ಟಾ | ಭಾಗೆಗಳೆಲ್ಲಭೊಳೊಂದೇ | ಭಾಗೆಯ ಕೈಕೊಂಡೊಡೊಂದುಸಲ್ಯ ಮೆನಿಕ್ಕುಂ || 2 ಅಪರಾಜಿತೇಶ್ವರಶತಕ. ಇದು ವೃತ್ತದಲ್ಲಿ ಬರೆದಿದೆ; [27 ಪದ್ಯಗಳಿವೆ; ಪ್ರತಿಪದ್ಯವೂ ಅಪ