278 ಕರ್ಣಾಟಕ ಕವಿಚರಿತೆ. [16 ನೆಯ ರಾಜಿತೇಶ್ವರಾ ಎಂದು ಮುಗಿಯುತ್ತದೆ. ಇದರಲ್ಲಿ ನೀತಿ, ವೈರಾಗ್ಯ, ಆತ್ಮ ವಿಚಾರ ಈಯಂಶಗಳು ಪ್ರತಿಪಾದಿತವಾಗಿವೆ, ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ:- ನುಡಿ ಕಿರಿದಪ್ಪುದೂಟದೊಳರೋಚಕಮಪ್ಸುದು ಬಾಹ್ಯಗೋಷ್ಟಿಯೊಳ್ | ಸಿಡಿಮಿಡಿ ಬಪ್ಪುದಂತೆ ಬಹಿರಂಗದ ನೋಟಕೆ ಕಣ್ಗಳೊಲ್ಲವಾ || ಕಡುಪಿನ ಕಾಲ್ಗಳಾಟವಡಕಕ್ಕೊಳಗಪ್ಪುದು ಬುದ್ಧಿ ಮುಕ್ತಿಯಂ | ತುಡುಕುತುಮಿರ್ಪುದಲ್ತೆ ಪರಮಾತ್ಮರತಂಗಸರಾಜೇಶ್ವರಾ || ಸೊರ್ಕಿ ಶರೀರನಾರಿಧನವೆನ್ನ ವಿವೆಂದವವರಿಲ್ಲಿ ಕಣ್ಮನಂ | ಸಿರ್ಕಿ ವಿವೇಕಿಗಳ್ ನುಡಿದ ಧರ್ಮಮನೊಲ್ಲದೆ ಕೂಳಿ ಕೆರ್ಬಿನೊಳ್ || ಕರ್ಕಶವೃತ್ತಿಯೊಳ್ ನಡೆವ ಕಾಮುಕರಂತಕನೊಯ್ವ ಕಾಲದೊಳ್ | ಮರ್ಕಟನಂತೆ ಪಲ್ಗಿರಿವರೇತರಿ ಬಾಳಿಪರಾಜಿತೇಶ್ವರಾ || ನೋಡುವ ನೋಡಿ ಲಾಲಿಸುವ ಲಾಲಿಸುತಾತ್ಮ ಸುಖಕ್ಕೆ ವಿಸ್ಮಯಂ |ಮಾಡುವ ಮಾಡಿ ಮೆಚ್ಚುವ ನಿಜಾತ್ಮನೊಳಾಗಳೆ ಮೆಚ್ಚು ತೈಕ್ಯದಿಂ || ಕೂಡುವ ಕೂಡಿ ಮೆಯ್ಮ ವೆದು ತನ್ಮಯನಾಗುತೆ ತಾನೆ ತನ್ನೊಳೋ | ಲಾಡುವ ಯೋಗಿಯೇ ಅಮೃತಭಾಗಿಯಲಾ ಅಪರಾಜಿತೇಶ್ವರಾ || ಇಂಗಡಲೊಳ್ ಮುಳುಂಗಿದವೊಲಿರ್ಪುದು ಮೇಘವಡಂಗಿದಚ್ಚವೆ | ಳ್ದಿಂಗಳ ಕಾಂತಿಯೊಳ್ ಬೆರಸಿದಂತೆವೊಲಿರ್ಪುದು ಸಿದ್ದರಾಶಿಯೊಳ್ || ಸಂಗತವಾದವೊಲ್ ಮೆಳೆವುದೃನೊಳಾತ್ಮನ ನಾತ್ಮನಿಂದೆ ಕಂ | ಚಂಗರಿ'ವಂದದಿಂ ನುಡಿಯಲೆನ್ನಳವೇ ಅಪರಾಜಿತೇಶ್ವರಾ || 3. ಭರತೇಶ್ವರಚರಿತೆ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 80, ಪದ್ಯ 9969 ಇದಕ್ಕೆ ಭರತೇಶವೈಭವ, ಭರತೇಶಸಂಗತಿ ಎಂಬ ಹೆಸರುಗಳೂ ಉಂಟು. ಇದ ರಲ್ಲಿ ಪ್ರಥಮತೀರ್ಥಂಕರನಾದ ಪುರುಪರಮೇಶ್ವರನ ಹಿರಿಯಕುಮಾರ ಭರತನು 'ಗಣನೆಯಿಲ್ಲದ ರಾಜ್ಯಸುಖದೊಳೋಲಾಡಿ ಧಾ | ರಿಣಿ ಮೆಚ್ಚೆ ಜಿನಯೋಗಿಯಾಗಿ | ಕ್ಷಣಕೆ ಕರ್ಮವ ಸುಟ್ಟು ಜಿನನಾದ' ವೈಭವವು ಹೇಳಿದೆ. ಗ್ರಂಥಾವತಾರದಲ್ಲಿ ಆದಿನಾಥನ ಸ್ತುತಿ ಇದೆ. ಬಳಿಕ ಕವಿ ನವ ಕೋಟಿ ಮುನಿಗಳು, ಹಂಸನಾಥಗುರು, ಸರಸ್ವತಿ ಇವರುಗಳನ್ನು ಸ್ತುತಿ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೬೩
ಗೋಚರ